ಕೈಕಂಬ: ರಸ್ತೆ ಬದಿಯಲ್ಲೇ ನಿಂತು ಲಾಂಗು, ಮಚ್ಚು, ಪಿಕ್ಕಾಸಿ, ಕೊಡಲಿ ಮುಂತಾದ ಮಾರಕಾಯುಧಗಳನ್ನು ಮಾಡಿಕೊಡುವ ಅಲೆಮಾರಿ ಜನಾಂಗವೊಂದಿದ್ದು, ಸಾರ್ವಜನಿಕರು ಮುಗಿಬಿದ್ದು ಖರೀದಿಸುತ್ತಿದ್ದಾರೆ.
ರಾಜಸ್ಥಾನದ ಲಂಬಾಣಿ ಜನಾಂಗವೊಂದು ಕಳೆದೆರಡು ದಿನಗಳಿಂದ ಬಜ್ಪೆ ಠಾಣಾ ವ್ಯಾಪ್ತಿಯ ಗುರುಪುರ ಕೈಕಂಬದಲ್ಲಿ ಬೀಡುಬಿಟ್ಟಿದೆ. ಕಲ್ಲಿದ್ದಲಿನ ಸಹಾಯದಿಂದ ತಿದಿ ಒತ್ತಿ ಕಬ್ಬಿಣಕ್ಕೆ ಬೆಂಕಿ ನೀಡಿ ಅದು ಅದು ಕೆಂಪಾಗಿ ಕಾದ ನಂತರ ಅದಕ್ಕೆ ಮಚ್ಚು, ಲಾಂಗು, ಕೊಡಲಿಯಂಥಹಾ ನಾನಾ ರೂಪಗಗಳನ್ನು ನೀಡಲಾಗುತ್ತಿದೆ. ಸಾಮಾನ್ಯ ಮಚ್ಚವೊಂದು 350 ಬೆಲೆ ಬಾಳುತ್ತದೆ. ಅದರ ಜೊತೆಗೆ ಚೌಕಾಸಿ ಮಾಡಿದರೆ ಒಂದಷ್ಟು ಕಡಿಮೆ ಮಾಡಿ ಕೊಡುತ್ತಾರೆ.

 

langu (2)

langu (3)

langu (4)

langu (5)

langu (6)

langu (7)

langu (8)

langu (9)
ಲಂಬಾಣಿ ಜನಾಂಗದ ಕುಟಂಬವೇ ಈ ಗುಂಪಿನಲ್ಲಿದ್ದು ಗಂಡಸರು, ಹೆಂಗಸರು ಮಕ್ಕಳು ಎಂಬಂತೆ ಎಲ್ಲರೂ ಜೊತೆಯಾಗಿ ಕೆಲಸ ಮಾಡುತ್ತಿದ್ದಾರೆ. ಗುರುಪುರ ಕೈಕಂಬದ ಮಂಗಳೂರಿಗೆ ಹೋಗುವ ಬಸ್‍ಸ್ಟ್ಯಾಂಡ್ ಬಳಿ ಒಟ್ಟು ನಾಲ್ಕು ಕಡೆಗಳಲ್ಲಿ ಬೆಂಕಿ ಹಾಕಲಾಗಿದೆ. ಕಲ್ಲಿದ್ದಲಿನ ಬೆಂಕಿಯಾಗಿರುವದರಿಂದ ಅದರ ಶಾಖವೂ ಕೂಡಾ ಅಷ್ಟೇ ಕಠೋರವಾಗಿದೆ. ಈ ಕಲ್ಲಿದ್ದಲಿಗೆ ಮತ್ತೊಬ್ಬ ವ್ಯಕ್ತಿ ತಿದಿ ಒತ್ತುವ ಮೂಲಕ ಗಾಳಿ ಹಾಯಿಸಿ ಬೆಂಕಿ ಕೆಂಪಾಗಿ ಉರಿಯುವಂತೆ ಮಾಡುತ್ತಾನೆ. ಮತ್ತೊಬ್ಬಾತ ಕಬ್ಬಿಣದ ಗಟ್ಟಿಗಳನ್ನು ವಸ್ತುವೊಂದರ ಸಹಾಯದಿಂದ ಹಿಡಿದು, ಅದು ಕೆಂಪಾಗಿ ಕಾಯುವ ತನಕ ಶಾಖ ನೀಡಲಾಗುತ್ತದೆ. ಶಾಖಕ್ಕೆ ಕಬ್ಬಿಣ ಕರಗುವ ಮುನ್ನ ಅದನ್ನು ತೆಗೆದು ಅದನ್ನು ಮಚ್ಚು, ಲಾಂಗು, ಕೊಡಲಿ ಹೀಗೆ ಬೇಕಾದ ಆಕಾರಕ್ಕೆ ಬಗ್ಗಿಸಲಾಗುತ್ತದೆ. ಈ ರೀತಿ ಬಗ್ಗಿಸಲು ಮೂರು ಮಂದಿ ದೊಡ್ಡದೊಂದು ಚಮ್ಮಡಿ(ಸುತ್ತೆ) ಹಿಡಿದ ಒಬ್ಬರಾದಂತೆ ಒಬ್ಬರು ಒಬ್ಬರಾದಂತೆ ಒಬ್ಬರು ಬಡಿಯುತ್ತಲೇ ಇರುತ್ತಾರೆ. ಅದನ್ನು ಹಿಡಿದವನು ತನಗೆ ಬೇಕಾದಂತೆ ಆಕಾರ ನೀಡುತ್ತಾನೆ.
ಬಸ್‍ಸ್ಟ್ಯಾಂಡ್ ಹತ್ತಿರ ಟೆಂಟ್ ಹಾಕಿ ನಿಂತು ತನ್ನ ಕಾಯಕದಲ್ಲಿ ತೊಡಗಿರುವ ಈ ಲಂಬಾಣಿಗಳಿಂದ ಕಿರಿಕಿರಿ ಉಂಟಾಗುತ್ತದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಅಲ್ಲದೆ ಸಾರ್ವಜನಿಕರು ಬಂದು ಹೋಗುವ ಬಸ್‍ಸ್ಟ್ಯಾಂಡ್‍ನಂತಹಾ ಭಾಗದಲ್ಲೇ ಬೆಂಕಿಯ ಶಾಖದ ಜೊತೆಗೆ ಮಾರಕಾಯುಧಗಳನ್ನು ತಯಾರಿಸಿಕೊಡುವುದರಿಂದ ಆತಂಕವೂ ಎದುರಾಗಿದೆ ಎಂದು ಕೆಲವರ ಗಾಬರಿಗೆ ಕಾರಣವಾಗಿದೆ. ಈ ರೀತಿಯ ಅಪಾಯಕಾರಿ ಕೆಲಸದಲ್ಲಿ ತೊಡಗಿಕೊಂಡು ಮಕ್ಕಳೂ ಇರುವುದು ಕಂಡುಬರುತ್ತಿದೆ ಈ ಬಗ್ಗೆ ಸ್ಥಳೀಯ ಪಂಚಾಯತ್ ಆಗಲಿ, ಬಜ್ಪೆ ಪೊಲೀಸರಾಗಲಿ ಗಮನ ಹರಿಸದಿರುವುದು ಕೂಡಾ ಸಾರ್ವಜನಿಕರ ಕೋಪಕ್ಕೆ ಕಾರಣವಾಗಿದೆ.

By suddi9

One thought on “ರಸ್ತೆ ಬದಿಯಲ್ಲೇ ಲಾಂಗು, ಮಚ್ಚು, ಕೊಡಲಿ… ಭರ್ಜರಿ ಸೇಲ್!”
  1. The news is nothing but noise. These people are selling things which are quite essential in every house hold and not “Marakayuda” as described by the reporter.

Leave a Reply

Your email address will not be published. Required fields are marked *