ಬಂಟ್ವಾಳ : ಕಳೆದ 21 ವರ್ಷಗಳಿಂದ ವೈದ್ಯಕೀಯ, ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸುತ್ತಿರುವ ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಸೇವಾ ಕಾರ್ಯಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಶನಿವಾರ ಕೃಷ್ಣನಗರದಲ್ಲಿರುವ ಸೇವಾಂಜಲಿ ಕಾರ್ಯಾಲಯಕ್ಕೆ ಭೇಟಿ ನೀಡಿದ ಅವರು, ಆರೋಗ್ಯ ಕೇಂದ್ರದ ಕಾರ್ಯವೈಖರಿಯನ್ನು ವೀಕ್ಷಿಸಿದರು. ಆರೋಗ್ಯ ತಪಾಸಣೆಗೆ ಬಂದಿರುವ ಶಿಬಿರಾರ್ಥಿಗಳೊಂದಿಗೆ ಸ್ವಲ್ಪ ಹೊತ್ತು ಕಳೆದರು.
KAR_9031
ಈ ಸಂದರ್ಭ ಮಾತನಾಡಿದ ಸಚಿವರು, ಆರ್ಥಿಕ  ಹಿಂದುಳಿದ, ಸಮಾಜದ ಮುಖ್ಯವಾಹಿನಿಯಿಂದ ಹೊರಗುಳಿದ ಜನರಿಗೆ ಸೇವಾಂಜಲಿ ಯಾವುದೇ ಫಲಾಪೇಕ್ಷೆಯಿಲ್ಲದೆ ಆರೋಗ್ಯ, ಶಿಕ್ಷಣ ನಿಸ್ವಾರ್ಥ ನೀಡುತ್ತಿದೆ. ಇಲ್ಲಿನ ಸೇವಾ ಮನೋಭಾವನೆ ಇತರ ಆರೋಗ್ಯ ಕೇಂದ್ರಗಳಿಗೆ ಮಾದರಿಯಾಗಿದೆ. ಕೇಂದ್ರದ ಸೇವೆಯನ್ನು ಮತ್ತಷ್ಟು ವಿಸ್ತರಿಸಲು ಸರಕಾರದ ಪ್ರೋತ್ಸಾಹ ಅಗತ್ಯ ಇದ್ದು, ಈ ನಿಟ್ಟಿನಲ್ಲಿ ಶ್ರಮಿಸುವುದಾಗಿ ಭರವಸೆ ನೀಡಿದರು.

ಜಿಪಂ ಸದಸ್ಯ ತುಂಬೆ ಚಂದ್ರಪ್ರಕಾಶ್ ಶೆಟ್ಟಿ, ಮೇರಮಜಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವೃಂದ ಪೂಜಾರಿ, ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ್ ಕಾರಂತ್ ನರಿಕೊಂಬು, ಸೇವಾಂಜಲಿಯ ಆಡಳಿತ ಟ್ರಸ್ಟಿ ಕೆ.ಕೆ.ಪೂಂಜ, ಪ್ರಮುಖರಾದ ಸೋಮಪ್ಪ ಕೋಟ್ಯಾಣ್ ತುಂಬೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯ ಮುಖ್ಯಸ್ಥ ಎಂ.ಕೆ. ಶಿವಪ್ಪ, ನಾರಾಯಣ ಬೆಳ್ಚಡ ಮೇರಮಜಲು, ಮೋಹನ್ ಬೆಂಜನಪದವು, ಪ್ರಶಾಂತ್ ಕುಮಾರ್ ತುಂಬೆ, ಸಂಜೀವಪೂಜಾರಿ, ನಾರಾಯಣ ಹೆಗ್ಡೆ, ತುಂಬೆ ಪ್ರಕಾಶ್ ಬಿ ಶೆಟ್ಟಿ, ಭಾಸ್ಕರ್ ಚೌಟ, ಸುರೇಶ್ ವೈ ತಲಪಾಡಿ, ನಾಗಪ್ಪ ಶೆಟ್ಟಿ ಮೇರಮಜಲು, ಸುನಿಲ್ ಫೆರ್ನಾಂಡಿಸ್ ಈ ಸಂದರ್ಭ ಉಪಸ್ಥಿತರಿದ್ದರು.
16 ಹೃದಯ ರೋಗಿ ಪತ್ತೆ!

ಹಿರಿಯ ಮುತ್ಸದ್ಧಿ ದಿ. ಕೆ. ಕಾಂತಪ್ಪ ಪೂಂಜ ಫರಂಗಿಪೇಟೆ ಅವರ ಸ್ಮರಣಾರ್ಥ ಸೇವಾಂಜಲಿ ಸಭಾಗೃಹದಲ್ಲಿ ನಡೆದ ಉಚಿತ ಹೃದಯ ಮತ್ತು ಕ್ಯಾನ್ಸರ್ ತಪಾಸಣಾ ಶಿಬಿರದಲ್ಲಿ 110 ಮಂದಿ ಪಾಲ್ಗೊಂಡರು. ಹೃದಯ ಸಂಬಂಧಿ ಕಾಯಿಲೆಗಳಿರುವ 16 ಮಂದಿಯನ್ನು ಪತ್ತೆಹಚ್ಚಲಾಯಿತು. ರೋಗಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಕೆ.ಎಸ್.ಹೆಗ್ಡೆ ಚ್ಯಾರಿಟೇಬಲ್ ಆಸ್ಪತ್ರೆಗೆ ಕಳುಹಿಸಲಾಗುವುದು ಸೇವಾಂಜಲಿ ಆಡಳಿತ ಟ್ರಸ್ಟಿ ಕೆ.ಕೆ.ಪೂಂಜ ತಿಳಿಸಿದ್ದಾರೆ.

ಸೇವಾಂಜಲಿ ಪ್ರತಿಷ್ಠಾನ, ಬಂಟ್ವಾಳ ರೋಟರಿ ಕ್ಲಬ್, ತುಂಬೆ ವಲಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ದೇರಳಕಟ್ಟೆ ಜ.ಕೆ.ಎಸ್.ಹೆಗ್ಡೆ ಚ್ಯಾರಿಟೇಬಲ್ ಆಸ್ಪತ್ರೆಯ ಸಹಯೋಗದಲ್ಲಿ ನಡೆದ ತಪಾಸಣಾ ಶೀಬಿರವನ್ನು ಹೃದಯ ತಜ್ಞ ಡಾ. ಸುಬ್ರಹ್ಮಣ್ಯಂ ಕೆ, ಕ್ಯಾನ್ಸರ್ ತಜ್ಞ ಡಾ. ಜಯರಾಮ ಶೆಟ್ಟಿ ನಡೆಸಿಕೊಟ್ಟರು. ಶಿಬಿರದಲ್ಲಿ ಇಸಿಜಿ, ಎಕ್ಕೋ ಕಾರ್ಡ್ ಯೋಗ್ರಾಂ, ಮಧುಮೇಹ, ಡಯಟ್ರಿಕನ್ಸ್ಲ್ಟೆಂಟ್ ತಪಾಸಣೆ ನಡೆಸಲಾಯಿತು.

By Suddi9

Leave a Reply

Your email address will not be published. Required fields are marked *