ಸುದ್ದಿ9 ಕೈಕಂಬ:ಬ್ರಹ್ಮಶ್ರೀ ನಾರಾಯಣಗುರು ಮಂದಿರ ಹಾಗೂ ಬಿಲ್ಲವರ ಸಂಘದ ವಾರ್ಷಿಕ ದಿನಾಚರಣೆಯು ಫೆ.16 ರಂದು ಸೋಮವಾರ ಕಂದಾವರ ಗುರು ಮಂದಿರದಲ್ಲಿ ಶ್ರೀ ಶಿವಾನಂದ ಶಾಂತಿ ಅವರ ಮಾರ್ಗದರ್ಶನದಲ್ಲಿ ನೆರವೇರುವುದು. ಬೆಳಿಗ್ಗೆ 7.30ಕ್ಕೆ ಸಾರ್ವಜನಿಕ ಸತ್ಯನಾರಾಯಣ ಪೂಜೆ ಹಾಗೂ ಗುರು ಪೂಜೆ ಜರಗಲಿದೆ. 12.30ಕ್ಕೆ ಮಹಾಪೂಜೆ ಮಧ್ಯಾಹ್ನ 1 ರಿಂದ ಅನ್ನಸಂತರ್ಪಣೆ ನಡೆಯಲಿದೆ ಎಂದು ಬಿಲ್ಲವರ ಸಂಘದ ಪ್ರಕಟನೆ ತಿಳಿಸಿದೆ.
