ಕಿನ್ನಿಗೋಳಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ದ. ಕ. ಜಿಲ್ಲೆಯ ಕಿಲೆಂಜೂರಿನ ಕಡಪು ಬಳಿ ತೂಗು ಸೇತುವೆ ನಿರ್ಮಾಣಕ್ಕಾಗಿ ಪ್ರಾಧಿಕಾರದ ಅಧ್ಯಕ್ಷ ನಿವೇದಿತ್ ಅಳ್ವ ಬೇಟಿ ನೀಡಿದರು, ಸ್ಥ್ಗಳ ಪರಿಶೀಲನೆ ನಂತರ ಮಾದ್ಯಮ ದೊಂದಿಗೆ ಮಾತನಾಡಿದ ನಿವೇದಿತ್ ಅಳ್ವ ಕಿಲೆಂಜೂರಿನ ಈ ಪ್ರದೇಶಕ್ಕೆ ತೂಗು ಸೇತುವೆ ನಿರ್ಮಿಸುವಂತೆ ಮೆನ್ನಬೆಟ್ಟು ಪಂಚಾತ್ ನಿಂದ ಮನವಿ ಬಂದಿದ್ದು ಅದಕ್ಕಾಗಿ ಇಲ್ಲಿ ಬೇಟಿ ನೀಡಿದ್ದೇವೆ.
tugu setuve
ಈ ಹಿಂದೆ ಪ್ರಾಧಿಕಾರಕ್ಕೆ ಅನುದಾನದ ಕೊರತೆ ಇದ್ದು ಈ ವರ್ಷದಿಂದ 10 ಕೋಟಿ ರೂ ಅನುದಾನವಿದೆ ಅದರಲ್ಲಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಲವು ಕಡೆಗಳಲ್ಲಿನ ತೂಗು ಸೇತುವೆ ಮತ್ತು ಇನ್ನಿತರ ಕಾಮಗಾರಿಗಳನ್ನು ಮಾಡಲಾಗುದು ಕಿಲೆಂಜೂರು ಕಡುಪುವಿಲ್ಲಿ ಕಿಲೆಂಜೂರಿನಿಂದ ಸೂರಿಂಜೆಗೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ತೂಗು ಸೇತುವೆಯ ಪರಿಶಿಲನೆ ಮಾಡಿದ್ದೆವೆ ಇನ್ನು ಅದರ ವೆಚ್ಚದ ಬಗ್ಗೆ ಯೋಜನಾ ಪಟ್ಟಿ ತಯಾರಿಸಲಾಗುವುದು ಎಂದರು. 2011 ರಲ್ಲಿ ತೂಗು ಸೇತುವೆ ವಿನ್ಯಾಸಗಾರ ಗೀರೀಶ್ ಬಾರದ್ವಜ್ ಸ್ಥಳಕ್ಕೆ ಬೇಟಿ ನೀಡಿ ಅದ್ಯಯನ ನಡೆಸಿ ಯೋಜನಾ ವರಧಿ ಮತ್ತು ವಿನ್ಯಸವನ್ನು ಸಿದ್ದಪಡಿಸಿದ್ದರು ಸುಮಾರು 27 ಲಕ್ಷ ವೆಚ್ಚ ತಗಲಬಹುದು ಎಂದು ಅಂದಾಜಿಸಲಾಗಿತ್ತು ಆದರೆ ಈಗ 48 ಲಕ್ಷ ವೆಚ್ಚ ತಗಲಬಹುದು ಎಂದು ಅಂದಾಜಿಸಲಾಗಿದೆ ಈ ಸಂದರ್ಭ ಪ್ರಾಧಿಕಾರದ ಕಾರ್ಯದರ್ಶಿ ಪ್ರದೀಪ ಡಿಸೋಜ, ಸಲಹೆಗಾರ ಭಾಸ್ಕರ ಶೆಟ್ಟಿ , ನಾಗರಾಜ, ಮೆನ್ನಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಜನಾರ್ದನ ಕಿಲೆಂಜೂರು, ಪಿಡಿಓ ಪ್ರಕಾಶ್ ಮತ್ತಿತರರಿದ್ದರು.

By suddi9

Leave a Reply

Your email address will not be published. Required fields are marked *