
ಬಂಟ್ವಾಳ: ಬಿಜೆಪಿ ಬಂಟ್ವಾಳ ಕ್ಷೇತ್ರ ಸಮಿತಿಯ ಚುನಾವಣಾ ಕಾರ್ಯಾಲಯವು ಬಿ.ಸಿ.ರೋಡಿನ ಟ್ರೇಡ್ ಸೆಂಟರ್ನಲ್ಲಿ ಗುರುವಾರ ಶುಭಾರಂಭಗೊಂಡಿತು. ವಿಧಾನಸಭಾ ಮಾಜಿ ಉಪಸಭಾಪತಿ ಎನ್.ಯೋಗಿಶ್ ಭಟ್ ಉದ್ಘಾಟಿಸಿದರು. ಪಕ್ಷದ ಪ್ರಮುಖರಾದ ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು, ಜಿ. ಆನಂದ, ದಿನೇಶ್ ಭಂಡಾರಿ, ಸುಲೋಚನಾ ಜಿ.ಕೆ.ಭಟ್, ರಾಮ್ದಾಸ್ ಬಂಟ್ವಾಳ, ಶ್ರೀಧರ ಮಲ್ಲಿ, ದೇವಪ್ಪ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

