ಗುರುಪುರ : ಇಲ್ಲಿನ ಗೋಳಿದಡಿಗುತ್ತಿನಲ್ಲಿ ಆ. ೨೮ರಂದು ಗುತ್ತಿನ ಚಾವಡಿಯ ಸಂಪ್ರದಾಯದಂತೆ ಶ್ರೀ ಗುರು ಮಹಾಕಾಲೇಶ್ವರ ದೇವರು, ಶ್ರೀ ವೈದ್ಯನಾಥಾದ್ಯ ಪಂಚ ದೇವತೆಗಳಿಗೆ ಪ್ರಾರ್ಥನೆ ಸಲ್ಲಿಸಿದ ಬಳಿಕ ಗುತ್ತಿನ ಚಾವಡಿಯಲ್ಲಿ ವಾರ್ಷಿಕ ರಕ್ಷಾ ಬಂಧನ ಕಾರ್ಯಕ್ರಮ ನಡೆಯಿತ

ಗೋಳಿದಡಿಗುತ್ತಿನ ಗಡಿಕಾರ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಅವರು ಮಾತನಾಡಿ, ರಕ್ಷಾ ಬಂಧನ ಜಾತಿ-ಧರ್ಮ ಮೀರಿದ ಬಾಂಧವ್ಯಕ್ಕೆ ಸಂಕೇತ. ಪರಸ್ಪರ ರಕ್ಷಣೆ ಮತ್ತು ಕಷ್ಟ-ಸುಖಗಳಲ್ಲಿ ಭಾಗಿಯಾಗುವ ಧ್ಯೋತಕವಾಗಿ ಈ ಸಂಪ್ರದಾಯ ಬೆಳೆದುಕೊಂಡು ಬಂದಿದೆ ಎಂದರು.

ಹಿಂದೂ ಮುಖಂಡ ಹರಿಕೃಷ್ಣ ಬಂಟ್ವಾಳ ಮಾತನಾಡಿ, ನಮ್ಮ ರಕ್ಷಣೆಯೊಂದಿಗೆ ಇತರರ ರಕ್ಷಣೆಯೂ ಮುಖ್ಯ. ಅವರ ಭಾವನೆಗಳಿಗೂ ಮಹತ್ವವಿದೆ. ಇದರಲ್ಲಿ ತಾರತಮ್ಯ, ಅಸ್ಪೃಶ್ಯತೆ ಎಂಬುದು ಇರಕೂಡದು. ಹಿಂದೂಗಳೆಲ್ಲ ಸಮಾನರು ಎಂಬ ಭಾವನೆ ಈ ಆಚರಣೆಯಲ್ಲಿ ಅಡಕವಾಗಿದೆ ಎಂದು ಹೇಳಿದರು.

ಸುನೀಲಾ ಪಿ. ಶೆಟ್ಟಿ ಸ್ವಾಗತಿಸಿ, ನಿರೂಪಿಸಿದರು. ಕೆಲವರು ಅಭಿಪ್ರಾಯ ಹಂಚಿಕೊಂಡರು. ಚಾವಡಿ ಮಿತ್ರರು, ಗುತ್ತಿನ ಹಿತೈಷಿಗಳು, ಉಷಾ ವಿ. ಡಿ. ಶೆಟ್ಟಿ ಇದ್ದರು. ಪ್ರತಿಯೊಬ್ಬರೂ ಪರಸ್ಪರ ರಕ್ಷೆ ಕಟ್ಟಿಕೊಂಡು ರಕ್ಷಾ ಬಂಧನ ಆಚರಿಸಿದರು.

By Suddi9

Leave a Reply

Your email address will not be published. Required fields are marked *