ಶಾಲಾಭಿವೃದ್ಧಿ ತುಡಿತದ ಉದ್ಯಮಿ ರಘು ಸಾಲ್ಯಾನ್ : ಡಾ. ಭರತ್ ಶೆಟ್ಟಿ
ಗುರುಪುರ : ವಾಮಂಜೂರು ತಿರುವೈಲಿನ ದ.ಕ.ಜಿ.ಪಂ ಮಾದರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಗೆ ಉದ್ಯಮಿ ರಘು ಸಾಲ್ಯಾನ್ ಅವರು ವಿದ್ಯಾಬೋಧಿನಿ ಎಜ್ಯುಕೇಶನ್ ಟ್ರಸ್ಟ್ ಸಹಕಾರದೊಂದಿಗೆ ಪತ್ನಿ, ನಿಕಟಪೂರ್ವ ಕಾರ್ಪೊರೇಟರ್ ಹೇಮಲತಾ ಆರ್. ಸಾಲ್ಯಾನ್ ಅವರ ಕೊಡುಗೆಯಾಗಿ ನೀಡಿರುವ 23 ಲಕ್ಷ ರೂ ಮೌಲ್ಯದ ನೂತನ `ಅಕ್ಷರ ವಾಹಿನಿ’ ಬಸ್‌ನ ಉದ್ಘಾಟನಾ ಕಾರ್ಯಕ್ರಮ ಜು. 6ರಂದು ನಡೆಯಿತು..

ಬಸ್ ಚಲಾಯಿಸಿ ಉದ್ಘಾಟಿಸಿದ ಮಂಗಳೂರು ನಗರ ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಅವರು ಮಾತನಾಡಿ, ತಾನು ಕಲಿತ ಶಾಲೆಯನ್ನೇ ಎರಡನೇ ಮನೆ ಮಾಡಿಕೊಂಡಿರುವ ರಘು ಸಾಲ್ಯಾನ್ ಅವರು, ಶಾಲಾಭಿವೃದ್ಧಿಗಾಗಿ ಶಕ್ತಿ ಮೀರಿ ಶ್ರಮಿಸುತ್ತಿದ್ದಾರೆ. ಶಾಲೆಗೆ 2ನೇ ಬಸ್ ಕೊಡುಗೆಯಾಗಿ ನೀಡಿರುವ ಇವರು, ಖಾಸಗಿ ಶಾಲೆಗಳ ಮಕ್ಕಳಂತೆ ಸರ್ಕಾರಿ ಶಾಲೆಯ ಮಕ್ಕಳೂ ಶಾಲಾ ಬಸ್‌ಗಳಲ್ಲಿ ಪ್ರಯಾಣಿಸಬೇಕು, ಸಮವಸ್ತçದ ಜೊತೆಗೆ ಬಣ್ಣದ ಜೆರ್ಸಿ ಧರಿಸಿಕೊಂಡು ಓಡಾಡಬೇಕೆಂಬ ಕನಸು ಸಾಕಾರಗೊಳಿಸಿದ್ದಾರೆ. ಪರಿಣಾಮವಾಗಿ ಮುಚ್ಚುವ ಹಂತ ತಲುಪಿದ್ದ ಈ ಶಾಲೆಯಲ್ಲಿ ಇಂದು 450ಕ್ಕೂ ಹೆಚ್ಚು ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯುವಂತಾಗಿದೆ ಎಂದರು.

ರಘು ಸಾಲ್ಯಾನ್ ಮತ್ತು ಅವರ ಪತ್ನಿ ಹೇಮಲತಾ ಆರ್. ಸಾಲ್ಯಾನ್ ಅವರು ಶಿಕ್ಷಣ ತಜ್ಞರಿಗೆ ಕಡಿಮೆಯಲ್ಲದ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಶಾಲೆಯ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಇವರು, ಶಾಲಾ ಹಿತದೃಷ್ಟಿಯಿಂದ ಮಾಡುತ್ತಿರುವ ಕೆಲಸಗಳು ಇತರರಿಗೆ ಮಾದರಿಯಾಗಿವೆ ಎಂದು ಹೇಳಿದರು.

ಮಾಜಿ ಸಚಿವ ಕೃಷ್ಣ ಪಾಲೆಮಾರ್ ಮಾತನಾಡಿ, ನಗರ ಪ್ರದೇಶ ಅಥವಾ ಗ್ರಾಮೀಣ ಮಟ್ಟದಲ್ಲಿ ಇಂತಹ ಉತ್ತಮ ಸರ್ಕಾರಿ ಶಾಲೆ ಮತ್ತೊಂದಿಲ್ಲ. ಬಡ ಹಾಗೂ ಗ್ರಾಮೀಣ ವಲಯದ ಮಕ್ಕಳ ಶಿಕ್ಷಣಕ್ಕೆ ಇಲ್ಲಿ ಆದ್ಯತೆ ನೀಡಲಾಗುತ್ತಿದೆ. ಉಳ್ಳವರು ಶಾಲಾಭಿವೃದ್ಧಿಗೆ ಅಥವಾ ತಾವು ಕಲಿತ ಶಾಲೆಯ ಏಳ್ಗೆಗೆ ನೆರವಾಗಬೇಕು. ಶಿಕ್ಷಣ ವಂಚಿತರಿಗೆ ಇಲ್ಲಿ ಸೇವೆ ನಡೆಯುತ್ತಿದೆ. ಇದು ಊರಿಗೆ ಗೌರವದ ಸಂಗತಿ. ಶಾಲೆಯು ಹೈಸ್ಕೂಲ್, ಪಿಯು ಕಾಲೇಜು ಆಗಿ ಪರಿವರ್ತನೆಗೊಳ್ಳಬೇಕು ಎಂದು ಆಶಿಸಿದರು.
ಉದ್ಯಮಿ ಲ. ಮೋಹನದಾಸ ಶೆಟ್ಟಿ ಮಾತನಾಡಿದರು. ಶಾಲಾ ಮುಖ್ಯ ಶಿಕ್ಷಕ ನಿಂಗರಾಜು ಸ್ವಾಗತಿಸಿ ಪ್ರಸ್ತಾವಿಸಿದರು. ತಿರುವೈಲು ವಾರ್ಡ್ನ ನಿಕಟಪೂರ್ವ ಕಾರ್ಪೊರೇಟರ್ ಹೇಮಲತಾ ಆರ್. ಸಾಲ್ಯಾನ್, ಉದ್ಯಮಿ ರಘು ಸಾಲ್ಯಾನ್, ಎಸ್‌ಡಿಎಂಸಿ ಅಧ್ಯಕ್ಷ ರಾಕೇಶ್ ಶೆಟ್ಟಿ, ಉಪಾಧ್ಯಕ್ಷೆ ರೇಷ್ಮಾ, ಬಿಇ ಒ ಈಶ್ವರ್, ಸಿಆರ್‌ಪಿ ಅನಿತಾ, ಹಿರಿಯ ವಕೀಲ ಶಿವರಾಮ ರಾವ್, ಉದ್ಯಮಿ ನಿತ್ಯಾನಂದ ಶೆಟ್ಟಿ, ಲ, ಸ್ವರೂಪಾ ಶೆಟ್ಟಿ, ಶಾಲೆಯ ನಿವೃತ್ತ ಶಿಕ್ಷಕರಾದ ಗೋಪಾಲ ಯು ಮತ್ತು ಪುಷ್ಪಾ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮೋಹನದಾಸ ಬಂಗೇರ, ಜೈಶಂಕರ್ ಮಿತ್ರ ಮಂಡಳಿ ಅಧ್ಯಕ್ಷ ಸಂತೋಷ್ ಆಚಾರ್ಯ, ವಾಮಂಜೂರು ಟೈರ‍್ಸ್ ಅಧ್ಯಕ್ಷ ಚರಣ್‌ರಾಜ್, ಸತೀಶ್ ಶೆಟ್ಟಿ ಮೂಡುಜೆಪ್ಪುಗುತ್ತು, ಅಮೃತನಗರ ಪೌರ ಸಮಿತಿ ಅಧ್ಯಕ್ಷ ಬಾಲಕೃಷ್ಣ ಮಾಸ್ಟರ್, ಲಿಂಗಪ್ಪ ಸಾಲ್ಯಾನ್, ಸತ್ಯಗ್ರೂಪ್‌ನ ಸಚಿನ್ ಕಾಮತ್, ದಿನೇಶ್ ಜೆ. ಕರ್ಕೇರ ಸಾನದಮನೆ, ಅನಿಲ್ ಶೆಟ್ಟಿ ತಿರುವೈಲು, ಲಕ್ಷö್ಮಣ್ ಶೆಟ್ಟಿಗಾರ, ಉಮಾನಾಥ ಕೊಟ್ಟಾರಿ, ಹರೀಶ್ ದಿವ್ಯಜ್ಯೋತಿ, ಸ್ಟ್ಯಾನಿ ಕುಟಿನ್ಹೊ, ವಿದ್ಯಾಬೋಧಿನಿ ಎಜ್ಯುಕೇಶನ್ ಟ್ರಸ್ಟ್ ಹಾಗೂ ಎಸ್‌ಡಿಎಂಸಿ ಪದಾಧಿಕಾರಿಗಳು ಹಾಗೂ ಸದಸ್ಯರು, ಶಿಕ್ಷಕ ವೃಂದ, ವಿದ್ಯಾರ್ಥಿಗಳು, ಪೋಷಕರು ಹಾಗೂ ಶಾಲಾ ಹಿತೈಷಿಗಳು ಇದ್ದರು. ಶಿಕ್ಷಕಿ ಗ್ರೆಟ್ಟಾ ಕುಟಿನ್ಹೊ ನಿರೂಪಿಸಿದರು. ಶಿಕ್ಷಕಿ ಮಂಜುಳಾ ವಂದಿಸಿದರು
