ಬಜಪೆ: ಪೆರ್ಮುದೆ ಬೊಳ್ಳುಳ್ಳಿಮಾರು ಗುತ್ತಿನ ಗಡಿಕಾರರ ಗಡಿ ಪ್ರದಾನ ಕಾರ್ಯಕ್ರಮ ಹಾಗೂ ಧರ್ಮ ನೇಮೋತ್ಸವ ಕಾರ್ಯಕ್ರಮಗಳು ಗುರುವಾರ ಪ್ರಾರಂಭಗೊಂಡವು.
ಧಾರ್ಮಿಕ ಹಾಗೂ ಸಾಂಪ್ರದಾಯಿಕ ವಿಧಿ ಪೂರ್ವಕ ಬೊಳ್ಳುಳ್ಳಿಮಾರು ಗುತ್ತಿನ ಯಜಮಾನರಾಗಿ ಗಡಿಕಾರರಾಗಿ ನಿಯುಕ್ತಿಗೊಡಿರುವ ಗುರುರಾಜ ಶೆಟ್ಟಿ ಅವರಿಗೆ ದೈವದರ್ಶನದ ಪಾತ್ರಿಗಳು ಊರ ಗಡಿಯಾರ ಪ್ರಮಖರು ಮಾಡೆರೇ.. ಮಾಡೆರೇ.. ಮಾಡೆರೇ..ಎಂದು ಪುರಪು ಕರೆಯುವುದರೊಂದಿಗೆ ಕೈಗೆ ಗಡಿಕಾರರ ಬಳೆ-ಉಂಗುರ ತೊಡಿಸಿ, ಪೇಟವಿಟ್ಟು ಅಧಿಕೃತವಾಗಿ ಮಾಡ ಗಡಿಪ್ರದಾನ ಮಾಡಲಾಯಿತು.


ವೇದಮೂರ್ತಿ ರಾಧಕೃಷ್ಣ ತಂತ್ರಿ ಎಡಪದವು ಅವರ ನೇತೃತ್ವದಲ್ಲಿ ಹಿರಿಯಣ್ಣ ಚೌಟ, ಸುಧಾಕರ ಪೂಜಾರಿ, ಬೊಳ್ಳುಳ್ಳಿಮಾರುಗುತ್ತಿನ ಪ್ರಮುಖರು, ಮಾಗಣೆಯ ಗಡಿ ಹಾಗೂ ದೈವ ಕ್ಷೇತ್ರಗಳ ಪ್ರಮುಖರು ಊರ ಪ್ರಮುಖರು ಹಾಗೂ ಸಾವಿರಾರು ಮಂದಿಯ ಉಪಸ್ಥಿತಿಯಲ್ಲಿ ಧಾರ್ಮಿಕ ವಿಧಿಗಳು ಜರಗಿದವು.
ಇದಕ್ಕೂ ಮೊದಲು ಪರಾಳೆಗುತ್ತು ಹಾಗೂ ಮುಕ್ಕೋಡಿಗಳಲ್ಲಿ ದೈವಗಳಿಗೆ ಕಲಶಾಭಿಷೇಕ ನಡೆದು ಬೊಳ್ಳುಳ್ಳಿಮಾರು ಗುತ್ತಿನ ದೈವಗಳ ಭಂಡರ ಆಗಮಿಸಿ ದೈವದರ್ಶನ ನಡೆಯುವುದರೊಂದಿಗೆ ಧರ್ಮ ನೇಮೋತ್ಸವ ಕಾರ್ಯಕ್ರಮಗಳಿಗೆ ಪ್ರಾರಂಭಗೊಂಡವು. ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ಜರಗಿತು.

