ಗುರುಪುರ : ಮಂಗಳೂರು ಮಹಾನಗರ ಪಾಲಿಕೆಯ ೨೦ನೇ ತಿರುವೈಲು ವಾರ್ಡ್ನ ಕೆತ್ತಿಕಲ್‌ನಲ್ಲಿ ನಿರ್ಮಾಣಗೊಳ್ಳಲಿರುವ ಹೊಸ ಅಂಗನವಾಡಿ ಕಟ್ಟಡ ಕಾಮಗಾರಿಗೆ ಶಾಸಕ ಡಾ. ಭರತ್ ಶೆಟ್ಟಿ ಅವರು ಆ. ೨೨ರಂದು ಭೂಮಿಪೂಜೆ ನೆರವೇರಿಸಿದರು.

ಈ ಭಾಗದ ಜನರ ಬಹುದಿನಗಳ ಕನಸು ಈಗ ನನಸಾಗಿದೆ. ಈ ವಾರ್ಡ್ನಲ್ಲಿ ತಲಾ ೨೦ ಲಕ್ಷ ರೂ ಅನುದಾನದಲ್ಲಿ ೨ ಅಂಗನವಾಡಿ ಕಟ್ಟಡ ನಿರ್ಮಾಣವಾಗಲಿದೆ. ಶೀಘ್ರ ಮತ್ತೊಂದು ಅಂಗನವಾಡಿ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಲಿದೆ. ಕ್ಷೇತ್ರದ ಅಭಿವೃದ್ಧಿಯಲ್ಲಿ ಅಂಗನವಾಡಿಗಳಿಗೆ ಹೊಸ ಕಟ್ಟಡ ನಿರ್ಮಾಣ ಕಾರ್ಯವೂ ಮಹತ್ವದ್ದಾಗಿದೆ. ಈ ಹಿನ್ನೆಲೆಯಲ್ಲಿ ಅಗತ್ಯ ಅನುದಾನ ಸಿಕ್ಕಿದೆ. ಇಲ್ಲಿ ೨೦ ಸೆಂಟ್ಸ್ ಜಾಗ ಕಾದಿರಿಸುವಲ್ಲಿ ನಿಕಟಪೂರ್ವ ಕಾರ್ಪೊರೇಟರ್ ಹೇಮಲತಾ ಆರ್. ಸಾಲ್ಯಾನ್ ಅವರ ಶ್ರಮವಿದೆ ಎಂದು ಶಾಸಕರು ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಕಾರ್ಪೊರೇಟರ್ ಹೇಮಲತಾ ಸಾಲ್ಯಾ, ಉದ್ಯಮಿ ರಘು ಸಾಲ್ಯಾನ್, ಲಿಂಗಪ್ಪ ಸಾಲ್ಯಾನ್, ಬಾಬು ಸಾಲ್ಯಾನ್, ಶೇಖರ ಟೈಲರ್, ಜೈ ಶಂಕರ್ ಮಿತ್ರ ಮಂಡಳಿ ಅಧ್ಯಕ್ಷ ಸಂತೋಷ್ ಆಚಾರ್ಯ, ಜೈ ಶಂಕರ್ ಮಾತೃ ಮಂಡಳಿ ಅಧ್ಯಕ್ಷೆ ಸೌಮ್ಯಾ ಡಿ. ಬಂಗೇರ, ಅಶೋಕ್ ಅಮೀನ್, ಅನಿಲ್ ಕುಮಾರ್ ರೈ, ದಿನೇಶ್ ಜೆ. ಕರ್ಕೇರ ಸಾನದಮನೆ, ಭಾವೇಶ್ ಶೆಟ್ಟಿ, ಬೂತ್ ಅಧ್ಯಕ್ಷ ಚರಣ್‌ರಾಜ್, ಗಿರೀಶ್ ಆಚಾರ್ಯ, ವಸಂತ್ ಆಚಾರ್ಯ, ದಿವಾಕರ ಆಚಾರ್ಯ, ಅಂಗನವಾಡಿ ಶಿಕ್ಷಕಿ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *