ಕಟೀಲು: ಪುರಾಣ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೆ ಮಹೋತ್ಸವದ ಪ್ರಯುಕ್ತ ಇಂದು ಹಗಲು ರಥೋತ್ಸವ ನಡೆಯಿತು ಏ.14 ಮಂಗಳವಾರ ಧ್ವಜಾರೋಹಣಗೊಂಡು, ಯುಗಾದಿ ದೀಪದ ಬಲಿ, ಉತ್ಸವ ಬಲಿ, ಬೆಳ್ಳಿ ರಥೋತ್ಸವ, ನಡೆಯಿತು.


ಇಂದು ರಾತ್ರಿ ಶಯನೊತ್ಸವ ನಡೆಯಲಿದ್ದು ನಾಳೆ ಕವಾಟೋದ್ಘಾಟನೆ, ಮತ್ತು ರಾತ್ರಿ ಅತ್ತೂರು ಕೊಡೆತ್ತೂರು ಗ್ರಾಮಸ್ಥರಿಂದ ತೂಟೆದಾರ ನಡೆಯಲಿದೆ, ಪ್ರತೀದಿನ ದಾರ್ಮಿಕ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯುತ್ತಿದೆ.


