ಪೊಳಲಿ: ಯಕ್ಷತೀರ್ಥ ಕಲಾಸೇವೆ ನೂರಾಳಬೆಟ್ಟು ಇದರ 7ನೇ ವರ್ಷದ ಯಕ್ಷತೀರ್ಥ ಸಂಭ್ರಮ- 2026 ಆಮಂತ್ರಣ ಪತ್ರಿಕೆ ಬಿಡುಗಡೆಯು ಜು.05ರಂದು ಭಾನುವಾರ ಶ್ರೀ ಕ್ಷೇತ್ರ ಪೊಳಲಿಯಲ್ಲಿ ನಡೆಯಿತು.
ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ ಕೆ. ರಾಮ್‌ ಭಟ್‌ ಪ್ರಾರ್ಥನೆ ಮಾಡಿ ಪ್ರಸಾದ ನೀಡಿದರು. ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಯಕ್ಷ ತೀರ್ಥ ಸಂಭ್ರಮದ ಪತ್ರಿಕೆ ಬಿಡುಗಡೆಗೊಳಿಸಿ ಶುಭಕೋರಿದರು. ಈ ಸಂದರ್ಭದಲ್ಲಿ ಶ್ರೀಮತಿ ರತ್ನಾವತಿ ಹಾಗೂ ಯಕ್ಷತೀರ್ಥಕಲಾ ಸೇವೆಯ ಅಧ್ಯಕ್ಷ ಸದಾನಂದ ಎಸ್. ಆಚಾರ್ಯ ಇದ್ದರು

ರಾಮಕೃಷ್ಣ ತಪೋವನದ ರಾಜರಾಜೇಶ್ವರೀ ಸಭಾಂಗಣದಲ್ಲಿ ಪೊ| ಪವನ ಕಿರಣಕೆರೆ. ವ್ಯಾಖ್ಯಾನದೊಂದಿಗೆ ‘ಯಕ್ಷ ಕಾವ್ಯಯಾನ’ “ಅಗ್ನಿ ಪರೀಕ್ಷೆ” ಸೀತಾ-ರಾಮ ಪುನಃರ್ಮಿಲನ ಕಾರ್ಯಕ್ರಮ ನಡೆಯಿತು

ಬಳಿಕ ನಡೆದ ಸಭಾಕಾರ್ಯಕ್ರಮದ  ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ಡಾ.ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು ವಹಿಸಿದ್ದರು. ಯಕ್ಷಕಲಾ ಪೊಳಲಿಯ ಸಂಚಾಲಕರು ವೆಂಕಟೇಶ್‌ ನಾವಡ , ಯಕ್ಷಗಾನ ಸಂಘಟಕರು ಜನಾರ್ಧನ ಅಮ್ಮುಂಜೆ ,ಪ್ರೋ.ಪವನ ಕಿರಣಕೆರೆ, ಡಾ.ಪ್ರಖ್ಯಾತ ಶೆಟ್ಟಿ , ಡಾ.ಮಯೂರಿ ಪ್ರಖ್ಯಾತ್‌ ಶೆಟ್ಟಿ , ಕೃಷ್ಣ ಉಳಿತ್ತಾಯ, ಹೊಸ್ಮಾರು ‘ವಿಜಯ ಕ್ಲಿನಿಕ್’ ಡಾ. ಪ್ರಸಾದ ಬಿ. ಶೆಟ್ಟಿ , ಬಜಗೋಳಿ ಸಾಯಿಕೃಪಾ ಜ್ಯುವೆಲ್ಲರ್ಸ್ ಪ್ರಸಾದ ಸಿ. ಆಚಾರ್ಯ, ಬಸವನಹಳ್ಳಿ ಚಿಕ್ಕಮಂಗಳೂರು ಅಶ್ವಿನಿ ಜ್ಯುವೆಲ್ಲರ್ಸ್’, ರುದ್ರಯ್ಯ ಆಚಾರ್ಯ ‘ಪೋ. ಪವನ ಕಿರಣ್‌ಕೆರೆ, ಕೃಷ್ಣ ಪ್ರಕಾಶ ಉಳಿತ್ತಾಯ ಪೆರ್ಮಂಕಿ , ‘ದಿವ್ಯಶ್ರೀ ಜ್ಯುವೆಲ್ಲರ್ಸ್’ನ ಯೋಗೇಂದ್ರ ಆಚಾರ್ಯ ಮೂಡುಬಿದಿರೆ, ಜ್ಯೋತಿಶ್ರೀ ಜ್ಯುವೆಲ್ಲರ್ಸ್‌ ಮಂಗಳೂರು ಅಡೂರು ಸುರೇಶ ಆಚಾರ್ಯ ,ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘ ನೂರಾಳ್‌ ಬೆಟ್ಟು ಮಾಜಿ ಅಧ್ಯಕ್ಷರು ವಾಮನ ಆಚಾರ್ಯ, ಗಂಗೆನೀರು ಹೊಸ್ಮಾರು ಗಣೇಶ ಆಚಾರ್ಯ, ಪ್ರಭಾಕರ ಆಚಾರ್ಯ ಅಧ್ಯಕ್ಷರು, ವಿಶ್ವ ಬ್ರಾಹ್ಮಣ ಸಂಘ, ಅಂಡಿಂಜೆ, ಕೃಷ್ಣ ಆಚಾರ್ಯ,ಸತೀಶ ಆಚಾರ್ಯ ,ವಸಂತ ಧನಲಕ್ಷ್ಮೀ ಟ್ರಾವೆಲ್ಸ್ ಮಂಜುನಗರ ನಾರಾವಿ ,ರಾಜೇಶ ಕೆ. ಆಚಾರ್ಯ , ಪ್ರಶಾಂತ ಆಚಾರ್ಯ, ಜಗದೀಶ ಆಚಾರ್ಯ ,ಪ್ರಸಾದ ಆಚಾರ್ಯ ಶ್ರೀನಿಧಿ’ ನೂರಾಜ್‌ಬೆಟ್ಟು, ಸತೀಶ ಆಚಾರ್ಯ  ಶಿರ್ಲಾಲು ಕಾರ್ಯಕ್ರಮಕ್ಕೆ ಶುಭಕೋರಿದರು.  ಕಾರ್ಯಕ್ರಮದ ಆಯೋಜಕರು ಸದಾನಂದ ಎಸ್‌ ಆಚಾರ್ಯ ಸ್ವಾಗತಿಸಿದರು. ಜಿ ಎನ್‌ ಪುರಂದರ ಪುರೋಹಿತ ಮುನಿಯಾಲು ನಿರೂಪಿಸಿದರು.  ಹಾಗೂ ಯಕ್ಷತೀರ್ಥ ಕಲಾ ಸೇವೆಯ ಸಮಸ್ತ ಬಂಧುಗಳು ಅಧ್ಯಕ್ಷರು, ಯಕ್ಷತೀರ್ಥ ಕಲಾಸೇವೆ ನೂರಾಳ್‌ಬೆಟ್ಟು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಪಾಲ್ಗೊಂಡಿದ್ದರು.

By Suddi9

Leave a Reply

Your email address will not be published. Required fields are marked *