ಕಿನ್ನಿಗೋಳಿ: ಮುಲ್ಕಿಯ ಕೆರೆಕಾಡು ಪರಿಸರದಲ್ಲಿ ಹಲವು ದಿನಗಳಿಂದ ಪಂಚಾಯತ್ ನೀರು ಸರಬರಾಜು ಆಗುದಿಲ್ಲ ಎಂದು ಆರೋಪಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದರು
kerekadu niru (1)

kerekadu niru (2)

kerekadu niru
ಸ್ಥಳಕ್ಕೆ ಪಂಚಾಯತ್ ಅಧ್ಯಕ್ಷೆ ಶಾರಧ ವಸಂತ್, ಪಿ.ಡಿ.ಒ. ಶೋಭ. ಜಿಲ್ಲಾ ಪಂಚಾಯತ್ ಸದಸ್ಸ್ಯೆ ಆಶಾ ರತ್ನಕರ್ ಸುವರ್ಣ ಬೇಟಿ ನೀಡಿಸ್ಥಳಿಯರೊಂದಿಗೆ ಸಭೆ ನಡೆಸಿದರು ಹಲವು ವರ್ಷದಿಂದ ಡಿಸೆಂಬರ್ ನಂತರ ಇಲ್ಲಿನ ಜನರು ನೀರಿಗಾಗಿ ಪರದಾಡುವಂತಾಗಿದೆ, ಅನೇಕ ಬಾರಿ ಈ ಬಗ್ಗೆ ಮನವಿ ಮಾಡಿದರೂ ಪ್ರಯೋಜನವಿಲ್ಲದಂತಾಗಿದೆ ಪೈಪು ಲೈನ್ ಮೂಲಕ ನೀರು ಸರಬರಾಜು ಆಗುವ ನೀರನ್ನೇ ನಂಬಿ ಬದುಕುತ್ತಿದ್ದೇವೆ ಕಳೆದ ಕೆಲವು ಸಮಯಗಳಿಂದ ಈ ಸಮಸ್ಸೆ ಇದ್ದರೂ ಪರಿಹರಿಸಿಲ್ಲ ಮಾತ್ರವಲ್ಲ ಪರಿಸರದಲ್ಲಿ ಕೆಲವು ಸಂದರ್ಭ ನೀರು ಬಂದರೂ ಅದು ಕೊಳಕಾಗಿರುತ್ತದೆ, ನೀರಿನ ಟ್ಯಾಂಕ್ ತೊಳೆಯದೆ ಹಲವು ವರ್ಷಗಳಾಗಿದೆ, ಪಂಪ್ ಸೆಟ್ ಕೋಣೆಗೆ ಬೀಗವೇ ಇಲ್ಲ ಮಾತ್ರವಲ್ಲದೆ ವಯರ್ ಗಳು ಕಿತ್ತು ಹೊಗಿದ್ದು ತುಂಭಾ ಅಪಾಯಕಾರಿಯಾಗಿದೆ, ಚುನಾವಣೆ ಮಂದಾಗ ಬಣ್ಣ ಬಣ್ಣದ ಕನಸುಗಳನ್ನು ತುಂಬಿ ಜನರನ್ನು ಮರುಳು ಮಾಡುತ್ತಿದ್ದೀರ ಆದರೆ ಗ್ರಾಮದ ಸಮಸ್ಸ್ಯೆ ಸರಿಪಡಿಸಲು ಇವರಿಂದ ಸಾದ್ಯವಿಲ್ಲ ಎಂದು ಆರೋಪಿಸಿದರು, ಮಾದ್ಯಮ ಪ್ರತಿನಿಧಿಗಳೋಂದಿಗೆ ಮಾತನಾಡಿದ ಪಂಚಾಯತ್ ಅಧ್ಯಕ್ಷೆ ಶಾರಧ ವಸಂತ್ ಇಲ್ಲಿ ನೀರಿನ ಸಮಸ್ಸ್ಯೆ ಇಲ್ಲ ಆದರೆ ಪೈಪ್ ಲೈನ್ ಸರಿ ಇಲ್ಲದ ಕಾರಣ ಮತ್ತು ಇಲ್ಲಿ ಹಲವು ಕಡೆ ಇಳಿಜಾರು ಇದ್ದ ಕಾರಣ ತಗ್ಗು ಪ್ರದೇಶದ ಜನರಿಗೆ ನೀರು ಸಿಗುತ್ತಿದೆ, ಕೆಲವರಿಗೆ ಸಿಗುದಿಲ್ಲ ಇದನ್ನು ಅದಷ್ಟು ಬೇಗ ಸರಿಪಡಿಸುದಾಗಿ ಹೇಳಿದರು ಜಿಲ್ಲಾ ಪಂಚಾಯತ್ ಸದಸ್ಯೆ ಆಶಾ ಸುವರ್ಣರವರು ಪೈಪ್ ಲೈನ್ ಮತ್ತು ಪಂಪ್ ಅಪರೇಟರ್ ಸಮಸ್ಸೆ ಯಿಂದ ಈ ರೀತಿ ತೊಂದರೆಯಾಗಿದೆಬೇಕಾದಷ್ಟು ನೀರು ಈ ಪರಿಸರದಲ್ಲಿ ಇದೆ ಆದರೆ ಸರಿಯಾದ ವೆವಸ್ಥೆ ಇಲ್ಲ ಮಾತ್ರವಲ್ಲ ಕೆಲವರಿಗೆ ಮೀಟರ್ ಅಳವಡಿಸಿಲ್ಲ ಈ ಎಲ್ಲಾ ಸಮಸ್ಸ್ಯೆಗಳನ್ನು ಒಂದು ವಾರದೊಳಗೆ ಸರಿ ಪಡಿಸುದಾಗಿ ಹೇಳಿದರು.

By suddi9

Leave a Reply

Your email address will not be published. Required fields are marked *