ಕೈಕಂಬ: ಯಕ್ಷಕಲಾ ಪೊಳಲಿ ಇದರ 31ನೇ ವರ್ಧಂತ್ಯುತ್ಸವದ ಅಂಗವಾಗಿ ಶ್ರೀ ಕ್ಷೇತ್ರ ಪೊಳಲಿಯ ರಾಜಂಗಣದಲ್ಲಿ ಅ.11ರಂದು ಭಾನುವಾರ ಬೆಳಗ್ಗೆ ಗಂಟೆ 8.30ರಿಂದ ರಾತ್ರಿ ಗಂಟೆ 10.30ರ ತನಕ ಜರಗಲಿರುವ ಪೊಳಲಿ ಯಕ್ಷೋತ್ಸವ -2026 ಇದರ ಆಮಂತ್ರಣ ಪತ್ರಿಕೆಯ ಬಿಡುಗಡೆ ಸಮಾರಂಭವು ಆ.23ರಂದು ಭಾನುವಾರ ಶ್ರೀ ಕ್ಷೇತ್ರ ಪೊಳಲಿಯಲ್ಲಿ ನಡೆಯಿತು.

ಕ್ಷೇತ್ರದ ಪ್ರಧಾನ ಅರ್ಚಕ ಹಾಗೂ ಅನುವಂಶೀಯ ಮೊಕ್ತೇಸರರಾದ ಮಾಧವ ಭಟ್‌ ಪ್ರಾರ್ಥನೆ ಮಾಡಿ ಪ್ರಸಾದ ನೀಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.  ರಾಮಕೃಷ್ಣ ಮಠ ಪೊಳಲಿಯ ಸ್ವಾಮಿ ವಿವೇಕಚೈತನ್ಯಾನಂದ ಸ್ವಾಮೀಜಿಯವರು ಆಮಂತ್ರಣ ಪತ್ರಕೆ ಬಿಡುಗಡೆಗೊಳಿಸಿ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಸಂಚಾಲಕರಾದ ವೆಂಕಟೇಶ್‌ ನಾವಡ ಪೊಳಲಿ,ಸಂಸ್ಥಾಪಕ ಅ,ನ.ಭ ಪೊಳಲಿ,ಪ್ರಮುಖರಾದ ಭುವನೇಶ್‌ ಪಚ್ಚಿನಡ್ಕ, ಯಶವಂತ ಕೋಟ್ಯಾನ್‌ ಪೊಳಲಿ, ಸುಬ್ರಾಯ ಕಾರಂತ ಪೊಳಲಿ, ಲೋಕೇಶ್‌ ಭರಣಿ, ಮೋಹನ್‌ ಬಿಲ್ವಪತ್ರೆ,ನವೀನ್‌ ಕಟ್ಟಪುಣಿ,ಸಂಘಟಕ ಬಿ.ಜನಾರ್ಧನ ಅಮ್ಮುಂಜೆ,ಪ್ರಸಿದ್ಧ ಕಲಾವಿದ ಬಿ.ಮೋಹನ್‌ ಕುಮಾರ್‌ ಅಮ್ಮುಂಜೆ,ಭಾಗವತರಾದ ಚಿನ್ಮಯ್‌ ಕಲ್ಲಡ್ಕ, ಶ್ರೀಮತಿ ಶ್ರೇಯಾ ರೋಹಿತ್‌ ಉಚ್ಚಿಲ, ಮದ್ದಳೆಗಾರ ರೋಹಿತ್‌ ಉಚ್ಚಿಲ,ಸಮರ್ಥ ಉಡುಪ ಕತ್ತಲ್ಸಾರ್‌, ಹಾಗೂ ರಾಮಕೃಷ್ಣ ತಪೋವನದ ಪೊಳಲಿಯ ಯಕ್ಷಗಾನ ತಾರಭೇತಿ ಕೇಂದ್ರದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *