ಬಂಟ್ವಾಳ: ನಾವು ಕಾಲಕ್ಕೆ ತಕ್ಕಂತೆ ಅಪ್ ಡೇಟ್ ಆಗಬೇಕಾಗಿದೆ.ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆಯಲ್ಲಿ ನೂತನ ವೆಬ್ ಸೈಟ್ ಲೋಕಾರ್ಪಣೆ ಗೊಳಿಸುತ್ತಿರುವುದು ಸಂತೋಷದ ವಿಷಯ ಎಂಬುದಾಗಿ ತುಂಬೆ ಮುಹಿಯುದ್ದೀನ್ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷ ಬಿ.ಅಬ್ದುಲ್ ಸಲಾಂ ಹೇಳಿದರು.

ತುಂಬೆ ಪದವಿ ಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿ ಮಹಮ್ಮದ್ ಸ್ವಫೀರ್ ಅವರ ತಾಂತ್ರಿಕ ಪರಿಣತಿಯಿಂದ ನೂತನವಾಗಿ ಉನ್ನತೀಕರಿಸಲ್ಪಟ್ಟ ಕಾಲೇಜಿನ ವೆಬ್ ಸೈಟ್ ಲೋಕಾರ್ಪಣೆ ಗೊಳಿಸಿ ಮತ್ತು ತುಂಬೆ ಪ.ಪೂ.ಕಾಲೇಜಿನಲ್ಲಿ ಡಾ.ಬಿ .ಅಹ್ಮದ್ ಹಾಜಿ ಅವರ 93 ನೆಯ ಹುಟ್ಟಿದ ಹಬ್ಬದ ಪ್ರಯುಕ್ತ  ಏರ್ಪಡಿಸಿದ್ದ  ಸಂಸ್ಥಾಪಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ವೆಬ್ ಸೈಟ್ ಗೆ ಚಾಲನೆ ನೀಡಿ ಅವರು ಮಾತನಾಡಿದರು.
ಪಿಟಿಎ ಅಧ್ಯಕ್ಷ ನಿಸಾರ್ ಅಹಮದ್ ವಳವೂರು ಶುಭ ಹಾರೈಸಿದರು.
ಕನ್ನಡ ಉಪನ್ಯಾಸಕ ಅಬ್ದುಲ್ ರಹಮಾನ್ ಡಿ.ಬಿ.ಡಾ.ಅಹಮದ್ ಹಾಜಿ ಮುಹಿಯುದ್ದೀನ್ ಅವರ ಸಂಸ್ಮರಣಾ ಭಾಷಣಗೈದರು
ಮುಹಿಯುದ್ದೀನ್ ಎಜುಕೇಶನ್ ಟ್ರಸ್ಟ್ ನ ಟ್ರಸ್ಟೀ ಬಿ.ಎಂ.ಅಶ್ರಫ್, ಕಾಲೇಜಿನ ನಿಕಟಪೂರ್ವ ಪ್ರಾಂಶುಪಾಲ ಕೆ.ಎನ್.ಗಂಗಾಧರ ಆಳ್ವ,ಬಿಎ ಐಟಿಐ ಪ್ರಾಂಶುಪಾಲ ನವೀನ್ ಕುಮಾರ್,ತುಂಬೆ ಕಾಲೇಜು ಪ್ರಾಂಶುಪಾಲ ವಿ.ಎಸ್.ಭಟ್,ಉಪ ಪ್ರಾಂಶುಪಾಲ ದಿನೇಶ ಶೆಟ್ಟಿ ಅಳಿಕೆ,ತುಂಬೆ ಆಂಗ್ಲ ಮಾಧ್ಯಮ ಶಾಲಾ ಮುಖ್ಯಸ್ಥೆ ಸೌಮ್ಯ, ರಕ್ಷಕ ಶಿಕ್ಷಕ ಸಂಘದ ಪದಾಧಿಕಾರಿಗಳಾದ ಮ್ಯಾಕ್ಸಿಂ ಕುವೆಲ್ಲೋ, ಗಫೂರ್,ಚಂಚಲಾಕ್ಷಿ,ಶಾಫಿ ಅಮ್ಮೆಮ್ಮಾರ್,ಶರೀಫ್ ತುಂಬೆ,ನಿಕಟಪೂರ್ವ ಮುಖ್ಯೋಪಾಧ್ಯಾಯ ಶ್ರೀನಿವಾಸ್ ಕೆ,ನಿವೃತ್ತ ಬೋಧಕರಾದ ರಾಜ ಎಸ್,ರಘುಪತಿ ಭಟ್,ನಿವೃತ್ತ ಬೋಧಕಿಯರಾದ ಶರ್ಮಿಳಾ ಎ,ಜಾನೆಟ್ ಪಸನ್ನ ಮತ್ತಿತರರು ಉಪಸ್ಥಿತರಿದ್ದರು.

 ಕಚೇರಿ ಅಧೀಕ್ಷಕ ಅಬ್ದುಲ್ ಕಬೀರ್ ಸ್ವಾಗತಿಸಿ ಪ್ರಸ್ತಾವನೆ ಗೈದರು.ಯೋಗೀಶ್ ಬೊಳ್ಳಾರಿ ಮತ್ತು ಅಶೋಕ್ ಸಹಕರಿಸಿದರು.ಇತಿಹಾಸ ಉಪನ್ಯಾಸಕ ಶರತ್ ಆಳ್ವ ನಿರೂಪಿಸಿದರು.  ಕನ್ನಡ ಮಾಧ್ಯಮ ಪ್ರೌಢಶಾಲಾ ಮುಖ್ಯಸ್ಥೆ ವಿದ್ಯಾ ಕೆ ವಂದಿಸಿದರು. 

By Suddi9

Leave a Reply

Your email address will not be published. Required fields are marked *