ಯುನೆಸ್ಕೋ: ಸೂರ್ಯನಲ್ಲಿ ಈ ಬಾರಿ ಪ್ರಬಲ ಸ್ಪೋಟ ನಡೆದಿರುವುದನ್ನು ನಾಸಾ ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. 2015 ಜನವರಿ 13ರರಂದು ಅಮೇರಿಕಾದ ಕಾಲಮಾನ ಸಂಜೆ 4.20ರಲ್ಲಿ ಈ ಸ್ಫೋಟ ನಡೆದಿದೆ. ಅಲ್ಲದೆ ಇದರ ಬೆಂಕಿ ರಾತ್ರಿ 11.24ರವರೆಗೂ ಮುಂದುವರೆದಿತ್ತು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಈ ಸ್ಫೋಟದ ಚಿತ್ರವನ್ನು ದೂರದರ್ಶಕದ ಮೂಲಕ ತೆಗೆದಿದ್ದು, ಇದು ಅಧಿಕ ವಿಕಿರಣವನ್ನು ಹೊಸೂಸಿತ್ತು ಅಲ್ಲದೆ ಈ ಸ್ಫೋಟಬರಿಗಣ್ಣಿನಲ್ಲಿ ಗೋಚರಿಸಿತ್ತು ಎಂದು ಹೇಳಿದ್ದಾರೆ. ಈ ಸ್ಫೋಟದಿಂದ ಭೂಮಿಗೆ ಯಾವುದೇ ಅಪಾಯವಿಲ್ಲ, ಆದರೆ ಇದರ ವಿಕಿರಣದಿಂದ ಮುಂದೆ ಪರಿಣಾಮ ಬೀಳುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.



