ಬಂಟ್ವಾಳ ತಾಲ್ಲೂಕಿನ ತುಂಬೆಯಲ್ಲಿ ಶನಿವಾರ ರಾತ್ರಿ ಆರಂಭಗೊಂಡ ಎರಡು ದಿನಗಳ ‘ವೀರ ರಾಣಿ ಅಬ್ಬಕ್ಕ ಉತ್ಸವ’ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯೆ ಡಾ.ಜಯಮಾಲ ಉದ್ಘಾಟಿಸಿ ಮಾತನಾಡಿದರು.
ಪ್ರಸಕ್ತ ದೇಶದಲ್ಲಿ ನಡೆಯುತ್ತಿರುವ ಮಹಿಳಾ ದೌರ್ಜನ್ಯ, ಅತ್ಯಾಚಾರ ಮತ್ತಿತರ ಕೃತ್ಯಗಳಿಗೆ ಕೇವಲ ಯುವತಿಯರು ಮತ್ತು ಮಹಿಳೆಯರಿಗೆ ಬುದ್ಧಿಮಾತು, ಡ್ರೆಸ್ಕೋಡ್ ಸಲಹೆಗೆ ಬದಲಾಗಿ ಯುವಕರು ಮತ್ತು ಪುರುಷರಲ್ಲಿಯೂ ಸಂಸ್ಕಾರ ಮೂಡಿಸಿ ಮಹಿಳೆಯರ ಬಗ್ಗೆ ಗೌರವ ಮೂಡಿಸುವ ಪ್ರಕ್ರಿಯೆ ನಡೆಯಬೇಕು. ಆ ಮೂಲಕ ಪ್ರಪ್ರಥಮ ಬಾರಿಗೆ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಚ್ಚಿದ ರಾಣಿ ಅಬ್ಬಕ್ಕನಂತಹ ಮಹಾನ್ ಶಕ್ತಿಗಳು ಪ್ರತಿಯೊಬ್ಬ ಭಾರತೀಯ ಮಹಿಳೆಗೂ ಸ್ಪೂರ್ತಿಯಾಗಬೇಕು ಎಂದು ವಿಧಾನಪರಿಷತ್ ಸದಸ್ಯೆ ಡಾ.ಜಯಮಾಲ ಹೇಳಿದ್ದಾರೆ.
24BTL-JAYAMAL

ಅವರು ತುಂಬೆಯಲ್ಲಿ ಶನಿವಾರ ರಾತ್ರಿ ಆರಂಭಗೊಂಡ ಎರಡು ದಿನಗಳ ‘ವೀರ ರಾಣಿ ಅಬ್ಬಕ್ಕ ಉತ್ಸವ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಇತಿಹಾಸದಲ್ಲಿ ಝಾನ್ಸಿರಾಣಿ ಮತ್ತು ಕಿತ್ತೂರು ಚೆನ್ನಮ್ಮರಿಗೆ ನೀಡಿದ ಗೌರವ ರಾಣಿ ಅಬ್ಬಕ್ಕನಿಗೆ ದೊರೆತಿಲ್ಲ ಎಂದು ಹೇಳಿದ ಅವರು, ಈಕೆಯನ್ನು ಪ್ರತಿನಿತ್ಯ ನೆನೆಯಲು ವಿಶ್ವವಿದ್ಯಾಲಯಗಳಲ್ಲಿ ಸಂಶೋಧನಾ ಕೇಂದ್ರ ಮೂಲಕ ಅಧ್ಯಯನ ಪೀಠ ತೆರೆಯಬೇಕು. ಎಂದರು.
ತನ್ನ ಜೀವಿತಾವಧಿಯಲ್ಲಿ ರಾಣಿ ಅಬ್ಬಕ್ಕನ ಚಲನಚಿತ್ರ ನಿರ್ಮಿಸಬೇಕು ಎಂಬ ಇಚ್ಚೆಯಿದ್ದು, ಅದನ್ನು ತ್ವರಿತವಾಗಿ ಈಡೇರಿಸುವುದಾಗಿ ಅವರು ಭರವಸೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಹತ್ಯೆ ಮಾಡಿದ ವ್ಯಕ್ತಿಗೆ ದೇವಸ್ಥಾನ ನಿರ್ಮಿಸುವವರ ವಿರುದ್ಧ ರಾಣಿ ಅಬ್ಬಕ್ಕನ ಕಿಚ್ಚು ಮತ್ತು ಆತ್ಮಸ್ಥೈರ್ಯ ನಮ್ಮೆಲ್ಲರಲ್ಲಿ ಮೂಡಿ ಬರಬೇಕು ಎಂದರು.

ಸಮಿತಿ ಗೌರವಾಧ್ಯಕ್ಷ ಆರೋಗ್ಯ ಸಚಿವ ಯು.ಟಿ.ಖಾದರ್ ಮಾತನಾಡಿ, ಈ ಹಿಂದೆ ಉಳ್ಳಾಲಕ್ಕೆ ಸೀಮಿತವಾಗಿದ್ದ ಅಬ್ಬಕ್ಕ ಉತ್ಸವ ವಿಸ್ತರಿಸಲು ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರೂ 25ಲಕ್ಷ ಅನುದಾನ ನೀಡಿದ್ದು, ಹಾಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ರೂ 40ಲಕ್ಷ ಅನುದಾನ ನೀಡಿದ್ದಾರೆ ಎಂದರು.
ಕರ್ನಾಟಕ ಲೇಖಕಿಯರ ಸಂಘದ ನಿಕಟಪೂರ್ವ ಅಧ್ಯಕ್ಷೆ ಸಂಧ್ಯಾ ರೆಡ್ಡಿ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಜಾನಕಿ ಬ್ರಹ್ಮಾವರ ವಿವಿಧ ಗೋಷ್ಠಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಶುಭ ಹಾರೈಸಿದರು.

ಪತ್ರಕರ್ತ ಮನೋಹರ ಪ್ರಸಾದ್, ರಾಜ್ಯ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ದಿವ್ಯಪ್ರಭಾ ಗೌಡ, ಕಮಾಂಡೆಂಟ್ ಸಿ.ರಂಗಸ್ವಾಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಗಟ್ರೂಡ್ ವೇಗಸ್, ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ, ಉಪನ್ಯಾಸಕ ಪ್ರೊ.ಕೆ.ತುಕಾರಾಮ ಪೂಜಾರಿ ಮತ್ತಿತರರು ಮಾತನಾಡಿ, ರಾಣಿ ಅಬ್ಬಕ್ಕನ ಬಗ್ಗೆ ಯುವಪೀಳಿಗೆ ಮತ್ತು ವಿದೇಶಿ ಪ್ರವಾಸಿಗರಿಗೆ ತಿಳಿಸಲು ಉಳ್ಳಾಲದಲ್ಲಿ ಸ್ಮಾರಕ ಭವನ ಮತ್ತು ಸೋಮೇಶ್ವರ ಮತ್ತಿತರ ಸಮುದ್ರ ತೀರದಲ್ಲಿ ‘ನೆರಳು ಬೆಳಕಿನ ಸಾಕ್ಷ್ಯಚಿತ್ರ ಪ್ರದರ್ಶನ’ ಅಗತ್ಯ ಎಂದರು.
ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ತಹಶೀಲ್ದಾರ್ ಮಹಮ್ಮದ್ ಇಸಾಕ್, ಗ್ರಾ.ಪಂ.ಅಧ್ಯಕ್ಷ ಮಹಮ್ಮದ್ ವಳವೂರು, ಜಿ.ಪಂ.ಸದಸ್ಯರಾದ ಮಮತಾ ಎಸ್.ಗಟ್ಟಿ, ಚಂದ್ರಪ್ರಕಾಶ ಶೆಟ್ಟಿ, ಎನ್.ಎಸ್.ಕರೀಂ, ಸಮಿತಿ ಸ್ವಾಗತಾಧ್ಯಕ್ಷ ಕೆ.ಜಯರಾಮ ಶೆಟ್ಟಿ, ಕಾರ್ಯಾಧ್ಯಕ್ಷ ದಿನಕರ ಉಳ್ಳಾಲ್, ಪ್ರಧಾನ ಕಾರ್ಯದರ್ಶಿ ಭಾಸ್ಕರ ರೈ ಕುಕ್ಕುವಳ್ಳಿ, ನಿರ್ಧೇಶಕ ಚಂದ್ರಹಾಸ ರೈ ಬಿ., ಪ್ರಮುಖರಾದ ಹೈದರ್ ಪರ್ತಿಪಾಡಿ, ಕೆ.ಕೆ.ಪೂಂಜ, ತಾರನಾಥ ರೈ ಮತ್ತಿತರರು ಇದ್ದರು.

By Suddi9

Leave a Reply

Your email address will not be published. Required fields are marked *