ಬೀಜಿಂಗ್: ಒಬಾಮಾ ಭಾರತ ಭೇಟಿಯಿಂದ ಅಕ್ಷರಶಃ ಕಂಗಾಲಾಗಿರುವ ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು ತನ್ನ ದೇಶಕ್ಕೆ ಭೇಟಿಯಾದ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸುರಾಜ್ ಅವರನ್ನು ತರಾತುರಿಯಲ್ಲಿ ಭೇಟಿಯಾಗಿ ಸಮಾಲೋಚನೆ ನಡೆಸಿದರು.

ಭಾರತ ಮತ್ತು ಅಮೇರಿಕಾದ ಮಧ್ಯೆ ಮಿಲಿಟರಿ ಹಾಗೂ ಅಣುಬಂಧ ಒಪ್ಪಂದದಿಂದ ಕಂಗಾಲಾಗಿದ್ದ ಚೀನಾ ಅಧ್ಯಕ್ಷ ಪಿಂಗ್ ಉಂಟಾಗಿದ್ದ ಗೊಂದಲವನ್ನು ನಿವಾರಿಸುವ ಸಲುವಾಗಿ ಇತಿಹಾಸದಲ್ಲೇ ಮೊತ್ತ ಮೊದಲ ಬಾರಿಗೆ ತನ್ ದೇಶದ ಶಿಷ್ಟಾಚಾರವನ್ನೇ ಬದಿಗೊತ್ತಿ ಭಾರತದ ವಿದೇಶಾಂಗ ಸಚಿವೆ ಸುಷ್ಮಾರನ್ನು ಭೇಟಿಯಾಗಿದ್ದಾರೆ.
