ಬಂಟ್ವಾಳ: ಪ್ರತಿಭಾ ಪುರಸ್ಕಾರ ವಿದ್ಯಾರ್ಥಿಗಳಿಗೆ ಇನ್ನಷ್ಟು ಸಾಧನೆ ಮಾಡಲು ಮತ್ತು ಇತರ ವಿದ್ಯಾರ್ಥಿಗಳಿಗೆ ಸ್ಪೂರ್ತಿಯನ್ನು ನೀಡುತ್ತವೆ. ಯಕ್ಷಗಾನವು ಮಕ್ಕಳ ಸರ್ವತೋಮುಖ ಬೆಳವಣಿಗೆ ಆತ್ಮಸ್ಥೈರ್ಯದ ಜೊತೆಗೆ ಸಂಸ್ಕಾರಯುತ ವ್ಯಕ್ತಿತ್ವವನ್ನುರೂಪಿಸುವಲ್ಲಿ ಮಹತ್ತರವಾದ ಪಾತ್ರವನ್ನು ವಹಿಸುತ್ತದೆ ಎಂದು   ಯಕ್ಷಧ್ರುವ ಪಟ್ಲ ಫೌಂಡೇಶನ್ ನ‌  ಯಕ್ಷಶಿಕ್ಷಣದ ಸಂಚಾಲಕರಾದ  ವಾಸುದೇವ ಐತಾಳ್ ರವರು ಹೇಳಿದರು.

 


ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಸ.ಪ.ಪೂ ಕಾಲೇಜಿನ ಪ್ರೌಢ ಶಾಲಾ ವಿಭಾಗದಲ್ಲಿ ಪ್ರಸಕ್ತ ಸಾಲಿನ ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಿದ ಎಲ್ಲಾ ವಿದ್ಯಾರ್ಥಿಗಳಿಗೆಪ್ರತಿಭಾ ಪುರಸ್ಕಾರ ಮತ್ತು ಯಕ್ಷಗಾನ ನಾಟ್ಯತರಗತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಇದೇ ವೇಳೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ 10 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತಲ್ಲದೆ ಸಂಸ್ಥೆಯ  ಹಿರಿಯ ವಿದ್ಯಾರ್ಥಿಗಳ ವತಿಯಿಂದ ಅತ್ಯಧಿಕ ಅಂಕ ಗಳಿಸಿದ ಮೂವರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಹಾಗೂ ಸಂಸ್ಥೆಯ ಸ್ಥಾಪಕಾಧ್ಯಕ್ಷರಾದ ದಿ. ವೆಂಕಟರಮಣ ಐತಾಳರ ಸ್ಮರಣಾರ್ಥ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು.


ಈ ಸಂದರ್ಭ ನಿವೃತ್ತ ಶಿಕ್ಷಕರಾದ ನಾರಾಯಣ ನಾಯಕ್ ಹಾಗೂಸಂಸ್ಥೆಯಲ್ಲಿ  ಮೂರು ವರ್ಷಗಳಿಂದ ಯಕ್ಷಗುರುಗಳಾಗಿ ಸೇವೆ ಸಲ್ಲಿಸಿದ  ಸಾಯಿ ಸುಮ ನಾವಡ ಇವರನ್ನು ಸನ್ಮಾನಿಸಲಾಯಿತು.
ಅದೇರೀತಿ ಸಂಸ್ಥೆಯಲ್ಲಿ 19 ವರ್ಷಗಳಿಂದ ಮುಖ್ಯ ಅಡುಗೆಯವರಾಗಿ ಸೇವೆ ಸಲ್ಲಿಸಿದ  ಸುನಂದರವರನ್ನು ಗೌರವಿಸಿ ಬೀಳ್ಕೊಡಲಾಯಿತು.


ಮುಖ್ಯ ಅತಿಥಿಗಳಾಗಿ ಪ್ರತಿಭಾಪುರಸ್ಕಾರ ಕಾರ್ಯಕ್ರಮದ  ಪ್ರಾಯೋಜಕರಾದ ಗಣೇಶಕೊಂಗುಜೆ,  ಯಕ್ಷ ಶಿಕ್ಷಣ ಗೌರವ ಸಲಹೆಗಾರರು, ಹಿರಿಯ ಯಕ್ಷಗಾನ ಕಲಾವಿದಅಶೋಕ್ ಶೆಟ್ಟಿ ಸರಪಾಡಿ,ಮಡಂತ್ಯಾರು ಜೇಸಿ ಅಧ್ಯಕ್ಷೆ,ಯಕ್ಷಗುರುಶ್ರೀಮತಿ ಸಾಯಿ ಸುಮ,ಯಕ್ಷ ಗುರುಗಳುಗಳಾದ ನರಸಿಂಹಯ್ಯ,ಪಟ್ಲಪೌಂಡೇಶನ್ ಸರಪಾಡಿ ಘಟಕದ ಅಧ್ಯಕ್ಷ  ಶಶಿಕಾಂತ್ ಶೆಟ್ಟಿ ಆರುಮುಡಿ,ಪಟ್ಲ ಫೌಂಡೇಶನ್ ಪುಂಜಾಲಕಟ್ಟೆ ಘಟಕದ ಅಧಗಯಕ್ಷ
ಹರೀಂದ್ರ ಪೈ  ಉಪಸ್ಥಿತರಿದ್ದರು.


ಶಾಲಾ ಎಸ್ ಡಿಎಂಸಿ ವಿಶೇಷ ಆಹ್ವಾನಿತ ಸದಸ್ಯರಾದ ಧನಂಜಯಶೆಟ್ಟಿ ಸರಪಾಡಿ , ರಾಮಕೃಷ್ಣ ಮಯ್ಯ , ಮಹಾಬಲ ಹೊಳ್ಳ, ಎಸ್ ಡಿಎಂಸಿ ನಿಕಟಪೂರ್ವ ಅಧ್ಯಕ್ಷರಾದ ರಾಜೇಶ್ ಶೆಟ್ಟಿ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ದಯಾನಂದ ಶೆಟ್ಟಿ ಅಮೈ, ಉಪಾದ್ಯಕ್ಷರಾದ ಅಶೋಕ ಶೆಟ್ಟಿ,ಪಟ್ಲ ಪೌಂಡೇಶ್ ನನ ಪುಂಜಾಲಕಟ್ಟೆ ಘಟಕದ ಸಂಚಾಲಕ ರಮೇಶ್ ಶೆಟ್ಟಿ ಮಜಲೋಡಿ,ಗೌರವ ಸಲಹೆಗಾರಯಶೋಧರ ಶೆಟ್ಟಿ ದಂಡೆ,ಹಿರಿಯ ವಿದ್ಯಾರ್ಥಿ ವಿಶ್ವನಾಥ,ಕೆಲಿಂಜಉಳ್ಳಾಲ್ತಿ ದೈವಸ್ಥಾನದಅನುವಂಶಿಕ ಮೊಕ್ತೇಸರರಾದಶಂಕರ ನಾರಾಯಣ ವೇದಿಕೆಯಲ್ಲಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್ ಡಿಎಂಸಿ ಅಧ್ಯಕ್ಷರಾದ ಶಲ ಸುಧಾ ಎನ್ ವಹಿಸಿದ್ದರು.
ಮುಖ್ಯ ಶಿಕ್ಷಕರಾದ  ಶ್ರೀಕಾಂತ್ ಎಂ.ಅವರು ಸ್ವಾಗತಿಸಿ, ಪ್ರಸ್ತಾವನೆಗೈದರು. ಶಾಲಾ ಶಿಕ್ಷಕ ಉದಯ ಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು.
ಶಿಕ್ಷಕಿಯರಾದ  ರಾಜೇಶ್ವರಿ.ಜಿ  ವಂದಿಸಿದರು. ಶಿಕ್ಷಕಿಯರಾದ ಪ್ರಿಯಾ ಎನ್, ಶೋಭ,  ಜಾನ್ ವಾಲ್ಡರ್  ಹಾಗೂ ಸಿಬ್ಬಂದಿಗಳು ಸಹಕರಿಸಿದರು. 

By Suddi9

Leave a Reply

Your email address will not be published. Required fields are marked *