ಬಂಟ್ವಾಳ : ರೋಟರಿ ಕ್ಲಬ್ ಬಂಟ್ವಾಳ ಹಾಗೂ ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ನಡೆಸುತ್ತಿರುವ ಭಾರತೀಯ ಜೀವಾ ವಿಮಾ ನಿಗಮದ ಆಮ್ ಆದ್ಮಿ ಯೋಜನೆಯ ಸದಸ್ಯೆ ಶ್ರೀಮತಿ ಕರ್ಗಿ ಶಂಭೂರು ನಿಧನರಾಗಿದ್ದು ಪರಿಹಾರ ಮೊತ್ತ ರೂ.31,000 (ಮೂವತ್ತೊಂದು ಸಾವಿರ)ವನ್ನು ಸೇವಾಂಜಲಿಯಲ್ಲಿ ನೀಡಲಾಯಿತು.
ನಡೆದ ಸರಳ ಸಮಾರಂಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ್ ಕಾರಂತ್ ನರಿಕೊಂಬು ರವರು ಮಕ್ಕಳಾದ ಧರ್ಣಪ್ಪ ಮುಗೇರ ಮತ್ತು ಅಣ್ಣು ಮುಗೇರರಿಗೆ ನೀಡಿದರು . ಈ ಸಂದರ್ಭ ಉಮೇಶ್ ಬೋಳಂತೂರು , ಆನಂದ ಸಾಲ್ಯಾನ್ , ದಿವಾಕರ ನರಿಕೊಂಬು , ಹಾಗೂ ಸೇವಾಂಜಲಿಯ ಕೃಷ್ಣ ಕುಮಾರ್ ಪೂಂಜ , ಪ್ರಶಾಂತ್ ತುಂಬೆ , ನಾರಾಯಣ ಬೆಳ್ಚಾಡ , ಹರಿಣಾಕ್ಷಿ ಮತ್ತಿತರರು ಉಪಸ್ಥಿತರಿದ್ದರು

