ಶಬರಿ ಮಲೆಯಲ್ಲಿ ನೆಲೆಗೊಂಡ ಅಯ್ಯಪ್ಪನ ಸನ್ನಿಧಿಗೆ ಸಾವಿರಾರು ಭಕ್ತರು ಅಯ್ಯಪ್ಪ ದೇವರ ದಿವ್ಯ ದರುಶನ ಮಾಡಿ ಬರುತ್ತಾರೆ. ಅಯ್ಯಪ್ಪನ ಭಕ್ತಿಯ ಪರಾಕಾಷ್ಠೆಯಿಂದ ಅಯ್ಯಪ್ಪ ವೃತಧಾರಿಗಳು ಹಲವಾರು ದಿವ್ಯ ಅನುಭವವನ್ನು ಪಡೆದು ಪುನೀತರಾಗುತ್ತಾರೆ. ಮಾಲೆ ಧರಿಸಿ ಪಾದರಕ್ಷೆ ಧರಿಸದೆ, ದಿನಕ್ಕೆ ಒಂದು ಹೊತ್ತು ಅನ್ನಾಹಾರ ಸೇವಿಸಿ, ಕಪ್ಪು ಬಣ್ಣದ ವಸ್ತ್ರ ಧರಿಸಿ ಒಂದು ಮಂಡಲ(41 ದಿನಗಳು) ವೃತಾಚರಣೆ ಕೈಗೊಂಡು ಅಯ್ಯಪ್ಪನ ಸನ್ನಿಧಿಗೆ ತೆರಳಿ ಇರುಮುಡಿ ಸಮರ್ಪಿಸಿ ಬರುವ ಭಕ್ತರಿಗೆ ಒಂದು ರೀತಿಯ ಅಲೌಕಿಕ ದಿವ್ಯ ಅನುಭವ ಸಿಗುತ್ತದೆ.
ಅಯ್ಯಪ್ಪ ದೇವಸ್ಥಾನವು ಸಮುದ್ರ ತೀರದಿಂದ 914 ಮೀಟರ್ ಎತ್ತರದಲ್ಲಿ ಪೆರಿಯಾರ್ ಹುಲಿಧಾಮದ ಭಾಗವಾದ ಗೊಂಡಾರಣ್ಯದ ಮಧ್ಯ ಭಾಗದಲ್ಲಿದೆ. ಇದು ಪತ್ತಿನಂತಿಟ್ಟ ಜಿಲ್ಲೆಯ ರಾನ್ನಿ ತಾಲೂಕಿನ ಪರಿನಾಡು ಗ್ರಾಮಗಳನ್ನೊಳಗೊಂಡಿದೆ. ಪಂಪಾನದಿಯವರೆಗೆ ವಾಹನಗಳಲ್ಲಿ ಬರುವ ಭಕ್ತರು ಅಲ್ಲಿಂದ ಶಬರಿಮಲೆ ಸನ್ನಿಧಿಗೆ ತಲುಪಲು 4 ಕಿ.ಮೀ. ಕಡಿದಾದ ಗುಡ್ಡದ ದಾರಿಯನ್ನು ಏರಬೇಕಾಗುತ್ತದೆ.
ಶಬರಿಮಲೆ ದೇವಾಲಯವು ಭಕ್ತ ದರ್ಶನಕ್ಕಾಗಿ ಉತ್ಸವಕಾಲ ಹೊರತು ಪ್ರತಿ ಮಲಯಾಳ ತಿಂಗಳ ಮೊದಲ 5 ದಿನಗಳಲ್ಲಿ ತೆರೆದಿರುತ್ತದೆ. ಉತ್ಸವ ಕಾಲದಲ್ಲಿ `ಮಂಡಲ ಪೂಜೆ ‘ ಮತ್ತು `ಮಕರ ವಿಳಕ್ಕು’ ನಡೆಯುವ ಪುಣ್ಯ ಮುಹೂರ್ತಗಳಲ್ಲಿ ಎರಡೂವರೆ ತಿಂಗಳು ಭಕ್ತದರ್ಶನಕ್ಕಾಗಿ ತೆರೆದಿಡಲಾಗುತ್ತದೆ. ಉತ್ಸವ ಸಮಯವು ಆರಂಭವಾಗುವುದು ಮಯಯಾಳ ತಿಂಗಳು ವೃಶ್ಚಿಕಂ ಒಂದಕ್ಕೆ (ನವಂಬರದಲ್ಲಿ) ಮತ್ತು ಕೊನೆಗೊಳ್ಳುವುದು ಮಕರಂ ಒಂದಕ್ಕೆ (ಜನವರಿಯಲ್ಲಿ). ಅಲ್ಲದೆ ಶಬರಿಮಲೆ ದೇವಾಲಯವು ಕೇರಳದ ಪ್ರಧಾನ ಉತ್ಸವಗಳಾದ ಓಣಂ, ವಿಷು, ಹಸ್ತ ಚಿತ್ರ, ನಿರಪುತ್ತರಿ (ಮನೆತುಂಬು ಹುತ್ತರಿ) ಮತ್ತು ಪೈಂಗುಣಿ ಉತ್ತರಂ (ಉತ್ತರಾಷಾಡ) ದಿನಗಳಲ್ಲಿ ದೇವಾಲಯದ ಬಾಗಿಲು ತರೆಯುತ್ತಾರೆ. ಮಂಡಲ ಪೂಜೆ ಮತ್ತು ಮಕರವಿಳಕ್ಕು ಸಮಯದಲ್ಲಿ ಲಕ್ಷಗಟ್ಟಲೆ ಅಯ್ಯಪ್ಪ ಭಕ್ತರು ಸನ್ನಿಧಿಗೆ ಬರುತ್ತಾರೆ. ಪಂಪಾನದಿಯಿಂದ ಸನ್ನಿಧಾನಕ್ಕೆ 3000 ಅಡಿ ಅಂತರವಿದೆ. ಶಬರಿಮಲೆಯನ್ನೊಳಗೊಂಡು ಒಟ್ಟು 18 ಬೆಟ್ಟಗಳಿವೆ. ಅದರಲ್ಲಿ ನೀಲಕ್ಕಲ್, ಕಲಕೆಟ್ಟಿ ಹಾಗೂ ಕರಿಮಲೆ ಪ್ರಮುಖವಾದವುಗಳು. ಕೆಲವರು ಕರಿಮಲೆ ಮುಖಾಂತರ 18 ಕಿ.ಮೀ. ಪಾದಯಾತ್ರೆಯ ಮೂಲಕ ಕಡಿದಾದ ಗುಡ್ಡದಲ್ಲಿ ಎರಡು ದಿನಗಳ ಕಾಲ ನಿರಂತರ ಸಂಚರಿಸಿ ಶಬರಿಮಲೆಗೆ ತಲುಪುತ್ತಾರೆ. ಇನ್ನು ಕೆಲವರು ಪಂಪಾ ನದಿಯಿಂದ ನಾಲ್ಕಯ ಕಿ.ಮೀ. ಸಂಚರಿಸಿ ಸನ್ನಿಧಾನಕ್ಕೆ ತಲುಪುವವರಿದ್ದಾರೆ. ದೇವಸ್ಥಾನದ ಆಡಳಿತವನ್ನು ತಿರುವಂಕೂರು ದೇವಸ್ವಂ ಆಡಳಿತ ಮಂಡಳಿ ವಹಿಸುತ್ತದೆ. ಕೇರಳ ರಾಜ್ಯಕ್ಕೆ ಶಬರಿಮಲೆ ದೇವಸ್ಥಾನ ಆದಾಯ ತರುವಂತಹಾ ದೇವಸ್ಥಾನವಾಗಿದೆ.

ayyappa (1)


ayyappa (3) ayyappa (4)

ayyappa (5)

ayyappa (6)

shabari holy steps

shabari male (3)

shabari male (4)

shabari male (5)

shabari male (8)

shabari male (9)

shabari male (11)

shabari male (12)

shabari male (13)

shabari male (15)

shabari male (16)

shabari male (17)

shabari male (18)

shabari male (19)

shabari male (20)

shabari male (21)

shabari male (22)

shabari male (23)

shabari male (24)

shabari male (25)

shabari male (26)

shabari male (27)

shabari male (28)

shabari male (29)

shabari male (30)

shabari male (31)

shabari male (32)

shabari male (33)

shabari male (34)

shabari male (37)

shabari male (38)

shabari male (39)

shabari male (40)

shabari male (41)

shabari male (42)

shabari male (43)

shabari male (44)

shabari male (45)

shabari male (46)

shabari male (47)

shabari male (48)

shabari male (49)

shabari male (50)

shabari male (51)

shabari male (52)

shabari male (53)

shabari male (54)

shabari male (55)

shabari male (56)

shabari male (57)

shabari male (58)

shabari male (59)

shabari male (60)

shabari male (62)

shabarimalesteps

shabri

zamle

 

 

ಶಬರಿಮಲೆಯಲ್ಲಿ ನಿಂತು ದೇವಸ್ಥಾನದ ಸುತ್ತಲಿನ ವಿಹಂಗಮ ನೋಟವನ್ನು ನೋಡಿದಾಗ ನಮಗೆ ಇಡೀ ಜಗತ್ತೇ ಕಪ್ಪು ಬಣ್ಣದಿಂದ ಕೂಡಿದಂತೆ ಬಾಸವಾಗುತ್ತದೆ. ಯಾಕೆಂದರೆ ಶಬರಿಮಲೆಗೆ ಕಪ್ಪು ವಸ್ತ್ರಧಾರಿಗಳಾಗಿ ಯಾಕಾಗಿ ಬರುತ್ತಾರೋ ಅದೇ ರೀತಿ ಅಲ್ಲಿನ ಬಣ್ಣವೂ ಕಪ್ಪಾಗಿರುವಂತೆ ಭಾಸವಾಗುತ್ತದೆ. ಕಪ್ಪು ವಸ್ತ್ರ ವೈರಾಗ್ಯದ ಸಂಕೇತವಾಗಿರುವುದರಿಂದ ಇದನ್ನು ಧರಿಸಿ ಅಯ್ಯಪ್ಪನ ದರುಶನ ಮಾಡಬೇಕೆನ್ನುವುದು ಪ್ರತೀತಿ. ಮುಖ್ಯವಾಗಿ ಅಲ್ಲಿನ ವನಚರಗಳೂ ಸಹ ಕಪ್ಪು ಬಣ್ಣದಿಂದ ಕೂಡಿದೆ. ಕಪ್ಪು ಬಣ್ಣದ ಕೋತಿ, ಬಣ್ಣದ ಜೇಡ, ಕಪ್ಪು ಬಣ್ಣದ ಸಹಸ್ರಪದಿ ಇವೆಲ್ಲಾ ಇಲ್ಲಿನ ವಿಶೇಷತೆಗಳಾಗಿದೆ. ಅಲ್ಲದೆ ಇಲ್ಲಿನ ಕ್ರಿಮಿ ಕೀಟಗಳು ಸಹ ಕಪ್ಪು ಬಣ್ಣದಿಂದ ಕೂಡಿರುತ್ತದೆ. ಪಾಕೃತಿಕವಾಗಿ ನೋಡಿದರೂ ಸಹ ಶಬರಿಮಲೆಗೂ ಪಕ್ಕು ಬಣ್ಣಕ್ಕೂ ಸಂಬಂಧವಿರುವಂತೆ ಕಂಡುಬರುತ್ತದೆ.
ಶಬರಿಮಲೆಗೆ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ರಾಜ್ಯಗಳಿಂದ ಭಕ್ತರು ಬರುತ್ತಾರೆ. ಶಬರಿಮಲೆ ಸನ್ನಿಧಾನವನ್ನು ತೆರಳುವವರು ಅಚ್ಚನಕೋವಿಲ್, ಅರ್ಯನಕಾವು, ಕುಲತುಪಾಶ, ಎರುಮೆಲಿಯಲ್ಲಿರುವ ಶ್ರೀ ಧರ್ಮಶಾಸ್ತ ದೇವಸ್ಥಾನ, ಕಲಕೆತ್ತಿಯಲ್ಲಿರುವ ಶಿವ-ಪಾರ್ವತಿ ದೇವಸ್ಥಾನವನ್ನು ಸಂದರ್ಶಿಸಬಹುದು..
ಸನ್ನಿಧಾನದ ಸಮೀಪ ಪಂಪಾ ನದಿಯಿದೆ. ಇದರ ಸಮೀಪ ವಿನಯಕರ್ ದೇವಸ್ಥಾನ, ಮಾಲಿಕಪುರತಮ್ಮನ್ ದೇವಸ್ಥಾನ, ಪಂದಲ ಕ್ಷೇತ್ರ, ಇದರ ಮಧ್ಯದಲ್ಲಿ ಅಯ್ಯಪ್ಪ ಸನ್ನಿಧಾನ ಕಂಡುಬರುತ್ತದೆ. ಶ್ರೀ ಸನ್ನಿಧಾನ ಬಂಗಾರದಿಂದ ಕೂಡಿದ್ದು ಧ್ವಜಸ್ತಂಭವೂ ಸಹ ಚಿನ್ನದಿಂದಲೇ ಕೂಡಿದೆ. ಈ ಧ್ವಜಸ್ತಂಭವನ್ನು ಬದಲಿಸಬೇಕೆಂದು ಅಷ್ಟಮಂಗಳ ಪ್ರಶ್ನೆಯಿಂದ ತಿಳಿದುಬಂದಿದೆ.
ಪ್ರತೀ ನವೆಂಬರ್ 15ರಿಂದ ಮಂಡಲಪೂಜೆ ಆರಂಭಗೊಂಡ ಬಳಿಕ ಎರಡು ತಿಂಗಳ ಕಾಲ ಭಕ್ತರು ಮಾಲೆ ಧರಿಸಿಕೊಂಡು ಬರುತ್ತಾರೆ. ಜನವರಿ 14ರಂದು ಮಕರಜ್ಯೋತಿ ಆದ ಬಳಿಕ ಜನವರಿ 20ರಂದು ಮಕರವಿಳಕ್ಕು ಕೊನೆಗೊಳ್ಳುತ್ತದೆ.
ಪ್ರತಿದಿನ 16.5 ಗಂಟೆಗಳ ಕಾಲ ಅಯ್ಯಪ್ಪ ಸ್ವಾಮಿಯ ದರ್ಶನ ಸಾರ್ವಜನಿಕರಿಗೆ ಸಿಗಲಿದೆ. ಬೆಳಗ್ಗೆ 4 ಗಂಟೆಗೆ ಆರಂಭವಾಗುವ ದರ್ಶನ ಸಮಯ ಮಧ್ಯಾಹ್ನ 1.30ಕ್ಕೆ ಉಚ್ಛಪೂಜೆಗೆ ಬಾಗಿಲು ಮುಚ್ಚಲಿದೆ ನಂತರ 4 ಗಂಟೆಗೆ ಬಾಗಿಲು ತೆರೆದರೆ 11 ಗಂಟೆಗೆ ಅಥಳಪೂಜೆ ನಂತರ ದರ್ಶನ ಮುಕ್ತಾಯವಾಗಲಿದೆ.
ಸುಮಾರು 2000ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ, ಕೊಯಮತ್ತೂರಿನ ಕ್ಷಿಪ್ರ ಕಾರ್ಯಪಡೆಯ ಸಿಬ್ಬಂದಿ ದೇಗುಲದ ಸುತ್ತ ಸದಾ ಸನ್ನದ್ಧರಾಗಿರುತ್ತಾರೆ, ಇದಲ್ಲದೆ, ಲೋಹ ಶೋಧಕ, ಬ್ಯಾಗ್ ಸ್ಕ್ಯಾನರ್ ಮುಂತಾದ ಉಪಕರಣಗಳನ್ನು ಬಳಸಲಾಗುತ್ತದೆ.
ಅಪ್ಪಂ, ಅರವಣ ಪಾಯಸ ಇಲ್ಲಿನ ಪ್ರಮುಖ ಪ್ರಸಾದ. ಇರುಮುಡಿಯಯಲ್ಲಿ ಹೊತ್ತುಕೊಂಡು ಬಂದ ತುಪ್ಪವನ್ನು ಅಯ್ಯಪ್ಪನ ಮೂರ್ತಿಗೆ ಅಭಿಷೇಕ ಮಾಡಿ ಅದ್ನು ಭಕ್ತರಿಗೆ ಸಮರ್ಪಿಸಲಾಗುತ್ತದೆ.
ಕೆಲವು ಅಶಕ್ತ ಭಕ್ತರು ಸನ್ನಿಧಾನಕ್ಕೆ ಸಂದರ್ಶಿಸಲಾಗದಿದ್ದರೆ ಡೋಲಿಯ ಸಹಾಯ ಪಡೆಯಬಹುದು. ನಾಲ್ಕು ಮಂದಿ ಕಟ್ಟುಮಸ್ತಿನ ಆಳುಗಳು ಡೋಲಿ ಹೊತ್ತುಕೊಂಡು ಭಕ್ತರನ್ನು ದೇವಳದವರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಹಿಂತಿರುಗಿ ತರುತ್ತಾರೆ. ಭಕ್ತರು ಅನಾರೋಗ್ಯ ಪೀಡಿತರಾದರೆ ಚಿಕಿತ್ಸೆ ಕೊಡುವ ಸವಲಭ್ಯವಿದೆ.
ವ್ಯಾವಹಾರಿಕ ಕ್ಷೇತ್ರವನ್ನಾಗಿಸಿದ ಕೇರಳ ಸರಕಾರ:
ಧಾರ್ಮಿಕ ಕ್ಷೇತ್ರವಾಗಬೇಕಾಗಿದ್ದ ಶಬರಿಮಲೆಯನ್ನು ಕೇರಳ ಸರಕಾರ ವ್ಯಾವಹಾರಿಕ ಕ್ಷೇತ್ರವನ್ನಾಗಿ ಪರಿವರ್ತಿಸಿದೆ. ಪ್ರತಿಯೊಂದನ್ನೂ ಹಣದಲ್ಲೇ ಅಳೆಯುವ ಹಾಗೂ ಶಬರಿಮಲೆಗೆ ಸಂದರ್ಶನ ನಡೆಸುವ ಭಕ್ತರನ್ನು ಮಂಡಳಿ ಕಡೆಗಣಿಸುತ್ತಿರುವುದು ಶಬರಿಮಲೆಗೆ ತೆರಳುವ ಭಕತರಿಗೆ ಬೇಸರ ತರಿಸುತ್ತದೆ. ಲಕ್ಷಾಂತರ ಭಕ್ತರು ಭೇಟಿ ನೀಡುವ ಈ ಪ್ರದೇಶವು ಸರಿಯಾದ ನಿಯಂತ್ರಣವಿಲ್ಲದೆ ಯಾವಾಗ ಏನಾಗಬಹುದು ಎಂಬ ಆತಂಕದಲ್ಲಿ ಕಳೆಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಅಶುಚಿ ಕ್ಷೇತ್ರ: ಶಬರಿ ಮಲೆ ಕ್ಷೇತ್ರವನ್ನು ಶುಚಿಯಾಗಿಡಿ ಎಂಬ ಸೂಚನಾ ಫಲಕಗಳು ಅಲ್ಲಲ್ಲಿದ್ದರೂ ಭಕ್ತರು ಮಾತ್ರ ಕ್ಷೇತ್ರವನ್ನು ಅಶುಚಿ ಮಾಡಿಯೇ ತೆರಳುತ್ತಾರೆ. ಪಂಪಾ ನದಿಯ ಬಳಿ ಇರುವ ಶೌಚಾಲಯಗಳನ್ನು ಮುಚ್ಚಿರುವುದರಿಂದ ಭಕ್ತರು ಪಂಪಾಕ್ಷೇತ್ರದಲ್ಲಿ ಸ್ನಾನಮಾಡುವ ಸಂದರ್ಭದಲ್ಲಿ ಅದರಲ್ಲೇ ಮಲಮೂತ್ರ ವಿಸರ್ಜಿಸಿ ಅಶುಚಿ ಕ್ಷೇತ್ರವನ್ನಾಗಿ ಪರಿವರ್ತಿಸಿದ್ದಾರೆ. ಪಂಪಾಕ್ಷೇತ್ರದಲ್ಲಿ ಮಿಂದು ಶುದ್ಧರಾಗಿ ಸನ್ನಿಧಾನಕ್ಕೆ ಬರಬೇಕಾಗಿರುವ ಭಕ್ತರು ಪಂಪಾಕ್ಷೇತ್ರದ ಅಶುದ್ಧ ನೀರಿನಿಂದಾಗಿ ಅಶುದ್ಧರಾಗಬೇಕಾಗುತ್ತದೆ.
ಆದರೆ ಸನ್ನಿಧಾನದಲ್ಲಿ ಒಂದೇ ಸಮನೆ ನುಗ್ಗುವುದರಿಂದ ಇರುಮುಡಿ ಹೊತ್ತುಕೊಂಡು ಬರುವ ನಿಶಕ್ತ ಭಕ್ತರಿಗೆ ಇದರಿಂದ ಅನೇಕ ತೊಂದರೆಯಾಗುವುದು ಕಂಡುಬರುತ್ತದೆ. ಒಂದೇ ಸಮನೆ ನುಗ್ಗುವ ಭಕ್ತರನ್ನು ನಿಯಂತ್ರಿಸಲು ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಶಬರಿಮಲೆಯಲ್ಲಿ ನೂಕನುಗ್ಗಲಿನಿಂದಾಗಿ ನಿತ್ಯ ಸಮಸ್ಯೆ ತಲೆದೋರುತ್ತಲೇ ಇರುತ್ತದೆ. ಸರತಿ ಸಾಲಿನಲ್ಲಿ ಬರುವ ಭಕ್ತರು ಮುಂಗಡ ಟಿಕೆಟ್ ಹಣಕೊಟ್ಟರೆ ಅವರಿಗೆ ಬೇರೆಯದೇ ಆದ ಸರತಿ ಸಾಲನ್ನು ಕಲ್ಪಿಸಿ ಅವರಿಗೆ ಸನ್ನಿಧಾನಕ್ಕೆಬೇಗ ತಲುಪುವಂತೆ ಮಾಡುವ ವ್ಯವಸ್ಥೆ ಮಾಡಲಾಗುತ್ತಿದೆ. ಅಲ್ಲದೆ ಕೇರಳ ಸರಕಾರ ಭಕ್ತರನ್ನು ಯಾವ ರೀತಿ ದರೋಡೆ ನಡೆಸುತ್ತದೆ ಎಂದರೆ ಅಯ್ಯಪ್ಪ ಭಕ್ತರೆಂದಾದರೆ ಟೋಲ್ಗೇಟ್(ಪ್ರಯಾಣ ಸುಂಕ) ದರ ಹೆಚ್ಚಾಗುತ್ತದೆ. ಸಾವಿರಾರು ರೂ.ಗಳನ್ನು ಭಕ್ತರಿಂದ ವಸೂಲಿಬಾಜಿ ಮಾಡಲಾಗುತ್ತದೆ.
ಅಯ್ಯಪ್ಪ ಕ್ಷೇತ್ರ ಇನ್ನೂ ಸುಧಾರಿಸಿಕೊಳ್ಳಬೇಕು. ಬರುವ ಭಕ್ತರಿಗೆ ಗೌರವ ಕೊಟ್ಟು ಅವರನ್ನು ಆದರದಿಂದ ಸ್ವಾಗತಿಸುವ ಹಾಗೂ ಅವರಿಗೆ ಸರಿಯಾದ ಮೂಲಭೂತ ಸೌಕರ್ಯ ಒದಗಿಸುವ ಕೆಲಸವನ್ನು ಟಿಡಿಪಿ ಮಾಡುವುದು ಅವಶ್ಯವಿರುತ್ತದೆ.
-ಗಿರಿ

By suddi9

6 thoughts on “ಶಬರಿಮಲೆ: ಹಲವು ಅಚ್ಚರಿಗಳ ಬೀಡು”
  1. ತುಂಬಾ ಮಹತವಪೂರ್ಣ ಲೇಖನ. ಸಮಗ್ರ ಮಾಹಿತಿಯ ಜೊತೆಗೆ ಸಮಸ್ಯೆಗಳನ್ನೂ ಒದಗಿಸುವ ಪ್ರಯತ್ನ ೀ ಲೇಖನದಲ್ಲಿ ಮಾಡಲಾಗಿದೆ. ಅಯ್ಯಪ್ಪನ ಮೂಲವಿಗ್ರಹದ ಫೋಟೋ ಹಾಕಿದ್ದಕ್ಕೆ ನಿಮಗೆ ಅಭಿನಂದನೆಗಳು….

  2. preethiya girish malali avre nimma lekhanavannu modalindaloo nodiddene. enadroo vishesha iruttade nimma lekhanadalli. nivu bareyuv prathi lekhana kooda nanna manasannu kadiddu nija.

  3. girish avre nimma chikka cameradalli serehididiruva chitragalu adbhutave sari. ayyappana vigraha nodi namge tumba khusiyagide. nimma prathibhe amogha. nivu bareda lekhana namma manassige natuvudu gyaranti. it is God gift for you dear…. lv u…

Leave a Reply

Your email address will not be published. Required fields are marked *