ಕಟೀಲು: ಕಳೆದ ಒಂದು ವಾರದಲ್ಲಿ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಲೇಖನದ ವಿಷಯ ಹಾಗೂ ಮೇಳಕ್ಕೆ ರಾಜೀನಾಮೆ ಬಗ್ಗೆ ಹರಿದಾಡುವ ಸುದ್ದಿ ಸತ್ಯಕ್ಕೆ ದೂರವಾಗಿದೆ. ಲೇಖನದ ಬಗ್ಗೆ ನನಗೆ ಬೇಸವಾಗಿದ್ದು ನಿಜ, ಆದರೆ ಯಾವುದೇ ಹೇಳಿಕೆ ನೀಡಿಲ್ಲ, ಎಂದು ಕಟೀಲು ಐದನೇ ಮೇಳದ ಪ್ರಧಾನ ಬಾಗವತ ಪಟ್ಲ ಸತೀಶ್ ಶೆಟ್ಟಿ ಹೇಳಿದರು.

ಅವರು ಕಟೀಲಿನಲ್ಲಿ ಲಕ್ಷೀನಾರಾಯಣ ಅಸ್ರಣ್ಣ ಅವರ ಜೊತೆ ಮಾತು ಕಥೆ ನಂತರ ಮಾದ್ಯಮದವರೊಂದಿಗೆ ಮಾತನಾಡಿದರು ಕಟೀಲು ದೇವಿಯ ಬಗ್ಗೆ ಅಪಾರಭಕ್ತಿಯನ್ನು ಹೊಂದಿದ್ದೇನೆ, ದೇವಿಯ ನಂತರ ಸ್ಥಾನದಲ್ಲಿ ಅಸ್ರಣ್ಣರನ್ನು ಪೂಜಿಸುತ್ತೇನೆ, ನನ್ನ ಪದ್ಯ ಅವರಿಗೆ ಇಷ್ಟ ಆಗಿಲ್ಲ ಎಂದರೆ ನನಗೆ ಯಾಕೆ ಬೇಕು ಎಂದು ಮನದಲ್ಲಿ ಯೋಚಿಸಿದ್ದು ನಿಜ, ಆದರೆ ಅವರು ಯಾವುದೇ ಲೇಖನ ಬರೆದಿಲ್ಲ ಎಂದಾದರೆ, ಅಸ್ರಣ್ಣ ಮೇಲೆ ನನಗೆ ಯಾವುದೇ ಬೇಸರವಿಲ್ಲ, ನಾನು ಧರ್ಮಸ್ಥಳ ಮೇಳ ಸೇರುತ್ತೇನೆ ಎಂದು ವದಂತಿ ಹಬ್ಬಿತ್ತು, ಧರ್ಮಸ್ಥಳಕ್ಕೆ ಹೋಗಿದ್ದು ನಿಜ ಆದರೆ ಅದು ಖಾಸಗಿ ಕಾರ್ಯಕ್ರಮವಾಗಿತ್ತು. ನಾನು ತಿರುಗಾಟ ಮಾಡುವು ದಿದ್ದರೆ ಅದು ಕಟೀಲು ಮೇಳದಲ್ಲಿ ಮಾತ್ರ, ಈ ಹಿಂದೆ ನನಗೆ ಬೇರೆ ಮೇಳಗಳಿಗೆ ಆಹ್ವಾನ ಬಂದಿತ್ತು ಆದರೆ ಕಟೀಲು ದೇವಿಯ ಬಗ್ಗೆ ಅಪಾರ ಭಕ್ತಿ ಹೊಂದಿದ್ದೇನೆ ಅದೇ ಮೇಳದಲ್ಲಿ ಮುಂದುವರಿಯುತ್ತೇನೆ ಎಂದಿದ್ದೆ, ಈ ಹಿಂದೆ ಹರಿ ಅಸ್ರಣ್ಣ ಅವರು ಕೆಲವು ವಿಷಯಗಳ ಬಗ್ಗೆ ನನ್ನ ಗಮನಕ್ಕೆ ತಂದಿದ್ದರು ಅದನ್ನು ಸರಿ ಪಡಿಸಿದ್ದೇನೆ, ಕಲಾವಿದನು ಯಾವ ಜಾತಿಗೂ ಸೇರಿದವನಲ್ಲ ಎಲ್ಲರೂ ಒಂದೇ ಇದರಲ್ಲಿ ಯಾರೂ ಜಾತೀ ರಾಜಕೀಯ ತರಬಾರದು ಎಂದು ನನ್ನ ವಿನಂತಿ ಎಂದರು. ಲಕ್ಷ್ಮೀನಾರಾಯಣ ಆಸ್ರಣ್ಣರು ಮಾತನಾಡುತ್ತಾ ಕಳೆದ 2 ದಿನಗಳಿಂದ ಅವಾಂತರ ಸೃಷ್ಟಿಯಾಗಿದ್ದು ಪಟ್ಲ ಅವರ ಬಗ್ಗೆ ಅಂತಹ ಮಾತುಗಳನ್ನು ಆಡಿಲ್ಲ ಪಟ್ಲರ ಬಗ್ಗೆ ಅಭಿಮಾನವಿದೆ ನಾವೂ ಮುಂದೆಯೂ ಒಟ್ಟಾಗಿ ಮುನ್ನಡೆಯುತ್ತೇವೆ. ನಮ್ಮ ಭಾಂದವ್ಯ ಗುರು ಶಿಷ್ಯರ ಹಾಗಿದೆ. ಎಂದು ಪ್ರಕರಣಕ್ಕೆ ತೆರೆ ಎಳೆದರು.
ಈ ಸಂದರ್ಭ ಕಟೀಲು ಮೇಳದ ಸಂಚಾಲಕ ದೇವಿಪ್ರಸಾದ್ ಶೆಟ್ಟ, ಯುಗಪುರುಷದ ಭುವನಾಭಿರಾಮ ಉಡುಪ ಪಿ ಸತೀಶ್ ರಾವ್ ಮುಂತಾದವರು ಉಪಸ್ಥಿತರಿದ್ದರು.

ಪಟ್ಲ ಸತೀಶ್ ಶೆಟ್ರು ಯಕ್ಷಗಾನ ಕಲಾಸೇವಕ. ಕಲಾವಿದ ಯಾರ ಹಂಗಿಗಾಗಲಿ ದಾಕ್ಷಿಣ್ಯಕ್ಕಾಗಲಿ ಒಳಗಾಗುವುದಿಲ್ಲ. ಆತ ತಾಯಿ ಕಲಾಮಾತೆಯ ಮಗ. ಇದು ಎಲ್ಲರೂ ತಿಳಿಯಬೇಕಾದ ಅಂಶ. ಮಂಗಳಾರತಿ ಮಾಡುವಾಗ ಎಷ್ಟು ಭಕ್ತಿ ತೋರುವರೋ ಅಷ್ಟೇ ಭಕ್ತಿ ಕಲಾಮಾತೆಯ ಸೇವೆಯಲ್ಲೂ ತೋರಬೇಕಾಗುತ್ತದೆ. ಪೂಜೆ ಭಜನೆ ಭಾಗವತಿಕೆ ಕುಣಿತ ಇವೆಲ್ಲವೂ ಜಗನ್ಮಾತೆಯ ಕೈಂಕರ್ಯದ ವಿಧಗಳೇ ಹೊರತು ಯಾವುದೂ ಮೇಲೂ ಅಲ್ಲ ಕೀಳೂ ಅಲ್ಲ.
ಜಗದ್ರಕ್ಷಕಿಯ ಸೇವೆಯಲ್ಲಿ ಪಟ್ಲ ಸತೀಷ್ ಶೆಟ್ರು ಮುಂದುವರಿಯಲಿದ್ದಾರೆ, ಆ ತಾಯಿಯ ಮಕ್ಕಳಾದ ಅಸ್ರಣ್ಣ ಪಟ್ಲ ಸಹೋದರರು ಮತ್ತೆ ರಾಜಿ ಆಗಿದ್ದಾರೆ ಅಂತ ತಿಳಿದಾಗ ಜಗನ್ಮಾತೆಯ ಭಕ್ತರಿಗಾಗುವ ಸಂತೋಷ ಅಪರಿಮಿತವಾದುದು.