11 copy 1 copy 2 copy 4 copy 5 copy 6 copy 7 copy 8 copy 9 copy 10 copyಪೊಳಲಿ ರಾಜರಾಜೇಶ್ವರಿ ದೇವಳದ ಬಗ್ಗೆ ಒಂದಿಷ್ಟು…
ಸುದ್ದಿ9 ಕೈಕಂಬ
ಬಂಟ್ವಾಳದ ಕರಿಯಂಗಳ ಗ್ರಾಮದಲ್ಲಿರುವ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಾಲಯವು ಪಲ್ಗುಣಿ ನದಿಯ ತಟದಲ್ಲಿ ನಿಂತಿದೆ. ರಾಜರಾಜೇಶ್ವರಿ ದೇವಿ ಇಲ್ಲಿನ ಅಧಿದೇವತೆ.
ಫಲ್ಗುಣಿ ನದಿ: ಪಶ್ಚಿಮ ಘಟ್ಟದಲ್ಲಿರುವ ಕುದುರೆ ಮುಖದಿಂದ ಈ ನದಿ ಹರಿದು ಪೊಳಲಿಯ ಉತ್ತರ ಪಾಶ್ರ್ವದಲ್ಲಿ ಪೂರ್ವದಿಂದ ಪಶ್ಚಿಮಕ್ಕೆ ಹರಿದು ವಾಯುವ್ಯ ದಿಕ್ಕಿನಲ್ಲಿ ತಿರುಗಿ ದಕ್ಷಿಣಾಭಿಮುಖವಾಗಿ ಹರಿಯುತ್ತಿದೆ. ಇದರ ಪೂರ್ವ ದಿಕ್ಕಿನಲ್ಲಿ ರೆಂಜೆಗಿರಿ ಬೆಟ್ಟ ಹಾಗೂ ಬಯಲುಬೆಟ್ಟು ಗದ್ದೆ ಇದೆ.
ಪೊಳಲಿಗೆ ಮಾರ್ಕಂಡೇಯ ಪುರಾಣದಲ್ಲಿ `ಪುಳಿನ’ ಎಂಬ ಹೆಸರಿತ್ತು. ಕರಿಯಂಗಳ ಗ್ರಾಮದಲ್ಲಿ ಇಲ್ಲಿಗೆ ಸಂಬಂಧಪಟ್ಟಂತೆ ಶಾಸನ ದೊರಕಿದ್ದು ಅದರಲ್ಲಿ ಕ್ರಿ.ಶ. 8ನೇ ಶತಮಾನ ಎಂದು ನಮೂದಿಸಿದ್ದಾರೆ. ಇದರ 380ನೇ ಶಾಸನದಲ್ಲಿ ಪೊಳಲಿಗೆ `ಹೊಳಲ್’ ಎಂಬ ಹೆಸರಿತ್ತು. ಅಂದರೆ ಪಟ್ಟಣ ಎಂದರ್ಥ. ಬರಬರುತ್ತಾ ಹೊಳಲ್ ಹೋಗಿ ಪೊಳಲಿ ಎಂದು ರೂಪಾಂತರವಾಯ್ತು. ತುಳು ಭಾಷೆಯಲ್ಲಿ `ಪುರಲ್’ ಎನ್ನುತ್ತಾರೆ. ಇದು ತುಳುವಲ್ಲಿ ಪೊಳಲಿಗೆ ಅಪಭ್ರಂಶವಾಗಿರಬಹುದೆಂದು ಹೇಳಬಹುದು.
1466ರಲ್ಲಿ ಇಲ್ಲಿಗೆ ಬೃಹತ್ ನೆರೆ ಬಂದಿತ್ತೆಂದು ಐತಿಹ್ಯವಿದೆ. ಇದಕ್ಕಿಂತ ಮುಂಚೆ ಪೊಳಲಿ ಅನೇಕ ಅರಮನೆಗಳಿಂದ ಕೂಡಿದ ಸುಂದರ ಪಟ್ಟಣವಾಗಿತ್ತೆಂದು ಐತಿಹ್ಯವಿದೆ. ಇಲ್ಲಿ ಉಂಟಾದ ಭೀಕರ ಪ್ರವಾಹಕ್ಕೆ ಅರಮನೆಗಳು ಕೊಚ್ಚಿಹೋಗಿದ್ದು ದೇವಿಯ ಗರ್ಭಗುಡಿ ಮಾತ್ರ ಉಳಿಯಿತು ಎನ್ನಲಾಗಿದೆ.
ಪೊಳಲಿ ದೇವಸ್ಥಾನವನನು ಸುರತ ಮಹಾರಾಜನು ಕಟ್ಟಿಸಿರಬಹುದೆಂದು ಜನಜನಿತವಾಗಿದೆ. ಸುರತ ರಾಜನು ವೈರಿಗಳೊಂದಿಗೆ ಸೆಣೆಸಾಡಿ ಸೋತು ಕಾಡಿಗೆ ಹೋಗಿದ್ದನು. ಆ ವೇಳೆ ಸುಮೇಧ ಮಹಶರ್ಿ ಸುರತನಿಗೆ ಸಿಕ್ಕಿ ರಾಜರಾಜೇಶ್ವರಿ ದೇವಿಯ ಮಂತ್ರವನ್ನು ಉಪದೇಶಿಸುತ್ತಾರೆ. ಸುರತ ಆ ಮಂತ್ರವನ್ನು ಪಠಿಸುತ್ತಾ ನಿದ್ದೆಹೋಗಿದ್ದಾಗ ಆಸ್ಥಾನರೂಢಳಾದ ದೇವಿಯು ಆತನ ಕನಸಲ್ಲಿ ಬಂದಳು. ಈ ವಿಚಾರವನ್ನು ಆತ ಮತ್ತೆ ಸುಮೇಧ ಮಹಷರ್ಿಯಲ್ಲಿ ಹೇಳಿದಾಗ ಕನಸಲ್ಲಿ ಕಂಡಂತೆ ದೇವಿಗೆ ದೇವಸ್ಥಾನವನ್ನು ಕಟ್ಟುವಂತೆ ಆದೇಶಿಸುತ್ತಾರೆ.
ಅದರಂತೆ ದೇವಿಯ ಮೂತರ್ಿಯನ್ನು ಪ್ರಧಾನವಾಗಿ ರೂಪಿಸುತ್ತಾನೆ. ನಂತರ ಬಲಗಡೆಯಲ್ಲಿ ಸುಬ್ರಹ್ಮಣ್ಯ,, ಗಣಪತಿ, ಎಡಗಡೆಯಲ್ಲಿ ಭದ್ರಕಾಳಿ, ವಿಷ್ಣು ವಟು, ಬ್ರಹ್ಮವಟು, ಶೂಲಿನಿ, ದಂಡನಿ, ಮುಂತಾದ ಗಣಗಳನ್ನು ರಚಿಸಿ ಪ್ರತಿಷ್ಠಾಪಿಸುತ್ತಾನೆ. ಬಲಭಾಗದ ಎಡ ಪಾಶ್ರ್ವದಲ್ಲಿ ದುಗರ್ಾಪರಮೇಶ್ವರಿಯ ಗುಡಿ ಇದೆ. ಇದರಲ್ಲಿ ಶಿಲಾಮಯಿ ಕಲ್ಲಿನ ವಿಗ್ರವಿದ್ದು ಸುಮೇಧಾ ಮಹಷರ್ಿಗಳು ಇದನ್ನು ಪ್ರತಿಷ್ಠಾಪಿಸಿದ್ದಾರೆ. ಇಲ್ಲಿ ಸುಬ್ರಹ್ಮಣ್ಯನ ಸಾನಿಧ್ಯವಿದ್ದು ವಷರ್ಾವಧಿ ಒಂದು ತಿಂಗಳ ಜಾತ್ರೆ ಶ್ರೀಸುಬ್ರಹ್ಮಣ್ಯ ಸ್ವಾಮಿಗೆ ಸಲ್ಲುತ್ತದೆ. ದೇವಿಯ ಗರ್ಭಗುಡಿಯ ಒಳಗಡೆ ಕೊಡಮಣಿತ್ತಾಯ ದೈವದ ಸನ್ನಿಧಾನವಿದೆ. ದೇವಸ್ಥಾನದ ಹೊರಾಂಗಣದ ಎಡಬದಿಯಲ್ಲಿ ಶ್ರೀಕ್ಷೇತ್ರಪಾಲನ ಸಾನಿಧ್ಯವಿದ್ದು ಕ್ಷೇತ್ರವನ್ನು ಕಾಯುವ ಕ್ಷೇತ್ರ ರಕ್ಷಕನೆಂದು ಹೆಸರು ಪಡೆದಿದೆ.
ಪೊಳಲಿಯಲ್ಲಿ ಒಂದು ತಿಂಗಳ ಅವಧಿಗೆ ಜಾತ್ರೆ ನಡೆಯುತ್ತದೆ. ಸಾಮಾನ್ಯವಾಗಿ 27, 28, 28, 29 ಹಾಗೂ 30 ದಿನಗಳ ಕಾಲ ಜಾತ್ರೆ ನಡೆಯುತ್ತಿದ್ದು ದೇಶದಲ್ಲಿ ಒಂದು ತಿಂಗಳ ಜಾತ್ರೆ ನಡೆಯುವುದು ಇಲ್ಲಿ ಮಾತ್ರ.
ಧ್ವಜಾರೋಹಣದ ಮರುದಿನ ಕಂಚು ಬೆಳಕು ಉತ್ಸವ ನಡೆಯುತ್ತದೆ. ದೇವಸ್ಥಾನಕ್ಕೆ ಸಂಬಂಧಪಟ್ಟ ನಟ್ಟೋಜಿ ಮನೆತನದವರಲ್ಲಿ ಒಬ್ಬರು ಧ್ವಾಜಾರೋಹಣದ ಮುನ್ನಾದಿನ ಪುತ್ತಿಗೆ ಜೋಯಿಸರಲ್ಲಿ ಹೋಗಿ ದಿನನಿಗದಿ ಮಾಡಿಬರುತ್ತಾರೆ. ಕಂಚುಬೆಳಕು ಉತ್ಸವದ ನಂತರ ವಾಲಗದ ಮುಖ್ಯಸ್ಥನಲ್ಲಿ ಅವರು ದಿನದ ಬಗ್ಗೆ ಹೇಳುತ್ತಾರೆ. ಅವರು ಭೂತ ಪಾತ್ರಿಗೆ ತಿಳಿಸಿದಾಗ ಆತ ಗಂಟೆ ಬಾರಿಸುತ್ತಾ ತಿಂಗಳ ಜಾತ್ರಾ ಅವಧಿಯ ಬಗ್ಗೆ ತಿಳಿಸುತ್ತಾನೆ. ಇದು ಡಂಗೂರ ಸಾರುವ ರೀತಿಯಲ್ಲಿ ಕಾಣುತ್ತದೆ. ಅಲ್ಲಿಯವರಗೆ ಜಾತ್ರಾ ದಿನದ ವಿವರ ಗೌಪ್ಯ.
ಪ್ರತೀ ಐದು ದಿನಕ್ಕೊಮ್ಮೆ ದಂಡಮಾಲೆ ಉತ್ಸವ ನಡೆಯುತ್ತದೆ. ಕೇಪುಳ ಹೂವಿನ ದಂಡೆಯ ಅಲಂಕಾರವನ್ನು ಬಲಿಉತ್ಸವ(ಸುಬ್ರಹ್ಮಣ್ಯ)ದ ಮೂತರ್ಿಗೆ ಐದು ದಿನಕ್ಕೊಮ್ಮೆ ಅಲಂಕರಿಸಲಾಗುತ್ತದೆ. ನಂತರ ಉಳಿದ ದಿನ ಸಾಮಾನ್ಯ ಬಲಿ ಉತ್ಸವ ನಡೆಯುತ್ತಿದ್ದು, ಐದು ದಿನ ಚೆಂಡು ಉತ್ಸವ, ಒಂದು ದಿನ ಮಹಾರಥೋತ್ಸವ ಹಾಗೂ ಕೊನೆಯ ದಿನ ಆರಡದಿಂದ ಜಾತ್ರೆ ಕೊನೆಗೊಳ್ಳುತ್ತದೆ.
ದೇವಿಯು ಚಂಡಮುಂಡರನ್ನು ವಧಿಸಿ ಚೆಂಡಾಟವಾಡಿದ ಪ್ರತೀಕವಾಗಿ ಚೆಂಡಿನ ಉತ್ಸವ ನಡೆಸಲಾಗುತ್ತದೆ. ಮಳಲಿ, ಅಮ್ಮುಂಜೆ ಈ ಎರಡು ಊರುಗಳ ಮಧ್ಯೆ ಆಟ ನಡೆಯುತ್ತದೆ.
ದೇವಸ್ಥಾನದಲ್ಲಿ ಕಾತರ್ಿಕ ಪೂಜೆ, ಕುಂಕುಮಾರ್ಚನೆ, ಹೂವಿನ ಪೂಜೆ, ಸೌಂದರ್ಯ ಲಹರಿ, ಖಡ್ಗಮಾಲಾರ್ಚನೆ, ಸುಬ್ರಹ್ಮಣ್ಯ ಸಹಸ್ರನಾಮಾರ್ಚನೆ, ದುಗರ್ಾ ನಮಸ್ಕಾರ, ಸವರ್ಾಲಂಕಾರ, ಗಾಯತ್ರಿ ಪೂಜೆ, ದೇವರಿಗೆ ಸೀರೆ ಒಪ್ಪಿಸುವಿಕೆ ಮುಂತಾದ ಸೇವೆಗಳು ನಡೆಯುತ್ತಿದೆ. ರವಿವಾರ, ಮಂಗಳವಾರ, ಗುರುವಾರ ರಾತ್ರಿ ಮಹಾಪೂಜೆಯ ಬಳಿಕ ಭದ್ರಕಾಳಿ ಗಾಯತ್ರಿ ಪೂಜೆ ನಡೆಯುತ್ತದೆ.
ಪೊಳಲಿಯ ಜೀಣರ್ೋದ್ಧಾರ ಕಾಮಗಾರಿ ಆರಂಭ:
ಪೊಳಲಿ ಕ್ಷೇತ್ರದ ಜೀಣರ್ೋದ್ದಾರ ನಡೆದ ಬಳಿಕ ಬ್ರಹ್ಮಕಲತ್ಸೋತ್ಸವ ನಡೆಯಲಿದೆ. ಇದಕ್ಕೆ ತಗಲುವ ಒಟ್ಟು ವೆಚ್ಚ 12.5 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಗರ್ಭಗುಡಿ: ಅಂದಾಜು ರೂ. 2.5 ಕೋಟಿ
ಒಳಾಂಗಣ ಸುತ್ತುಪೌಳಿ: ಅಂದಾಜು ರೂ 7.5 ಕೋಟಿ
ನೂತನ ಧ್ವಜಸ್ತಂಬ: ಅಂದಾಜು ರೂ. 29 ಲಕ್ಷ
ದುಗರ್ಾಪರಮೇಶ್ವರಿ ಗುಡಿ: ಅಂದಾಜು ರೂ. 61 ಲಕ್ಷ
ಕ್ಷೇತ್ರಪಾಲ ಸನ್ನಿಧಿ: ಅಂದಾಜು ರೂ. 5 ಲಕ್ಷ
ಯಾಗಶಾಲೆ: ಧಾಮರ್ಿಕ ವಿಧಿ ವಿಧಾನ ಪೂರೈಸಲು ವ್ಯವಸ್ಥಿತ ಯಜ್ಞಶಾಲೆ ನಿಮರ್ಾಣಕ್ಕೆ ಅಂದಾಜು ರೂ. 10 ಲಕ್ಷ.
ನಾಗಬನ: ಅಂದಾಜು ರೂ ಐದು ಲಕ್ಷ
ಹಾಗೂ ಇತರ ಕಾಮಗಾರಿಗಳು ನಡೆಯಲಿದೆ.
ಇವೆಲ್ಲಾ ಯಶಸ್ವಿಯಾಗಿ ನಡೆಯುವಂತಾಗಲು ಭಗವದ್ಭಕ್ತರು ಎಲ್ಲರೂ ಯನುಮನಧನಗಳಿಂದ ಸಹಕರಿಸಿ ದೇವಿಯ ಕೃಪೆಗೆ ಪಾತ್ರರಾಗಬಹುದು.
ಫೆಬ್ರವರಿ 3ರಂದು ನಿಧಿಸಂಚಯ:
ದೇವಸ್ಥಾನಕ್ಕೆ ತಗಲುವ ಖರ್ಚನ್ನು ಪೈರೈಸುವ ಸಲುವಾಗಿ ಫೆಬ್ರವರಿ 3ರಂದು `ನಿಧಿ ಸಂಚಯನ’ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಭಕ್ತರು ದೇವಳಕ್ಕೆ ಆಗಮಿಸಿ ತಾವೆಷ್ಟು ದೇಣಿಗೆ ನೀಡಲು ಸಾಧ್ಯವೋ ಅದನ್ನು ಕಾಗದದಲ್ಲಿ ಬರೆದು ನೀಡಬಹುದು. ಇದರಲ್ಲಿ ಬರೆಯಲಾದ ಮೊತ್ತವನ್ನು ಗಮನಿಸಿಕೊಂಡು ಹಣದ ಒಟ್ಟು ಮೌಲ್ಯವನ್ನು ಲೆಕ್ಕ ಹಾಕಿಕೊಂಡು ಜೀಣರ್ೋದ್ಧಾರ ನಡೆಸಲು ಸಾಧ್ಯವಾಗುತ್ತದೆ ಎಂಬುದು ಆಡಳಿತ ಮಂಡಳಿಯ ಅಭಿಪ್ರಾಯವಾಗಿದೆ

By suddi9

2 thoughts on “ಪೊಳಲಿ ರಾಜರಾಜೇಶ್ವರಿ ದೇವಳದ ಬಗ್ಗೆ ಒಂದಿಷ್ಟು…”

Leave a Reply

Your email address will not be published. Required fields are marked *