ಸುದ್ದಿ9 ನಿಮ್ಮ ಮುಂದೆ…
ಪ್ರಿಯರೇ ಹೊಸತಾಗಿ ನಾವೊಂದು ಸಮಗ್ರ ವಾತರ್ಾ ಸಮುಚ್ಛಯವನ್ನು ಹೊಂದಿರುವ ನ್ಯೂಸ್ವೆಬ್ಸೈಟ್ ಒಂದನ್ನು ನಿಮ್ಮ ಮುಂದೆ ತರುತ್ತಿದ್ದೇವೆ. ಅದಕೆ ನಾವಿಟ್ಟ ಹೆಸರು ಸುದ್ದಿ9.ಕಾಮ್
ಈ ಹೆಸರನ್ನು ಇಡಲು ಮುಖ್ಯ ಕಾರಣವೆಂದರೆ ಈ ಭೂ ಮಂಡಲದಲ್ಲಿ ನವದುಗರ್ೆಯರ ಅಸ್ತಿತ್ವ ಹೊಂದಿದ್ದು ಅದು ಭಕ್ತಕೋಟಿಗಳನ್ನು ಸಲಹುತ್ತಾ ಬರುತ್ತಿದೆ. ಅಲ್ಲದೆ ಪೊಳಲಿ ರಾಜರಾಜೇಶ್ವರಿ ನಮ್ಮ ಆರಾಧ್ಯ ದೇವರು. ಆ ಮಾತೆಯ ಆಶೀವರ್ಾದ ಸದಾ ನಮ್ಮ ಮೇಲಿರುತ್ತದೆ ಎಂಬ ನಂಬಿಕೆ ಇದೆ.
ಅಲ್ಲದೆ ಪ್ರಪಂಚ ನವಗ್ರಹಗಳಿಂದ ಬಂಧನವಾಗಿದ್ದು ಸೂರ್ಯ ಅದರ ಅಧಿಪತಿ. ಹಗೆ ಪುರಾಣದ `9′ ಎಂಬ ಸಂಖ್ಯೆಯು ತಾರಕ ಹಾಗೂ ಮಾರಕ ಶಕ್ತಿಯನ್ನು ಹೊಂದಿದೆ. ಸಂಖ್ಯಾಶಾಶ್ತ್ರದ ಪ್ರಕಾರವೂ ಇದು ಒಳ್ಳೆಯ ಅಂಕೆ. ಅಲ್ಲದೆ ಈ ಹೆಸರು ಅಂದವಾಗಿದ್ದು ಓದುಗರನ್ನು ಹಿಡಿದುಕೊಳ್ಳುತ್ತದೆ ಎಂಬ ಭರವಸೆಯೂ ನಮ್ಮದು. ಅದಕ್ಕೆ ಸುದ್ದಿ ಸುದ್ದಿಯೆಂಬ ಹೆಸರು ಸೇರಿಕೊಂಡು ಕೊನೆಗದು ಸುದ್ದಿ9 ಆಗಿ ರೂಪುಗೊಂಡಿದೆ.
ಈ ನಮ್ಮ ವೆಬ್ಸೈಟ್ಗೆ ಪ್ರತಿಯೊಂದು ಧರ್ಮದವರ ಆಶೀವರ್ಾದ ಸಿಕ್ಕಿದೆ. ಮುಖ್ಯವಾಗಿ ನಾವು ವೆಬ್ಸೈಟ್ ತೆರೆಯುತ್ತೇವೆ ಎಂಬ ವಿಷಯ ಹೇಳುತ್ತಿದ್ದಂತೆ ನಮ್ಮನ್ನು ಅಭಿನಂದಿಸಿದ್ದಾರೆ. ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿಯವರು ನನ್ನ ಸಪೂರ್ಣವಾಗಿ ಆಶೀರ್ವದಿಸಿ ಹಸ್ತಾಕ್ಷರ ನೀಡಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ಸುದ್ದಿ9 ತಾಜಾ ಸುದ್ದಿಗಳನ್ನು ವಿಭಿನ್ನ ಶೈಲಿಯಲ್ಲಿ ಹೊತ್ತು ತರಲು ಪ್ರಯತ್ನಿಸುತ್ತಿದೆ. ಅದಕ್ಕಾಗಿ ಓದುಗರ ಸಹಕಾರವೂ ಬೇಕು. ನಮ್ಮಲ್ಲಿ ಲೋಪದೋಷವಿದ್ದಲ್ಲಿ ದಯವಿಟ್ಟು ತಿಳಿಸಿ. ಅಲ್ಲದೆ ಸಲಹೆ ಸೂಚನೆಗಳಿಗೂ ಸದಾ ಸ್ವಾಗತವಿದೆ.

By suddi9

Leave a Reply

Your email address will not be published. Required fields are marked *