ಕೈಕಂಬ: ಹಾಲು ಕೊಡುವ ಹಸುವೊಂದು ಸ್ವತಃ ತಾನೇ ಹಾಲು ಮಾರುತ್ತಾ ಹೊರಟರೆ ಹೇಗೆ? ಹೌದು ಇಲ್ಲೊಂದು ಹಸು ತನ್ನ ಹಾಲನ್ನು ತಾನೇ ಮಾರುತ್ತಾ ಹೊರಟಿದೆ. ಇಂಥದೊಂದು ವಿಚಿತ್ರ ಪ್ರಸಂಗ ಗುರುಪುರ ಕೈಕಂಬದ ಹಾಲಿನ ಡೈರಿಯ ಎದುರು ಸಂಭವಿಸಿದೆ.
ಹಸು ಕೈಕಂಬದ ಬೀದಿ ಬದಿಯಲ್ಲಿ ತನ್ನ ಕೊಂಬಿನಲ್ಲಿ ಹಾಲಿನ ಕಿಟ್ಲಿಯನ್ನು ಸಿಕ್ಕಿಸಿ ಸಾಗುತ್ತಿರುವ ವಿಚಿತ್ರ ವಿದ್ಯಾಮಾನವನ್ನು ಹಲವರು ನೋಡಿ ಅಚ್ಚರಿಪಟ್ಟರು.
ಅಷ್ಟಕ್ಕೂ ಅಲ್ಲಿ ನಡೆದಿದ್ದು ಇಷ್ಟು:
ಕೈಕಂಬದ ಹಾಲಿನ ಡೈರಿಯ ಮುಂದೆ ಜಮಾಯಿಸಿದ ಈ ಹಸು ಯಾರೋ ಹಾಲು ಮಾರುವವರು ಇಟ್ಟಿದ ಹಾಲಿನ ಕಿಟ್ಲಿಯನ್ನು ನೋಡಿ ಅಚ್ಚರಿಯಿಂದ ತನ್ನ ಪರಿಮಳ ನೋಡಲು ಮುಂದಾಗಿದೆ. ಈ ವೇಳೆ ಕಿಟ್ಲಿಯ ಹಿಡಿತ ಅಚಾನಕ್ಕಾಗಿ ಹಸುವಿನ ಕೊಂಬಿಗೆ ಸಿಕ್ಕಿಕೊಂಡಿದೆ. ಅದನ್ನು ತೆಗೆಯಲು ಹಸುವಿಗೆ ಸಾಧ್ಯವಾಗದ ಹಿನ್ನೆಯಲ್ಲಿ ಹಸು ತನ್ ಕೊಂಬಿನಲ್ಲೇ ಸಿಕ್ಕಿಸಿಕೊಂಡು ಊರಲೆಲ್ಲಾ ಸುತ್ತಾಡಿಕೊಂಡಿತು.
ಹಸುವಿನ ಈ ವಿಚಿತ್ರ ಅವಾಂತರವನ್ನು ಕಂಡು ಸ್ಥಳೀಯರು ಹೊಟ್ಟೆ ಹುಣ್ಣಾಗುವಂತೆ ನಕ್ಕರಲ್ಲದೆ, ಹಸು ಈ ರೀತಿ ತನನ ಹಾಲನ್ನು ತಾನೇ ಮಾರಲು ಹೊರಟರೆ ಎಷ್ಟು ಚೆನ್ನಾಗಿತ್ತು ಎಂದು ತನ್ನಷ್ಟಕ್ಕೇ ತಾನು ಮಾತಾಡಿಕೊಂಡರು.
ಚಿತ್ರ: ಮೋಹನ್





nice
ಪಾಪ ಮೂಕ ಪ್ರಾಣಿ!
ಒಬ್ಬರು ವ್ಯಥೆಪಡುತ್ತಿರುವಾಗ ಇನ್ನೊಬ್ಬರಿಗೆ ಅದು ಮೋಜಿನಂತೆ ಕಾಣುತ್ತಿರುವುದು ವಿಪರ್ಯಾಸವೇ ಸರಿ!