ಮಂಗಳೂರು: ಮರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಿಂದ (ಮರವೂರು ಸೇತುವೆ ಬಳಿ) ಹೊರಟು ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಪಾದಯಾತ್ರೆ 2ನೇ ವರ್ಷದ `ಅಮ್ಮನೆಡೆಗೆ ನಮ್ಮ ನಡೆ’ ಜನವರಿ 25ರಂದು ಭಾನುವಾರ ಬೆಳಿಗ್ಗೆ 8.30ಗಂಟೆಗೆ ನಡೆಯಲಿದೆ.

ಲೋಕಕಲ್ಯಾಣಾರ್ಥ, ಸಕಲ ಕಷ್ಟ ನಿವಾರಣೆಗೆ ಹಾಗೂ ಗ್ರಹಚಾರ ದೋಷ ನಿವಾರಣೆಗಾಗಿ ಅಮ್ಮನೆಡೆಗೆ ನಮ್ಮ ನಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ದಾರಿಯುದ್ದಕ್ಕೂ ನಿರಂತರ ಭಜನೆ, ಚೆಂಡೆಯೊಂದಿಗೆ, ಆಕರ್ಷಕ ನಡಿಗೆಗೆ ಕೆ.ವಾಸುದೇವ ಆಸ್ರಣ್ಣ, ಲಕ್ಷ್ಮೀನಾರಾಯಣ ಆಸ್ಪಣ್ಣ ಹಾಗೂ ಅನಂತ ಪದ್ಮನಾಭ ಆಸ್ರಣ್ಣ ಇವರ ಉಪಸ್ಥಿತಿಯಲ್ಲಿ ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ. ಯಾತ್ರೆಯ ಕೊನೆಯಲ್ಲಿ ಕಟೀಲು ಶ್ರೀದೇವಿಯ ದರ್ಶನ ನಡೆಯಲಿದೆ.
ಪಾದಯಾತ್ರೆಯಲ್ಲಿ ಭಾಗವಹಿ ಸುವ ಭಜನಾ ತಂಡಗಳು ಸಮಿತಿಯನ್ನು ಸಂಪರ್ಕಿಸಬೇಕು. ಪಾದಯಾತ್ರೆಯಲ್ಲಿ ಭಾಗವಹಿಸುವ ಭಕ್ತಾದಿಗಳು ಬೆಳಿಗ್ಗೆ 8ಗಂಟೆಗೆ ಮರವೂರು ದೇವಸ್ಥಾನದಲ್ಲಿ ಹಾಜರಿರಬೇಕು. ಭಾಗವಹಿಸುವ ಭಕ್ತಾದಿಗಳಿಗೆ ಮರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಬೆಳಿಗ್ಗೆ 7.30ರಿಂದ 8.30ರ ತನಕ ಫಲಹಾರದ ವ್ಯವಸ್ಥೆಯಿದೆ. ಯಾತ್ರೆಯ ಕೊನೆಯಲ್ಲಿ ಎಲ್ಲಾ ಭಕ್ತಾದಿಗಳಿಗೆ ಶ್ರೀ ಕ್ಷೇತ್ರ ಕಟೀಲಿನಲ್ಲಿ ಅನ್ನಪ್ರಸಾದವಿದೆ ಎಂದು ಪಾದಯಾತ್ರೆ ಸಮಿತಿಯ ಅಧ್ಯಕ್ಷ ಸಂದೀಪ್ ಶೆಟ್ಟಿ ಮರವೂರು ತಿಳಿಸಿದ್ದಾರೆ.
ಯಾಕಾಗಿ?
ನಂದಿನಿ ನದಿಯ ಮಧ್ಯೆ ಲಿಂಗರೂಪದಲ್ಲಿ ಉದಿಸಿ ಬಂದ ಜಲದುರ್ಗೆ, ವನದುರ್ಗೆ, ಶ್ರೀದೇವಿ ಭ್ರಮರಾಂಬಿಕೆ, ಕಟೀಲೇಶ್ವರಿ ಎನ್ನುವ ಹೆಗ್ಗಳಿಕೆಯನ್ನು ಪಡೆದು ನಂಬಿದವರಿಗೆ ಅನುಗ್ರಹ ವನ್ನೀಯುವ ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಿಯ ಪುಣ್ಯ ಸಾನಿಧ್ಯಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳ ಪಾದಯಾತ್ರೆ.
