ನವದೆಹಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಆತ ಎಲ್ಲೇ ಕುಳಿತಿದ್ದರೂ ಆತನನ್ನು ಎಳೆದುಕೊಂಡು ಬರುತ್ತೇನೆ ಎಂದು ವಿದೇಶಾಂಗ ಇಲಾಖೆ ವಕ್ತಾರ ಸೈಯದ್ ಅಕ್ಬುರುದ್ದೀನ್ ಸವಾಲು ಹಾಕಿದ್ದಾರೆ.
1993ರ ಬಾಂಬೆ ಸರಣಿ ಬಾಂಬ್ ಹಂತಕ ದಾವೂದ್ ಪಾಕಿಸ್ತಾನದಲ್ಲಿ ಅಡಗಿ ಕುಳಿತಿಉವ ಸುಳಿವು ಸಿಕ್ಕಿದೆ. ಆತ ಎಷ್ಟು ದಿನಾಮತ ತಲೆಮರೆಸಿಕೊಂಡಿರುತ್ತಾನೆಂದು ನೋಡಿಯೇ ಬಿಡುತ್ತೇನೆ. ಆತ ವಿಶ್ವದ ಯಾವುದೇ ಮೂಲೆಯಲ್ಲಿದ್ದರೂ ಸರಿ ಆತನನ್ನು ಎಳೆದುಕೊಂಡು ಬರುವುದು ಖಚಿತ ಎಂದು ಹೇಳಿದರು.

ibrahiam
ದಾವೂದ್ ಇಬ್ರಾಹಿಂ ಇತ್ತೀಚೆಗೆ ದುಬೈನ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರೊಂದಿಗೆ ಮಾತನಾಡಿರುವ ದೂರವಾಣಿ ಕರೆ ಬಹಿರಂಗವಾಗಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಈ ದೂರವಾಣಿ ಕರೆ ಆಧಾರದ ಮೇಲೆ ಆತ ಪಾಕಿಸ್ತಾನದ ಪೇಶಾವರದಲ್ಲಿ ಅಡಗಿ ಕುಳಿತಿರುವ ಮಾಹಿತಿ ದೊರೆತಿದೆ. ಇದನ್ನು ಬೇಹುಗಾರಿಕಾ ಮೂಲಗಳೂ ಖಚಿತಪಡಿಸಿವೆ ಎಂದರು.
ಗಲಭೆಗ್ರಸ್ಥ ಇರಾಕ್ ನಲ್ಲಿ ಕೆಲ ಭಾರತೀಯರು ಕಾಣೆಯಾಗಿರುವ ಕುರಿತು ವಿವರಣೆ ನೀಡಿದ ಸೈಯದ್ ಅಕ್ಬುರುದೀನ್, ಕಾಣೆಯಾಗಿರುವವರ ಪತ್ತೆಗಾಗಿ ಭಾರತ, ಇರಾಕ್ ದೂತವಾಸ ಕಛೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಅವರುಗಳ ಸುರಕ್ಷತೆಗಾಗಿ ಸರ್ಕಾರ ಎಲ್ಲ ರೀತಿಯ ಕ್ರಮ ಕೈಗೊಳ್ಳಲಿದೆ ಎಂದರು.

By suddi9

Leave a Reply

Your email address will not be published. Required fields are marked *