ಕೈಕಂಬ:ಸ್ಪರ್ಧಾತ್ಮಕ ಜಗತ್ತಿನಲ್ಲಿ ಕಾಡುಗಳ ಮಹತ್ವವನ್ನು ಯುವ ಪೀಳಿಗೆಗೆ ತಿಳಿಸಿಕೊಡುವುದು ಅಗತ್ಯವಾಗಿದೆ. ಕಾಡಿನ ವಿನಾಶದಿಂದ ಉಂಟಾಗುವ ತೊಂದರೆಗಳನ್ನು ಪ್ರಸ್ತುತ ಜಗತ್ತಿನಲ್ಲಿ ಕಾಣಬಹುದು. ಮುಂದಿನ ದಿನಗಳಲ್ಲಿ ಆಕ್ಸಿಜನ್ ಸಿಲಿಂಡರ್ ಅನ್ನು ಹಿಡಿದುಕೊಂಡು ಓಡಾಡುವ ಪರಿಸ್ಥಿತಿ ಬಂದೊದಗುತ್ತದೆ. ಇಂತಹ ಪರಿಸ್ಥಿತಿ ಬರಬಾರದೆಂದರೆ ಸಸಿಗಳನ್ನು ನೆಡುವುದು ಅಗತ್ಯವಾಗುತ್ತದೆ. ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪೊಳಲಿ ವಲಯದ ಮೇಲ್ವಿಚಾರಕರು ಶ್ರೀಮತಿ ರೂಪ ರೈ ತಿಳಿಸಿದರು.

ಅವರು ಜು.5ರಂದು ಭಾನುವಾರ ನಾಗಶ್ರೀ ಮಿತೃ ವೃಂದ ಚಾರಿಟೆಬಲ್ ಟ್ರಸ್ಟ್ ಮತ್ತು ನಾಗಶ್ರೀ ಮಾತೃ ವೃಂದ ಕಮ್ಮಾಜೆ ಇದರ ಜಂಟಿ ಆಶ್ರಯದಲ್ಲಿ ಕಮ್ಮಾಜೆಯ ವಿವೇಕ ಭವನದಲ್ಲಿ ವನಮಹೋತ್ಸವ 2026 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

.ಕಾಡಿನ ಪ್ರಾಣಿಗಳು ನಾಡಿಗೆ ಬರುವುದು ಸಾಮಾನ್ಯವಾಗಿದೆ. ಕಾಡಿನ ವಿನಾಶವೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಕಾಡುಗಳನ್ನು ಉಳಿಸುವ ಜೊತೆಗೆ ನಮ್ಮ ಮನೆಗಳಲ್ಲಿ ಸಸಿಗಳನ್ನು ನೆಟ್ಟು ಪೋಷಿಸುವುದು ಅಗತ್ಯವಾಗಿದೆ. ಹುಟ್ಟುಹಬ್ಬದ ಪ್ರಯುಕ್ತ ಮಾಡುವ ದುಂದು ವೆಚ್ಚದ ಬದಲು ಸಸಿಗಳನ್ನು ನೆಟ್ಟು ಪೋಷಿಸುವುದರಿಂದ ಆರೋಗ್ಯವನ್ನು ವೃದ್ಧಿಸುವ ಕೆಲಸವನ್ನು ಮಾಡುತ್ತದೆ ಎಂದರು.

ಈ ಕಾರ್ಯಕ್ರಮದಲ್ಲಿ ಭಾರತೀಯ ಜನತಾ ಪಕ್ಷ ತೆಂಕಬೆಳ್ಳೂರು ಶಕ್ತಿ ಕೇಂದ್ರ ಮುರಳೀಧರ ಶೆಟ್ಟಿ, ನಾಗಶ್ರೀ ಮಿತೃ ವೃಂದ ಸಂಘದ ಮತ್ತು ವನಮಹೋತ್ಸವ ಕಾರ್ಯಕ್ರಮದ ಅಧ್ಯಕ್ಷ ಹರೀಶ್ ಮುಡೈಕೋಡಿ ಮತ್ತು ಮಾತೃ ವೃಂದ ಕಮ್ಮಾಜೆ ಸಂಘದ ಅಧ್ಯಕ್ಷೆ ಸೌಮ್ಯಾ ತಿಮ್ಮಪ್ಪ ಕಮ್ಮಾಜೆ ಉಪಸ್ಥಿತರಿದ್ದರು.
ಅತಿಥಿಗಳು ಸಸಿಯನ್ನು ನೆಟ್ಟು ಕಾರ್ಯಕ್ರಮವನ್ನು ಅರ್ಥಪೂರ್ಣಗೊಳಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಗ್ರಾಮಸ್ಥರಿಗೆ ಸಸಿಯನ್ನು ವಿತರಿಸಲಾಯಿತು.
ಬಾಲಗೋಕುಲದ ವಿದ್ಯಾರ್ಥಿನಿಯರು ಪ್ರಾರ್ಥನೆಯನ್ನು ಹಾಡಿದರು ಹಾಗೆಯೇ ನಾಗಶ್ರೀ ಸಂಘದ ಕ್ರೀಡಾ ಕಾರ್ಯದರ್ಶಿ ರಂಜಿತ್ ಸ್ವಾಗತಿಸಿ ವಂದಿಸಿದರು.
