ಶ್ರೀಪಾದರ ೨೭ನೇ ಚಾತುರ್ಮಾಸ್ಯ ವ್ರತಾಚರಣೆ

ಗುರುಪುರ : ಶ್ರೀ ವಜ್ರದೇಹಿ ಮಠ ಗುರುಪುರದ ಶ್ರೀ ರಾಜಶೇಖರಾನಂದ ಶ್ರೀಪಾದರು ಪರಾಭವ ನಾಮ ಸಂವತ್ಸರದ ಆಷಾಢ ಬಹುಳ ಅವಧಿಯ ಆಗಸ್ಟ್ ೩ರಿಂದ ಸೆಪ್ಟೆಂಬರ್ ೬ರ ಪರ್ಯಂತ ೨೭ನೇಯ ಚಾತುರ್ಮಾಸ್ಯ ವ್ರತಾಚರಣೆ ಕೈಗೊಳ್ಳಲಿದ್ದಾರೆ.

ಈ ಶುಭ ಸಂದರ್ಭದಲ್ಲಿ ಮಠದಲ್ಲಿ ಆಗಸ್ಟ್ ೩ರಂದು ಬೆಳಿಗ್ಗೆ ೮:೩೦ಕ್ಕೆ ಧಾರ್ಮಿಕ ಸತ್ಸಂಗಾದಿ ಭಗವತ್ಸೇವೆಯೊಂದಿಗೆ ತಪ್ತ ಮುದ್ರಾ ಧಾರಣೆ, ಆ. ೧೨ರಂದು ಆಷಾಢ ಅಮಾವಾಸ್ಯೆ ಪೂಜೆ, ಆ. ೧೭ರಂದು ಸಿಂಹ ಸಂಕ್ರಮಣ ಪೂಜೆ, ಆ. ೨೮ರಂದು ಸಂಜೆ ೬ಕ್ಕೆ ವರಮಹಾಲಕ್ಷ್ಮೀ  ಪೂಜೆ, ಸೆಪ್ಟೆಂಬರ್ ೪ರಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಪೂಜಾ ಕಾರ್ಯಕ್ರಮಗಳು ಜರುಗಲಿವೆ ಎಂದು ಮಠದ ಪ್ರಕಟಣೆ ತಿಳಿಸಿದೆ.

By Suddi9

Leave a Reply

Your email address will not be published. Required fields are marked *