ಗುರುಪುರ ಬಿಲ್ಲವ ಸಮಾಜ ಸೇವಾ ಸಂಘ(ರಿ) ಮತ್ತು ಸ್ಪೂರ್ತಿ ಬಿಲ್ಲವ ಮಹಿಳಾ ಮಂಡಳಿ ಗುರುನಗರ, ಇದರ 54ನೇ ವರ್ಷದ ವಾಷರ್ಿಕೋತ್ಸವ ಮತ್ತು ಗುರುಪೂಜೆ ಜ.25 ಬಾನುವಾರದಂದು ನಡೆಯಿತು. ಶ್ರೀ ಸಾಯಿಶಾಂತಿ ಸರಪಾಡಿ ಇವರ ನೇತೃತ್ವದಲ್ಲಿ ಶ್ರೀ ಗುರುವರ್ಯರ ಮೂರ್ತಿಗೆ ಕಲಾಶಾಭಿಷೇಕ , ಗುರುಪೂಜೆ ನಡೆಯಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಅಖಿಲ ಭಾರತ ಬಿಲ್ಲವ ಏಕೀಕರಣ ಸಮಿತಿ (ರಿ) ಮಂಗಳೂರು ಇದರ ಅಧ್ಯಕ್ಷರಾದ ರವಿ ಪೂಜಾರಿ ಚಿಲಿಂಬಿ ಇವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧಾಕರಾದ ನಿವೃತ ಶಿಕ್ಷಕ ಹಾಗೂ ನಾಟಕ ರಂಗದ ಹಾಸ್ಯ ಕಲಾವಿದ ಸುರೇಶ್ ರಾವ್ ನೂಯಿ, ಅಂತರ್ ರಾಷ್ಟ್ರೀಯ ಪವರ್ ಲಿಫ್ಟರ್ ವಿನೋದ್ ರಾಜ್ ಮೂಡುಶೆಡ್ಡೆ, ಸ್ಥಳೀಯ ಸಾರ್ವಜನಿಕ ಸೇವಾಕರ್ತರಾದ ರಫೀಕ್ ಗುರುಪುರ ಇವರನ್ನು ಸನ್ಮಾನಿಸಲಾಯಿತು.
ಮಖ್ಯ ಅತಿಥಿಗಳಾಗಿ ಗುರುಪುರ ಗ್ರಾ.ಪ. ಅಧ್ಯಕ್ಷರಾದ ಪದ್ಮಿನಿ ಎಸ್. ಅಂಚನ್, ಮಾಜಿ ತಾ.ಪ. ಸದಸ್ಯರಾದ ಯಶವಂತ ಆಳ್ವ, ವಿ.ಹಿಂ. ಪರಿಷತ್ ಗುರುಪುರ ಪ್ರಖಂಡ ಅಧ್ಯಕ್ಷರಾದ ವಿಷ್ಣು ಕಾಮತ್, ಕರ್ನಾಟಕ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಸುರತ್ಕಲ್, ಕರ್ನಾಟಕ ಅಸಿಸ್ಟೆಂಟ್ ಇಂಜಿನಿಯರ್ ಪುರುಷೋತ್ತಮ ಬಿ., ಗ್ರಾ.ಪ. ಸದಸ್ಯ ಉಸ್ಮನ್, ಭುಜಂಗ ಪೂಜಾರಿ, ಸಾದೂರು, ಅಖಿಲ ಭಾರತ ಬಿಲ್ಲವ ಏಕೀಕರಣ ಸಮಿತಿಯ ಪ್ರಧಾನ ಕಾರ್ಯದರ್ಶಿ ದೀಪಕ್ ಕೋಟ್ಯಾನ್, ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸಂಘ ವಾಮಂಜೂರು ಅಧ್ಯಕ್ಷ ಸದಾನಂದ ಪೂಜಾರಿ, ಬ್ರಹ್ಮಶ್ರೀ ನಾರಾಯಣಗುರು ಭಜನಾ ಮಂದಿರ(ರಿ) ಪೆರ್ಮಂಕಿ, ಉಳೈಬೆಟ್ಟು ಅಧ್ಯಕ್ಷರಾದ ಗಂಗಾಧರ ಮಾಸ್ಟರ್, ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸಂಘ, ಗುರುನಗರ ಕಂದಾವರ ಅಧ್ಯಕ್ಷ ವಿಶ್ವನಾಥ ಪೂಜಾರಿ, ಮತ್ತು ಗುರುಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರು ಸುಧಾಕರ ಅಮೀನ್ ಪುಣಿಕೋಡಿ ಉಪಸ್ಥಿತರಿದ್ದರು. ರಾಜೇಶ್ ನಡುಗುಡ್ಡೆ ಸ್ವಾಗತಿಸಿದರು, ಮಾಧವ ಸುರ್ವಣ ವಾರ್ಷಿಕ ವರದಿ ವಾಚಿಸಿದರು, ನರೇಶ್ ನಿರೂಪಿಸಿದರು ಮಹಾಬಲ ಅಮೀನ್ ವಂದಿಸಿದರು. ಸ್ಥಳೀಯ ಪ್ರತಿಭೆಗಳಿಂದ ಸಾಸಂಕೃತಿಕ ಕಾರ್ಯಕ್ರಮ ಜರುಗಿತು.
