ಬಂಟ್ವಾಳ: ಇದು ರಸ್ತೆಯ ಅಥವಾ ಕೆಸರುಗದ್ದೆಯ ಎಂಬುದು ಪತ್ತೆಹಚ್ಚುವುದೇ ಕಷ್ಟ ಸಾಧಗಲವಾಗಿದೆ.ತೀರಾ ಹದಗೆಟ್ಟು ವಾಹನ ಬಿಡಿ ಪಾದಚಾರಿಗಳಿಗು ನಡೆದಾಡಲು ದುಸ್ಥರವಾಗಿದೆ.

ಈ ಕೆಸರುಮಯ ರಸ್ತೆ ಇರುವುದು ಬಂಟ್ವಾಳ ತಾಲೂಕಿನ ಕುರಿಯಾಳ ಪಡು ಟಿ.ಸಿ ಯಿಂದ ಕಾಂಬೋಡಿ ದೈವಸ್ಥಾನದ ವರೆಗೆ ಪ್ರಸ್ತುತ ಸುರಿಯುತ್ತಿರುವ ಮಳೆಯಿಂದಾಗಿ ಕುರಿಯಾಳ ಪಾಡು ಟಿ.ಸಿ ಯಿಂದ ಕಾಂಬೋಡಿ ದೈವಸ್ಥಾನವನ್ನು ಸಂಪರ್ಕಿಸುವ ಈ ರಸ್ತೆಯು ಸಂಪೂರ್ಣವಾಗಿ ಕೊಚ್ಚಿಹೋಗಿದ್ದು, ರಸ್ತೆಯ ಈ ದುಃಸ್ಥಿತಿಯಿಂದಾಗಿ ಸಾರ್ವಜನಿಕ ವಾಹನ ಸರ್ಕಸ್ ಮಾಡಿಕೊಂಡೆ ಸಂಚರಿಸಬೇಕಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.ರಸ್ತೆಯುದ್ದಕ್ಕೂ ಕೆಂಪು ಮಣ್ಣು ಕರಗಿ ಕೆಸರುಮಯವಾಗಿ ದೊಡ್ಡ ಹೊಂಡಗಳು ಬಿದ್ದಿರುವುದರಿಂದ ಸಂಚಾರ ತೀರಾ ದುಸ್ತರವಾಗಿದೆ.
ದ್ವಿಚಕ್ರ ವಾಹನ, ಶಾಲಾ ಬಸ್ಸುಗಳು ಮತ್ತು ಇತರೆ ವಾಹನಗಳು ಸಂಚರಿಸಲು ಸಾಧ್ಯವಾಗದೇ ರಸ್ತೆಯಲ್ಲೇ ಕೆಟ್ಟುನಿಲ್ಲುವ ಪರಿಸ್ಥಿತಿ ಉಂಟಾಗಿದೆ. ರಸ್ತೆಯ ಸ್ಥಿತಿಯನ್ನುಗಂಭೀರವಾಗಿ ಪರಿಗಣಿಸಿ ಸಾರ್ವಜನಿಕರು ಹಾಗೂ ಶಾಲಾ ಮಕ್ಕಳ ಹಿತದೃಷ್ಟಿಯಿಂದ ಪಂಚಾಯತ್ ವತಿಯಿಂದ ಈ ಕೂಡಲೇ ಸ್ಥಳ ಪರಿಶೀಲನೆ ನಡೆಸಿ, ರಸ್ತೆಯ ತುರ್ತು ದುರಸ್ತಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಕುರಿಯಾಳ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
