ಸುದ್ದಿ9 ಕೈಕಂಬ: ಕಂದಾವರ ಕೈಕಂಬದ ಶ್ರಿ ರಾಮ ಸೇವಾಂಜಲಿ ಶ್ರೀ ಕೋರ್ದಬ್ಬು ದೈವಸ್ಥಾನದ ನೇಮೋತ್ಸವದ ಪ್ರಯುಕ್ತ ಫೆ.14ರಂದು ಶನಿವಾರ ನಮ್ಮ ಕಲಾ ಸಂಸ್ಥೆಯ ಪಂಚಮ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮ ರಾತ್ರಿ 8ಕ್ಕೆ ನಡೆಯಿತು.
ಗುರುಪುರ ವಜ್ರ ದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆರ್ಶೀವಚನ ನೀಡಿದರು. ಅಧ್ಯಕ್ಷತೆಯನ್ನು ಮಾಜಿ ಜಿ.ಪಂ.ಸದಸ್ಯ ವಿನೋದ್ ಮಾಡ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಂಸದರಾದ ನಳಿನ್ ಕುಮಾರ್ ಕಟೀಲ್, ಉದ್ಯಮಿ ಚಂದ್ರಹಾಸ್ಟಿ. ಅಮೀನ್ಕಾವೂರ್, ಕೈಕಂಬ ಹರ್ಷಿತ್ ಕ್ಯಾಟ್ರ್ಸ್ನ ಮಾಲಕ ಹರೀಶ್ ಶೆಟ್ಟಿ ಏತ ಮೊಗರು ದೊಡ್ಡಮನೆ, ಕೈಕಂಬ ವಲಯ ಜನ ಜಾಗೃತಿ ವೇದಿಕೆಯ ಅಧ್ಯಕ್ಷ ಉದಯ ಆಳ್ವಉಳಿಪಾಡಿಗುತ್ತು, ಕಂದಾವರ ಕೋರ್ದಬ್ಬು ದೈವಸ್ಥಾನದ ಅಧ್ಯಕ್ಷ ಹರೀಶ್, ಪುಷ್ಪಲತಾ ಲೋಕನಾಥ್ ಶೆಟ್ಟಿಗಾರ್ಕೈಕಂಬ, ಕೈಕಂಬ ಮಾತೃ ಭೂಮಿ ಸಹಕಾರಿ ಸೌಹರ್ದ ವ್ಯವಸ್ಥಾಪಕರು ಮೋಹಿನಿ ಸದಾನಂದ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಂಜೆ 6ಗಂಟೆಗೆ ಕೈಕಂಬ ಧೂಮಾವತಿ ದ್ವಾರದ ಬಳಿ ದಿಕ್ಸೂಚಿ ಫಲಕ ಉದ್ಘಾಟನೆಗೊಂಡಿತು. 6.30ಕ್ಕೆ ಸಾಂಸ್ಕ್ರತಿಕ ಕಾರ್ಯಕ್ರಮಗಳು ದೇವರಾಜ್ ಆರ್ಯ ಮತ್ತು ಬಳಗದವರಿಂದ ಭಾವ ಸಂಗಮ ರಸ ಸಂಜೆ ಕಾರ್ಯಕ್ರಮ ನಡೆಯಿತು. 8.30ರಿಂದ ಸಿಂಗರ್ಸ್ ಡ್ಯಾನ್ಸ್ ಆಕಾಡೆಮಿ ಕಲಾಯಿ ಇವರಿಂದ ನೃತ್ಯ ವೈವಿಧ್ಯ ಕಾರ್ಯಕ್ರಮ ನಡೆಯಿತು.






















Nice Pics By Suddi9
Suddi9 is Best Website And Nice Photogrphy