ಆದರೆ ರಾವತ್ ಚೂಡಾವತ್ ತನ್ನ ಸುಂದರವಾದ ಪತ್ನಿಯನ್ನು ಬಿಟ್ಟು ಯುದ್ಧಕ್ಕೆ ಹೊರಡಲೇ ಇಲ್ಲ. ಇದನ್ನು ಕೇಳಿದ ಹಾಡಿರಾಣಿ ರಜಪೂತ ವಂಶಜರು ಯುದ್ಧ ಮಾಡಲೇಬೇಕು, ಒಂದು ವೇಳೆ ನೀನು ಯುದ್ಧದಲ್ಲಿ ಸತ್ತರೆ ನಾನೂ ನಿನ್ನ ಚಿತೆಗೆ ಹಾರಿ ಪ್ರಾಣ ಬಿಡುತ್ತೇನೆ ಎಂದು ಆತನನ್ನು ಹುರಿದುಂಬಿಸಿ ಕಳಿಸುತ್ತಾಳೆ. ರಾವತ್ ಈಕೆಯ ಕಾಟ ತಡೆಯಲಾರದೆ ಯುದ್ದಕ್ಕೆ ಹೊರಟುನಿಲ್ಲುತ್ತಾನೆ. ಇತ್ತ ಹಾಡಿರಾಣಿ ಗಂಡನಿಗೆ ಗೆಲುವಾಗಲಿ ಎಂದು ದೇವಿಯ ಪೂಜೆಗೆ ನಿಲ್ಲುತ್ತಾಳೆ. ಆದರೆ ರಾಜ ಪತ್ನಿಯ ಸೌಂರ್ಯಕ್ಕೆ ಮನಸೋತು ವಾಪಸ್ ಬಂದು ಅರಮನೆಯ ಬಾಗಿಲಲ್ಲಿ ನಿಂತು ನಿನ್ನ ನೆನಪಿಗೆ ಏನಾದರೂ ಕೊಟ್ಟು ಕಳಿಸು ಎಂದು ಕೂಗಿ ಹೇಳುತ್ತಾನೆ. ಇದನ್ನು ಕಂಡು ಹಾಡಿದೇವಿ ನನ್ನ ಸೌಂದರ್ಯಕ್ಕೆ ಮನಸೋತು ರಾಜಧರ್ಮ ಮರೆತಿದ್ದಾನೆ ಎಂದು ತನ್ನ ಸೇವಕಿಯನ್ನು ಕರೆಯುತ್ತಾಳೆ. ಈ ತಟ್ಟೆಯಲ್ಲಿ ನೆನಪಿನ ಕಾಣಿಕೆ ಇದೆ ಆದರೆ ಧರ್ಮರಕ್ಷಣೆಗಾಗಿ ಯುದ್ಧ ಮಾಡು ಎಂದು ಹೇಳುವಂತೆ ಹೇಳಿ ತನ್ನ ಕತ್ತನ್ನು ಕತ್ತಿಯಲ್ಲಿ ಕಡಿದು ತಲೆಯನ್ನು ತಟ್ಟೆಗೆ ಬೀಳುವಂತೆ ಮಾಡುತ್ತಾಳೆ.
ಸೇವಕಿ ಕಟ್ಟನ್ನು ತಂದು ರಾವತ್‍ಗೆ ನೀಡುತ್ತಾಳೆ. ರಾವತ್ ಕಟ್ಟನ್ನು ಬಿಚ್ಚಿ ನೋಡಿದಾಗ ತನ್ನ ಪತ್ನಿಯ ತಲೆಯನ್ನು ನೋಡಿ ಹೌಹಾರಿದ. ಸೇವಕಿಯಿಂದ ವಿಷಯ ಅರಿತ ರಾವತ್ ತನ್ನ ಮಡದಿಯ ತಲೆಯ ಕೂದಲಿನ ಸಹಾಯದಿಂದ ತಲೆಯನ್ನು ಸೊಂಟಕ್ಕೆ ಕಟ್ಟಿ ಯುದ್ದ ಮಾಡಿ ಔರಂಗಜೇಬನ ಸೈನ್ಯವನ್ನು ಧ್ವಂಸ ಮಾಡಿ ಯುದ್ಧ ಗೆಲ್ಲುತ್ತಾನೆ.
ತನ್ನ ಪತ್ನಿಯ ಸಾವಿನಿಂದ ಕಂಗಾಲಾಗಿದ್ದ ರಾವತ್ ತನ್ನ ತಲೆಯನ್ನೇ ತಾನ ಕಡಿದು ಅಸುನೀಗುತ್ತಾನೆ.




