ಬಜಪೆ: ಗ್ರ್ರಾಮೀಣ ರಸ್ತೆಗಳ ಅಭಿವೃದ್ದಿಗೆ ರಾಜ್ಯ ಸರಕಾರ ಹೆಚ್ಚಿನ ಒತ್ತು ನೀಡಿದೆ. ಕಾಮಗಾರಿಗಳ ಗುಣಮಟ್ಟದ ಬಗ್ಗೆ ನಿಗಾ ವಹಿಸುವುದು ಸ್ಥಳೀಯರ ಕರ್ತವ್ಯ ಎಂದು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಮೊೈದಿನ್ ಬಾವಾ ಹೇಳಿದರು.
ಅವರು ಪಡುಪೆರಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆ ಕಾಮಗಾರಿಗಳಿಗೆ ಶನಿವಾರ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

2vm Road (1)
2vm Road (2)
ಮುಖ್ಯಮಂತ್ರಿ ಗ್ರಾಮ ಸಡಕ್ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಲ್ಲಿ – ಕತ್ತಲ್‍ಸಾರ್ ಪಡೀಲು ಟ್ಯಾಂಕಿ ಬಳಿಯಿಂದ ವಿಷ್ಣು ಮೂರ್ತಿ ದೇವಸ್ಥಾನದ ಬಳಿ ಶಿವಿರಾಯರ ಮನೆ ತನಕ ರೂ. 1.5 ಕೋಟಿ, ಕತ್ತಲ್‍ಸಾರ್ ಅಂಗನವಾಡಿ – ಕೊಳಕೆ ಬೈಲು ರಸ್ತೆ ರೂ. 1.5 ಕೋಟಿ, ಅಂಬಿಕಾನಗರ – ಪಾಲ್ದೋಡಿ – ಪುಚ್ಚಳ ರಸ್ತೆ ರೂ. 1.5 ಕೋಟಿ, ಉಳಿದಂತೆ ಶಾಸಕರ ನಿಯಿಂದ ಉಳಿದ ಮೇಗಿನಮನೆ ರಸ್ತೆ -ರೂ. 5 ಲಕ್ಷ, ಕೊಳಕೆ ಬೈಲು ಕ್ರಾಸ್ – ಕಟ್ಟಲ್ತಾಯ ದೈವಸ್ಥಾನ ರಸ್ತೆ ರೂ. 5 ಲಕ್ಷ.
ಪಡುಪೆರಾರ ಗ್ರಾ. ಪಂ. ಅಧ್ಯಕ್ಷ ಇರ್ಫಾನ್ ಅಹ್ಮದ್ ಗ್ರಾ. ಪಂ. ನೂರ್ ಮಹಮ್ಮದ್, ಭಾಸ್ಕರ ಮಲ್ಲಿ, ರೊನಾಲ್ಡ್ ರೊಡ್ರಿಗಸ್, ನಿತ್ಯಾನಂದ ರೈ, ಹರಿ ಶಿಬಿರಾಯ ಮುಂತಾದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *