ಆಶ್ರಯದಲ್ಲಿ ರಕ್ತದಾನ-ಆರೋಗ್ಯ ತಪಾಸಣೆ ಶಿಬಿರ

ಗುರುಪುರ : ವಿಶ್ವ ಹಿಂದೂ ಪರಿಷತ್ ಬಜರಂಗದಳ, ಮಾತೃಶಕ್ತಿ ದುರ್ಗಾವಾಹಿನಿ(ಸೇವಾ ವಿಭಾಗ) ವಜ್ರದೇಹಿ ಘಟಕ, ಗುರುಪುರ, ಎಜೆ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ, ಎಜೆ ರಕ್ತಕೇಂದ್ರ ಮಂಗಳೂರು ಇವರ ಸಹಯೋಗ ಹಾಗೂ ಶ್ರೀ ಸತ್ಯದೇವತಾ ಸೇವಾ ಟ್ರಸ್ಟ್ ಗುರುಪುರ ಇದರ ಸಹಕಾರದಲ್ಲಿ ಶ್ರೀ ಸತ್ಯದೇವತಾ ಕುಲದೇವತಾ ಮಂದಿರದ ಶ್ರೀ ಚಂದ್ರಕಾಂತ್ ಭಟ್ ಅವರ ಆಶೀರ್ವಾದದಲ್ಲಿ ಜು. ೫ರಂದು ಗುರುಪುರ ಕುಕ್ಕುದಕಟ್ಟೆಯ ಶ್ರೀ ವೈದ್ಯನಾಥ ಸಮುದಾಯ ಭವನದಲ್ಲಿ ರಕ್ತದಾನ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

 

ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದ ಗುರುಪುರ ಶ್ರೀ ಸತ್ಯದೇವತಾ ಸೇವಾ ಟ್ರಸ್ಟ್ನ ವಿನಾಯಕ್ ಭಟ್ ಅವರು ಮಾತನಾಡಿ, ಇಂತಹ ಸಮಾಜಮುಖಿ ಕಾರ್ಯಗಳು ಗ್ರಾಮೀಣ ಭಾಗದ ಬಡಜನರ ಆರೋಗ್ಯಕ್ಕೆ ಆಸರೆಯಾಗಲಿದೆ. ಇದು ಭಗವಂತ ಮೆಚ್ಚುವ ಕೆಲಸ. ಆಧುನಿಕ ಕಾಲಘಟ್ಟದಲ್ಲಿ ಜನರ ಆರೋಗ್ಯದ ಕಾಳಜಿಯಿಂದ ಸಂಘ-ಸಂಸ್ಥೆಗಳಿಂದ ಇಂತಹ ಕೆಲಸಗಳ ಅಗತ್ಯವಿದೆ ಎಂದರು.

 

ವಿಹಿAಪ ಜಿಲ್ಲಾ ಕಾರ್ಯದರ್ಶಿ ರವಿ ಅಸೈಗೋಳಿ ಮಾತನಾಡಿ, ಇಂತಹ ಸೇವೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಬೇಕು. ಹಿಂದೂ ಸಂಘಟನೆಗಳ ಆಶಯ ಇದೇ ಆಗಿದ್ದು, ಇದಕ್ಕೆ ತಕ್ಕುದಾದ ಕೆಲಸ ಇಲ್ಲಿ ನಡೆಯುತ್ತಿದೆ ಎಂದರು.

 

ಈ ಸಂದರ್ಭದಲ್ಲಿ ವಿಹಿಂಪ ಜಿಲ್ಲಾ ಸೇವಾ ಪ್ರಮುಖ್ ದೀಪಕ್ ಮರೋಳಿ ಅವರನ್ನು ಸನ್ಮಾನಿಸಲಾಯಿತು. ಎಜೆ ಆಸ್ಪತ್ರೆಯ ಡಾ. ಮಾಲಾಶ್ರೀ ಮತ್ತು ಡಾ. ಅಕ್ಷಯ್ ಶೆಟ್ಟಿ ಮಾತನಾಡಿದರು.

ವಿಹಿಂಪ ಗುರುಪುರ ಪ್ರಖಮಡ ಸೇವಾ ಪ್ರಮುಖ್ ನವೀನ್ ಆದ್ಯಪಾಡಿ, ವಿಹಿಂಪ ಗುರುಪುರ ಘಟಕ ಅಧ್ಯಕ್ಷ ನಾಗೇಶ್ ಕೊಟ್ಟಾರಿ, ಅಂಕಿತಾ ಉಪಸ್ಥಿತರಿದ್ದರು. ಸ್ವಾಗತಿಸಿ, ನಿರೂಪಿಸಿದ ಸತ್ಸಂಗ ಘಟಕದ ಜಿಲ್ಲಾ ಪ್ರಮುಖ್ ವಸಂತ ಸುವರ್ಣ ಗುರುಪುರ ಅವರು ವಂದಿಸಿದರು. ವಿಹಿಂಪ ಬಜರಂಗದಳದ ಪದಾಧಿಕಾರಿಗಳು ಸಹಕರಿಸಿದರು.

ಶಿಬಿರದಲ್ಲಿ ಹಲವರು ರಕ್ತದಾನ ಮಾಡಿದರು. ನೂರಾರು ಮಂದಿ ಹೃದಯ, ಕಣ್ಣು, ರಕ್ತದೊತ್ತಡ, ಮಧುಮೇಹ ಮತ್ತಿತರ ಕಾಯಿಲೆಗಳ ಬಗ್ಗೆ ತಪಾಸಣೆ ಮಾಡಿಸಿಕೊಂಡರು.

By Suddi9

Leave a Reply

Your email address will not be published. Required fields are marked *