ನವದೆಹಲಿ(ಮಾ.20): ಲೋಕಸಭೆ ಸಮರಕ್ಕೆ ಭರ್ಜರಿ ಸಿದ್ಧತೆ ನಡೆಸುತ್ತಿರುವ ಬಿಜೆಪಿ ನಿನ್ನೆ ತನ್ನ ಅಭ್ಯರ್ಥಿಗಳ 5ನೇ ಪಟ್ಟಿ ಬಿಡುಗಡೆ ಮಾಡಿದೆ. ಅತಿರಥ ಮಹಾರಥರು ಅಖಾಡಕ್ಕಿಳಿದಿದ್ದು, ಯುದ್ಧಕ್ಕೆ ಸನ್ನದ್ಧರಾಗುತ್ತಿದ್ದಾರೆ. ಬಿಜೆಪಿ ಭೀಷ್ಮ ಅಡ್ವಾಣಿ ಗುಜರಾತ್’​ನ ಗಾಂಧಿನಗರ ಕ್ಷೇತ್ರದಿಂದ ಹೋರಾಡಲಿದ್ದಾರೆ. ಇನ್ನು, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಉತ್ತರಪ್ರದೇಶದ ವಾರಾಣಸಿ ಹಾಗೂ ಗುಜರಾತ್​’ನ ವಡೋದರಾದಿಂದ ಕಣಕ್ಕಿಳಿಯುತ್ತಿದ್ದಾರೆ.

modi advani
ಬಿಜೆಪಿ ಅಭ್ಯರ್ಥಿಗಳ 5ನೇ ಪಟ್ಟಿಯಲ್ಲಿ 67 ಮಂದಿ ಘಟಾನುಘಟಿಗಳಿದ್ದಾರೆ. 10 ಮಹಿಳೆಯರಿಗೂ ಸ್ಥಾನ ನೀಡಲಾಗಿದೆ.

ಬಿಜೆಪಿಯ ಪ್ರಮುಖ ಅಭ್ಯರ್ಥಿಗಳು
ಗುಜರಾತ್​ ರಾಜ್ಯದಲ್ಲಿ…
ಗಾಂಧಿನಗರ: ಲಾಲ್​ ಕೃಷ್ಣ ಅಡ್ವಾಣಿ
ಪೋರಬಂದರ್: ವಿಠ್ಠಲ್ ಭಾಯಿ ರಾಡಿಯಾ
ವಡೋದರಾ: ನರೇಂದ್ರ ಮೋದಿ

ರಾಜಸ್ಥಾನ ರಾಜ್ಯದಲ್ಲಿ…
ಬಿಕನೇರ್​​: ಅರ್ಜುನ್​ ಮೇಘವಾಲ್​
ಬಿಕನೇರ್: ರಾಹುಲ್ ಕಾಸ್ವಾ
ಜೈಪುರ ಗ್ರಾಮೀಣ: ರಾಜ್ಯವರ್ಧನ್​​ ಸಿಂಗ್ ರಾಥೋರ್​
ದಹೋದ್​: ಜಸ್ವಂತ್ ಸಿಂಗ್​

ಉತ್ತರಪ್ರದೇಶ ರಾಜ್ಯದಲ್ಲಿ…
ಮಥುರಾ: ಹೇಮಮಾಲಿನಿ
ಡೊಮರಿಯಾ ಗಂಜ್: ಜಗದಂಬಿಕಾ ಪಾಲ್

ಬಿಜೆಪಿ ಹಿರಿಯ ನಾಯಕ ಅಡ್ವಾಣಿ ಯಾವ ಕ್ಷೇತ್ರದಿಂದ ಕಣಕ್ಕಿಳಿಯುತ್ತಾರೆ ಎಂಬುದು ಬಹು ಚರ್ಚೆಗೆ ಈಡಾಗಿತ್ತು.. ಈಗ ಗುಜರಾತ್’​ನ ಗಾಂಧಿನಗರ ಅಖಾಡದಲ್ಲಿ ಅಡ್ವಾಣಿ ಹೋರಾಟ ನಿಶ್ಚಯವಾಗಿದೆ. ಇನ್ನು ಪೋರಬಂದರ್’​ನಿಂದ ವಿಠ್ಠಲ್ ಭಾಯಿ ರಾಡಿಯಾ, ವಡೋದರಾದಿಂದ ನರೇಂದ್ರ ಮೋದಿ ಕಣಕ್ಕಿಳಿಯಲಿದ್ದಾರೆ. ರಾಜಸ್ಥಾನದ ಬಿಕನೇರ್​​​ ನಿಂದ ಅರ್ಜುನ್​ ಮೇಘವಾಲ್​ ಹಾಗೂ ರಾಹುಲ್ ಕಾಸ್ವಾ, ಜೈಪುರ ಗ್ರಾಮೀಣ ಕ್ಷೇತ್ರದಿಂದ ಒಲಿಂಪಿಕ್ಸ್​ ಕ್ರೀಡಾಳು ರಾಜ್ಯವರ್ಧನ್​​ ಸಿಂಗ್ ರಾಥೋರ್​, ದಹೋದ್​ನಿಂದ ಜಸ್ವಂತ್ ಸಿಂಗ್​ ಹೋರಾಡಲಿದ್ದಾರೆ.. ಇನ್ನು, ಉತ್ತರಪ್ರದೇಶದ ಮಥುರಾ ಕ್ಷೇತ್ರದಿಂದ ಡ್ರೀಮ್ ಗರ್ಲ್​ ಹೇಮಮಾಲಿನಿ, ಕಾಂಗ್ರೆಸ್​ನಿಂದ ಬಿಜೆಪಿ ಪಾಳಯಕ್ಕೆ ಇತ್ತೀಚೆಗಷ್ಟೇ ಸೇರ್ಪಡೆಯಾಗಿದ್ದ ಜಗದಂಬಿಕಾ ಪಾಲ್, ಡೊಮರಿಯಾ ಗಂಜ್​ನಿಂದ ಸ್ಫರ್ಧಿಸಲಿದ್ದಾರೆ. ಇನ್ನು ರಾಜಸ್ಥಾನ ಸಿಎಂ ವಸುಂಧರಾ ರಾಜೇ ಪುತ್ರ ದುಶ್ಯಂತ ಸಿಂಗ್ ಜಲ್​ವಾರ್​ ನಿಂದ ಸ್ಪರ್ಧಿಸಲಿದ್ದಾರೆ.

ಈ ಮಧ್ಯೆ, ಬಿಜೆಪಿಯ ಹಿರಿಯ ನಾಯಕ ಎಲ್​ ಕೆ ಅಡ್ವಾಣಿ ಬಿಜೆಪಿ ಪಟ್ಟಿಗೆ ವಿರೋಧ ವ್ಯಕ್ತಪಡಿಸಿದ್ದು, ತಾವು ಮಧ್ಯಪ್ರದೇಶದ ಭೋಪಾಲ್​’ನಿಂದ ಸ್ಪರ್ಧಿಸಲು ಉತ್ಸಾಹಕರಾಗಿರುವುದಾಗಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸುಷ್ಮಾ ಸ್ವರಾಜ್ ಹಾಗೂ ನಿತಿನ್ ಗಡ್ಕರಿ ನಿನ್ನೆ ರಾತ್ರಿ ಅಡ್ವಾಣಿ ಮನೆಗೆ ಭೇಟಿ ನೀಡಿ ಪಕ್ಷದ ನಿರ್ಧಾರ ಸ್ವೀಕರಿಸಿ ಗುಜರಾತ್’​ನಿಂದಲೇ ಸ್ಪರ್ಧಿಸುವಂತೆ ಮನವಿ ಮಾಡಿದ್ದಾರೆ.

By suddi9

Leave a Reply

Your email address will not be published. Required fields are marked *