ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಬಂಟ್ವಾಳ ಇದರ ಪಾಣೆಮಂಗಳೂರು ಒಕ್ಕೂಟದ ಅಧ್ಯಕ್ಷರಾಗಿ ನಾರಾಯಣ ಕುಲಾಲ್ ಇವರು ಆಯ್ಕೆಯಾಗಿರುತ್ತಾರೆ.

ಕಾರ್ಯದರ್ಶಿಯಾಗಿ ಬಬಿತ, ಉಪಾಧ್ಯಕ್ಷರಾಗಿ ನಯನ ಪಾಣೆಮಂಗಳೂರು, ಜತೆ ಕಾರ್ಯದರ್ಶಿ ದಿವ್ಯಾ ,ಕೋಶಾಧಿಕಾರಿ ಪದ್ಮಾವತಿ ಶೆಟ್ಟಿಗಾರ್ ಆಯ್ಕೆಯಾಗಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.
