ಬಂಟ್ವಾಳ : ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿಯಲ್ಲಿ ನೆಟ್ಟು ಬೆಳೆಸಿದ ಸಸಿಗಳಿಗೆ 2ನೇ ಮತ್ತು 3ನೇ ವರ್ಷದ ಪ್ರೋತ್ಸಾಹ ಧನ ರೂ.1,45,000 ಮೊತ್ತದ ಚೆಕ್ಕುಗಳನ್ನು ಫಲಾನುಭವಿಗಳಿಗೆ ಅರಣ್ಯ , ಪರಿಸರ ಜೀವಿಶಾಸ್ತ್ರ ಸಚಿವರಾದ ಬಿ.ರಮಾನಾಥ ರೈ ಬಿ.ಸಿ.ರೋಡ್ ಕಚೇರಿಯಲ್ಲಿ ವಿತರಿಸಿದರು .

KAR_9518

ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ , ಸ್ಥಾಯಿ ಸಮಿತಿ ಅಧ್ಯಕ್ಷೆ ಐಡಾ ಸುರೇಶ್, ಕರೋಪಾಡಿ ಗ್ರಾ.ಪಂ.ಅಧ್ಯಕ್ಷ ಜಲೀಲ್ , ಸುಭಾಶ್ಚಂದ್ರ ಶೆಟ್ಟಿ , ಜಿನರಾಜ್ ಆರಿಗ , ಅರಣ್ಯಾಧಿಕಾರಿ ಸುಬ್ರಹ್ಮಣ್ಯ ರಾವ್ , ಉಪವಲಯ ಅರಣ್ಯಾಧಿಕಾರಿ ಸೀತಾರಾಮ ಶೆಟ್ಟಿ , ಕೆ.ಸಿ.ಮ್ಯಾಥ್ಯೂ , ಅರಣ್ಯ ರಕ್ಷಕರಾದ ವಿನಯಕುಮಾರ್ , ಚಿದಾನಂದ ಮತ್ತಿತರರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *