ಕೈಕಂಬ: ಇತ್ತೀಚೆಗೆ ಚಿಕ್ಕ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಅತಿಯಾಗುತ್ತಿದ್ದು ಈ ನಿಟ್ಟಿನಲ್ಲಿ ಅವರಿಗೆ ಲೈಂಗಿಕ ದೌರ್ಜನ್ಯದ ಕುರಿತು ಮಾಹಿತಿ ನೀಡುವ ಅಗತ್ಯವಿದೆ ಎಂದು ರಾಜ್ಯದ ಹಿರಿಯ ನ್ಯಾಯಾಧೀಶ ಗಣೇಶ್ ಬಿ. ತಿಳಿಸಿದ್ದಾರೆ.
ಅವರು ಜ.29ರಂದು ಕಿನ್ನಿಕಂಬಂದ ರೋಸಾಮಿಸ್ತಿಕ ಪ್ರೌಢಶಾಲೆಯಲ್ಲಿ ನಡೆದ ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಅಧಿನಿಯಮದ ಬಗ್ಗೆ ಅರಿವು ಮತ್ತು ಮಕ್ಕಳೇ ಪರೀಕ್ಷೆಗೆ ಸಿದ್ಧರಾಗಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತಾಡುತ್ತಿದ್ದರು.
ಈ ಕಾರ್ಯಕ್ರಮವನ್ನು ಜಿಲಲಾ ಕಾನೂನು ಸೇವೆಗಳ ಪ್ರಾಧಿಕಾರ, ದ.ಕ-ಮಂಗಳೂರು ವಕೀಲರ ಸಂಘ, ಕರ್ನಾಟಕ ಬಾಲ ವಿಕಾಸ ಅಕಾಡೆಮಿ, ಧಾರವಾಡ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.
ನಂತರ ಮಾತಾಡಿದ ಗಣೇಶ್, ಚಿಕ್ಕ ಮಕ್ಕಳನ್ನು ಲೈಂಗಿಕ ಪೀಡನೆಗೊಳಿಸುವುದು ಅಪರಾಧ. ಇದರ ಬಗ್ಗೆ ಸೂಕ್ತ ಅರಿವು ನೀಡಿದರೆ ಮಕ್ಕಳು ಲೈಂಗಿಕ ಅಪರಾಧಗಳ ಬಗ್ಗೆ ಅರಿತು ತನ್ನನ್ನು ತಾನು ರಕ್ಷಿಸಿಕೊಳ್ಳಬಹುದು. ಲೈಂಗಿಕ ಪೀಡಣೆಗೊಳಗಾದರೆ ಸೂಕ್ತ ಅದರ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬಹುದು. ಅಲ್ಲದೆ ಗಂಡು-ಹೆಣ್ಣೆಂಬ ಲಿಂಗಾನುಪಾನ ಮಾಡಿಕೊಂಡು ಹೆಣ್ಣನ್ನು ಎರಡನೇ ದರ್ಜೆಯಲ್ಲಿ ನೋಡಬಾರದು ಎಂದರು. ಪರೀಕ್ಷೆಯ ಬಗ್ಗೆ ಕಿವಿಮಾತು ಹೇಳಿದ ಅವರು ಮಕ್ಕಳು ಪರೀಕ್ಷೆ ಬಂತೆಂದರ ಖಿನ್ನತೆಗೆ ಒಳಗಾಗುತ್ತಾರೆ. ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಂಡು ಅವರನ್ನು ಪ್ರೀತಿಯಿಂದ ಮಾತಾಡಿ ಹಿತವಚನ ನೀಡಿದಾಗ ಮಕ್ಕಳಿಗೆ ಪರೀಕ್ಷೆಯ ಭಯ ಹೋಗಲಾಡಿಸಿದರೆ ಮಕ್ಕಳು ಪರೀಕ್ಷೆಗೆ ಪೂರ್ಣ ಪ್ರಮಾಣದಲ್ಲಿ ಸಿದ್ಧರಾಗಿ ಉತ್ತಮ ಪ್ರತಿಭೆಯನ್ನು ತೋರ್ಪಡಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕಿ ಗಟ್ರೋಡ್ ವೇಗಸ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಹ್ಯಾದ್ರಿ ತಾಂತ್ರಿಕ ವ್ಯವಸ್ಥಪನಾ ಕಾಲೇಜು ಮತ್ತು ಸಲಹೆಗಾರ ಜಿ. ಅನಂತಪ್ರಭು ಪ್ರಾಧ್ಯಾಪಕ, ಜಿಲ್ಲಾ ಮಕ್ಕಳ ಸಂಕ್ಷರಣಾಧಿಕಾರಿ ಉಸ್ಮಾನ್ ಎ., ವಕೀಲೆ ಲೀಲಾವತಿ, ಮಂಗಳೂರು ದಕ್ಷಿಣದ ಬಿಇಓ ಜೌನೇಶ್, ಮಂಗಳೂರು ಎ ಸಿ ಡಿಪಿಓ ಶೋಭ ಪಿ., ಶಿಕಣ ಸಂಯೋಜಕಿ ಹೇಲ್ಡಾ, ಸಂಪನ್ಮೂಲವ್ಯಕ್ತಿಗಳಾದ ವೀಣಾ , ಪದ್ಮಶ್ರೀ,ಸಿಪ್ರೀಯಾನ್ ಡಿಸೋಜಾ, ವಾಸು, ರೋಸಾ ಮಿಸ್ತಿಕ ಮುಖ್ಯೋಪಧ್ಯಾಯಿನಿ ಜೋಯ್ಸ್ಲಿನ್ ಮತ್ತಿತರರು ಉಪಸ್ಥಿತರಿದ್ದರು.







