ದೈವವು ಕ್ಷೀಪ್ರ ಫಲದಾಯಕ-ಶ್ರೀ ವೆಂಕಟರಮಣ ಆಸ್ರಣ್ಣ
ಸುದ್ದಿ9 ಬಜಪೆ: ದೈವ ದೇವರುಗಳಿಗೆ ನಮ್ಮ ನಿಷ್ಕಲ್ಮಶ ಭಕ್ತಿ ಪ್ರಿಯವಾದದ್ದು. ದೀಪವು ಕತ್ತಲನ್ನು ಬೇಗನೇ ದೂರ ಮಾಡುತ್ತದೆ ಅದೇ ರೀತಿ ದೈವಗಳು ನಮ್ಮ ಕಷ್ಟಗಳನ್ನು ಬೇಗನೆ ಪರಿಹರಿಸುತ್ತದೆ.ದೈವವು ತುಳುನಾಡು ಪ್ರದೇಶಗಳಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿದೆ ಎಂದು ಶ್ರೀ ಕ್ಷೇತ್ರ ಕಟೀಲು ದೇವಸ್ಥಾನದ ಅರ್ಚಕರಾದ ಶ್ರೀ ವೆಂಕಟರಮಣ ಆಸ್ರಣ್ಣ ಹೇಳಿದರು.ಕಿನ್ನಿಪದವು ಶ್ರೀ ಬ್ರಹ್ಮ ಮುಗೇರ ಮಹಾಕಾಳೀ ದೈವಸ್ಥಾನಪುನಃಪ್ರತಿಷ್ಠ ಬ್ರಹ್ಮ ಕಲಶೋತ್ಸವ ಸಮಾರಂಭದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಶ್ರೀ ಶರತ್ ಸುವರ್ಣ ಪೈಲ ಸಮಾರಂಭದ ಅಧ್ಯಕ್ಷತೆವಹಿಸಿದ್ದರು.ಮುಖ್ಯಅತಿಥಿಯಾಗಿ ಮಾತಾಡಿದ ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಉಮಾನಾಥ ಕೋಟ್ಯಾನ್ ಅವರು ಪ್ರಪಂಚ ಎಂಬುದು ನಮ್ಮ ಮನೆ ಅದರಲ್ಲಿ ದೇವರ ಮನೆ ಎಂಬುದು ನಮ್ಮ ದೇಶ ಭಾರತ ಅದರಲ್ಲಿ ದೇವರ ಕೋಣೆ ಎಂಬುದು ನಮ್ಮ ತುಳುನಾಡು. ನಮ್ಮ ನಂಬಿಕೆಯೇ ನಮಗೆ ದೇವರು. ದೈವ ದೇವರ ಕೆಲಸಗಳಲ್ಲಿ ನಮ್ಮನ್ನು ನಾವು ತೊಡಗಿಸಕೊಳ್ಳಬೇಕು ಎಂದರು.
ಬಜಪೆ ಶಾಂತಿಭವನ ಮತ್ತು ಶಾಂತಿ ಇಂಡಸ್ಟ್ರೀಸ್‍ನ ಮಾಲಕ ರಾಘವೇಂದ್ರ ಆಚಾರ್ಯ,ಅಖಿಲ ಭಾರತ ಬಿಲ್ಲವರ ಯೂನಿಯನ್ ನ್ನ ಅಧ್ಯಕ್ಷರಾದ ಶ್ರೀ ನವೀನ್ ಚಂದ್ರ ಡಿ. ಸುವರ್ಣ, ಶ್ರೀ ಬ್ರಹ್ಮಶ್ರೀ ನಾರಯಣ ಗುರು ಸಮಾಜ ಸೇವಾ ಸಂಘ ಬಜ್ಪೆ ಅಧ್ಯಕ್ಷರಾದ ವಸಂತ್ ಕುಮಾರ್ ಬಂಗೇರ, ದ.ಕ ಮುಗೇರರ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀ ಕೃಷ್ಣಪ್ಪ ದೇರೆಬೈಲ್, ನಿವೃತ ಶಿಕ್ಷಕ ಶ್ರೀ ಜೋಸೆಫ್ ಸಿಲ್ವೇಸ್ಟರ್ ಡಿ’ಸೋಜಾ ತಾರಿಕಂಬ್ಳ, ಶ್ರೀ ಮಹಮ್ಮದ್ ರಫೀಕ್ 313 ಕರಂಬಾರು, ಸಮಿತಿಯ ಗೌರವಧ್ಯಕ್ಷರಾದ ಶ್ರೀರಾಮಚಂದ್ರ ಶೆಟ್ಟಿ, ಶ್ರೀ ದ.ಗ್ರಾ.ಯೋ ಮೇಲ್ವಿಚಾರಕರಾದ ಸುರೇಶ್, ಸಂಜೀವ ಮೇಸ್ತ್ರಿ ಮುಂತಾದದವರು ಉಪಸ್ಥಿತರಿದ್ದರು. ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಶ್ರೀ ಶರತ್ ಸುವರ್ಣ ಪೈಲ ಗಣ್ಯರನ್ನು ಗೌರವಿಸಿದರು.
ರಾಮಚಂದ್ರ ಶೆಟ್ಟಿ ಸ್ವಾಗತಿಸಿದರು ಕೆ.ಕೆ ಪೇಜಾವರ ನಿರೂಪಿಸಿದರು. ಕುಮಾರಿ ಶ್ರೇಯ ಪ್ರಾರ್ಥಿಸಿದರು. ಪ್ರದೀಪ್ ಸುರ್ವಣ ವಂದಿಸಿದರು.
brahmakalasa dharmika sabhe

By suddi9

Leave a Reply

Your email address will not be published. Required fields are marked *