ವೃಂದಾವನ: ಹಳೆಯ ಸಂಪ್ರದಾಯವನ್ನು ಮೆಟ್ಟಿನಿಂತ ಮಥುರಾ ನಗರದ ವೃಂದಾವನದ ವಿಧವೆಯರು ಇದೇ ಮೊದಲ ಬಾರಿ ಹೋಳಿ ಹಬ್ಬವನ್ನಾಚರಿಸಿ ಸಂಭ್ರಮಪಟ್ಟರು. ಸರಕಾರೇತರ ಸಂಸ್ಥೆಯಾದ ಸುಲಭ್ ಇಂಟರ್ನ್ಯಾಷನಲ್ ಈ ಹೋಳಿ ಹಬ್ಬವನ್ನು ಆಯೋಜಿಸಿತ್ತು. ಹಿಂದೂ ಮಾನ್ಯತೆಗಳ ಪ್ರಕಾರ ವಿಧವೆಯರು ಎಲ್ಲಾ ಲೌಕಿಕ ಸುಖಗಳಿಂದ ಪರಿತ್ಯಕ್ತರಾಗಬೇಕೆಂದು ಹೇಳಲಾಗಿದೆ. ಆದರೆ ವೃಂದಾವನದಲ್ಲಿ ಹೋಳಿ ಹಬ್ಬ ಆಚರಿಸುವ ಮೂಲಕ ಹೊಸ ಶಕೆಯೊಂದು ಆರಂಭವಾಗಿದೆ.

