ಸುದ್ದಿ9 ಕೈಕಂಬ: ಪೊಳಲಿ ರಾಜಶ್ರೀ ಯುವಕ ಮಂಡಲ ಇದೀಗ 35ರ ಸಂಭ್ರಮ. ಸುಮಾರು 46 ವರ್ಷಗಳ ಹಿಂದೆ ಪೊಳಲಿ ಪರಿಸರದಲ್ಲಿ ಕ್ರೀಡೆ ಮತ್ತು ಮನೋರಂಜನೆ ಉದ್ದೇಶವಿಟ್ಟುಕೊಂಡು ಹಿರಿಯರ ಮಾರ್ಗದರ್ಶನದಿಂದ ಫ್ರೆಂಡ್ಸ್ ಕ್ಲಬ್ ಅನ್ನು ಹುಟ್ಟು ಹಾಕಿ ಕ್ಲಬ್ ಚಟುವಟಿಕೆಗಳು ನಿಧಾನಗೋಡಾಗ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಆಗಿನ ಮೊಕ್ತೇಸರ ದಿ. ಅಮ್ಮುಂಜೆಗುತ್ತು ಶಂಕರ ಶೆಟ್ಟಿ ಹಾಗೂ ವೇದಮೂರ್ತಿ ಕೆ.ಅನಂತ ಪದ್ಮನಾಭ ಉಪಾಧ್ಯಾಯರ ಮಾರ್ಗದರ್ಶನದಲ್ಲಿ “ರಾಜಶ್ರೀ”ಎಂಬ ನಾಮಾಂಕಿತದೊಂದಿಗೆ ಇಧೀಗ 35 ವರ್ಷಗಳಿಂದ ಸೇವಾ ಚಟುವಟಿಕೆಯ ಪ್ರಧಾನ ಉದ್ದೇಶವಾಗಿಟ್ಟುಕೊಂಡು “ಸೇವೆ… ಸಂಸ್ಕೃತಿ…ಕ್ರೀಡೆ… ಎಂಬ ಧ್ಯೇಯವನ್ನಿಟ್ಟುಕೊಂಡು ವರ್ಷಕ್ಕೆ 3 ಆರೋಗ್ಯ ರಕ್ಷಣಾ ಕಾರ್ಯಕ್ರಮ.
ಸುಮಾರು 2000ಕ್ಕೂ ಹೆಚ್ಚು ಕನ್ನಡಕ ವಿತರಣೆ, ಕಣ್ಣಿನ ಶಸ್ತ್ರಚಿಕಿತ್ಸೆಗೆ ಸಹಾಯಧನ, ಉಚಿತ ದಂತ ಚಿಕಿತ್ಸಾ ಶಿಬಿರ, ಆರೋಗ್ಯ ಶಿಬಿರ, ಕಣ್ಣು ದಾನ ಮಾಡಿ ಇತರರಿಗೂ ಪ್ರೇರಣೆ ನೀಡಲು ಪ್ರೋತ್ಸಾಹ ದುಶ್ಚಟಗಳಿಂದ ದೂರವಿರಲು ಜಾಗೃತಿ ಶಿಬಿರಗಳ ಸಂಘಟನೆ ಮತ್ತು ನೆರವು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಆಟಿಡೊಂಜಿ ದಿನ ಹಳ್ಳಿ ಕ್ರಿಡೆಗಳಿಂದ ಗ್ರಾಮೋತ್ಚಸವ ಹೀಗೆ ಹಲವಾರು ಕಾರ್ಯಕ್ರಮಗಳನ್ನು ನಡೆಸಿ ಕೊಂಡು ಬಂದು 35ನೇ ವಾರ್ಷಿಕೊತ್ಸವದ ಸಂಭ್ರಮಾಚಾರಣೆಯಲ್ಲಿ ರಾಜಶ್ರೀ ಯುವಕ ಮಂಡಲವು ಪೊಳಲಿ ಕ್ಷೇತ್ರದ ವಠಾರದಲ್ಲಿ 14 ನೇ ವರ್ಷದ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ನಾಟಕ ಸಭಾ ಕಾರ್ಯಕ್ರಮ- ಸನ್ಮಾನ ಪುರಸ್ಕಾರ ಸಮಾರಂಭವನ್ನು ನಡೆಸಲು ಉತ್ಸುಕರಾಗಿದ್ದಾರೆ.

ಫೆ.14 ರಂದು ಶನಿವಾರ ಬೆಳಗ್ಗೆ 8.30ರಿಂದ ಸಾಮೂಹಿಕ ಶ್ರೀ ಸತ್ಯನಾರಾಯಣಪೂಜೆ.
ಬೆಳಗ್ಗೆ 11.30ರಿಂದ 12.30 ರವರೆಗೆ ಧಾರ್ಮಿಕ ಸಭೆ.
ಧಾರ್ಮಿಕ ಪ್ರವಚನ ಸಂಸ್ಕಾರ ಭಾರತಿ ಜಿಲ್ಲಾ ಸಂಚಾಲಕ ಶ್ರೀ ಕಶೆಕೋಡಿ ಸೂರ್ಯನಾರಾಯಣ ಭಟ್,ಅಧ್ಯಕ್ಷತೆಯನ್ನು ಕೋಡಿಮಜಲು ವೇದಮೂರ್ತಿ ಅನಂತಪದ್ಮನಾಭ ಉಪಾಧ್ಯಾಯ ವಹಿಸಲಿದ್ದಾರೆ. ಪೊಳಲಿ ರಾಮಕೃಷ್ಣತಪೋವನದ ವಿವೇಕಚೈತನ್ಯಾನಂದ, ಕ್ಯಕಂಬ ಹೊಟೇಲ್ ಶ್ರೀ ರಾಮ್ ಮಾಲಕ ಶ್ರೀ ಎಂ ಹರಿರಾವ್ ಧಾರ್ಮಿಕ ಸಭೆಯಲ್ಲಿ ಉಪಸ್ಥಿತರಿರುವರು.
ಮಹಾಪೂಜೆ .ಮಧ್ಯಾಹ್ನ 1 ಗಂಟೆಗೆ ಅನ್ನಸಂತರ್ಪಣೆ.
.ವಾರ್ಷಿಕೋತ್ಸವದ ಸಂಭ್ರಮದ ಮನೋರಂಜನಾ ಕಾರ್ಯಕ್ರಮಗಳು.
ಮಧ್ಯಾಹ್ನ 2ರಿಂದ ಸಾಯಂಕಾಲ 6ಗಂಟೆಯವರೆಗೆ ಯಕ್ಷಗಾನ ತಾಳಮದ್ದಲೆ “ಇಂದ್ರ ನಂದನ ವಾನರೇಂದ್ರ”
ಸಾಯಂಕಾಲ.6 ರಿಂದ 6.50ರವರೆಗೆ ಪೊಳಲಿ ಶಾಲಾ ಮಕ್ಕಳಿಂದ ಮತ್ತು ಊರವರಿಂದ ವೈವಿಧ್ಯಮಯ ನೃತ್ಯಗಳು, 7ರಿಂದ 9ರವರೆಗೆ ರಾಜೇರ್ಶವರೀ ಮಹಿಳಾ ಮಂಡಳಿ ಪೊಳಲಿ ಇದರ ಸದಸ್ಯೆಯರಿಂದ ತುಳು ಹಾಸ್ಯಮಯ ನಾಟಕ ಲತ್ತ್ ನೆತ್ತೆರ್ ರಚನೆ ಮತ್ತು ನಿರ್ದೇಶನ ಎಂ ಜಿ ಟೈಲರ್ ಅಮ್ಮುಂಜೆ,
ರಾತ್ರಿ 9 ರಿಂದ 10.30 ರವರೆಗೆ ಸಭಾಕಾರ್ಯಕ್ರಮ.
ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಅರ್ಚಕ ನಾರಾಯಣ ಭಟ್ ದೀಪ ಬೆಳಗಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಸಂಸದ ನಳಿನ್ ಕುಮಾರ್ ಕಟೀಲ್ ವಹಿಸಲಿದ್ದಾರೆ.ಅರಣ್ಯ ಸಚಿವರಾದ ರಮಾನಾಥ ರೈ ಅವರು ಸನ್ಮಾನಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸೇಸಪ್ಪ ಕೋಟ್ಯಾನ್ ಪಚಿನಡ್ಕ, ಬಾಲಭವನಸೊಸ್ಯೆಟಿ ಮಾಜಿ ರಾಜ್ಯಧ್ಯಕ್ಷೆ ಸುಲೋಚನ ಜಿಕೆ ಭಟ್, ಉಧ್ಯಮಿಗಳಾದ ರಘು ಎಲ್ ಶೆಟ್ಟಿ, ಜೀವರಾಜ ಶೆಟ್ಟಿಅಮ್ಮುಂಜೆಗುತ್ತು,ರೋಲ್ವಿನ್ ರೋಡ್ರಿಗಸ್ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಹರಿಶ್ಚಂದ್ರ ಭಾಗವಹಿಸಲಿದ್ದಾರೆ.
ಸನ್ಮಾನ- ಪುರಸ್ಕಾರ
ಶ್ರಮ ಜೀವಿ ಪ್ರಶಸ್ತಿ ಪುರಸ್ಕೃತರು ಕುಮಾರ ಮೆಸ್ಕಾಂ ಲೈನ್ ಮ್ಯಾನ್, ಮಾದರಿ ಮಹಳಾ ಪುರಸ್ಕೃತರು ಸೀತಮ್ಮ ಗಾಣದಬೆಟ್ಟು ಪೊಳಲಿ, ಸಾಮರಸ್ಯ ಪ್ರಶಸ್ತಿ ಪುರಸ್ಕೃತರು ಅಬುಬಕ್ಕರ್ ಅಮ್ಮುಂಜೆ, ಸಮಾಜ ಪ್ರಶಸ್ತಿ ಪುರಸ್ಕೃತರು. ರವಿಶಂಕರ್ ರಾವ್ ನೂಯಿ.
ರಾತ್ರಿ 10.30ರಿಂದ 12.30ರವರೆಗೆ ಸಂಗೀತ ರಸಮಂಜರಿ- ಪ್ರಕಾಶ್ ಮಹದೇವನ್ ಸಾರಥ್ಯದ ಸಾಯಿ ಮೆಲೋಡಿಸ್ ಪೊಳಲಿ ಇವರಿಂದ.
ರಾತ್ರಿ 12.30ರಿಂದ ರಾಜಶ್ರೀ ಯುವಕ ಮಂಡಲದ ಸದಸ್ಯರಿಂದ ಸಾಮಾಜಿಕ ಹಾಸ್ಯಮಯ ನಾಟಕ- “ನನ ಒಂತೆ ದಿನ”
ನಿರ್ದೇಶನ: ತುಳುನಾಡ ತುಳುಶ್ರೀ ರಮಾ ಬಿಸಿ ರೋಡ್ , ರಚನೆ:ಅರಣ್ಬಿಸಿರೋಡ್ ಎಂದು ರಾಜಶ್ರೀ ಯುವಕ ಮಂಡಲದ ಪ್ರಕಟನೆ ತಿಳಿಸಿದೆ.

