ಗುರುಪುರ : ವಾಮಂಜೂರು ತಿರುವೈಲಿನ ಅಮೃತನಗರದ ಪೌರ ಸಮಿತಿಯ ವಾರ್ಷಿಕ ಮಹಾಸಭೆ ಜೂ. ೧೪ರಂದು ಕ್ಲಿಫರ್ಡ್ ರೋಡ್ರಿಗಸ್ ಅವರ ಮನೆಯ ಮೇಲ್ಛಾವಣಿ ಸಭಾಂಗಣದಲ್ಲಿ ಸಮಿತಿ ಅಧ್ಯಕ್ಷ ಬಾಲಕೃಷ್ಣ ಎಂ. ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಮಿತಿ ಉಪಾಧ್ಯಕ್ಷ ರಾಜಕುಮಾರ್ ಶೆಟ್ಟಿ ತಿರುವೈಲುಗುತ್ತು ಅವರು ಸ್ವಾಗತಿಸಿ, ಪ್ರಸ್ತಾವಿಸಿದರು. ಕೋಶಾಧಿಕಾರಿ ಲೋಕೇಶ್ ಲೆಕ್ಕಪತ್ರ ಮಂಡಿಸಿದರು. ಪ್ರಧಾನ ಕಾರ್ಯದರ್ಶಿ ಸುಧಾಕರ ಕಾರಂತ ಅವರು ವಾರ್ಷಿಕ ವರದಿ ವಾಚಿಸಿದರು.
ಸಮಿತಿ ವ್ಯಾಪ್ತಿ ಪ್ರದೇಶದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿ ೧೦ ವಿದ್ಯಾರ್ಥಿಗಳು ನಗದು ಪುರಸ್ಕಾರ ನೀಡಿ ಅಭಿನಂದಿಸಲಾಯಿತು. ೪ ಅಶಕ್ತ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲಾಯಿತು. ಕಾರ್ಯಕ್ರಮಕ್ಕೆ ಸಹಕರಿಸಿದ ದಾನಿಗಳನ್ನು ಗೌರವಿಸಲಾಯಿತು.

ಸ್ಥಳೀಯ ಸಮಸ್ಯೆಗಳು :
ಅಮೃತನಗರದ ಕೆಲವೆಡೆ ಸಮರ್ಪಕ ಚರಂಡಿ ಇಲ್ಲದೆ ಮಳೆ ನೀರು ಮನೆಗೆ ನುಗ್ಗಿದೆ, ಅಪಾಯಕಾರಿಯಾಗಿ ವಾಲಿರುವ ವಿದ್ಯುತ್ ಕಂಬ ಬದಲಿಸಬೇಕು, ಮಂಗಳೂರು-ತಿರುವೈಲು ಪ್ರದೇಶ ಸಂಪರ್ಕದ ಸರ್ಕಾರಿ ಬಸ್ ಟ್ರಿಪ್ ಹೆಚ್ಚಿಸಬೇಕು ಮತ್ತು ಇನ್ನೆರಡು ಹೊಸ ಬಸ್‌ನ ವ್ಯವಸ್ಥೆ ಮಾಡಬೇಕು, ಸಮರ್ಪಕವಾಗಿ ಕಸ ವಿಲೇವಾರಿ ಆಗುತ್ತಿಲ್ಲ, ಕೆಲವು ಬೀದಿ ದೀಪಗಳು ಉರಿಯುತ್ತಿಲ್ಲ ಎಂದು ಕೆಲವು ಸದಸ್ಯರು ಸಮಿತಿ ಗಮನಸೆಳೆದರು.
ಸಮಿತಿ ಅಧ್ಯಕ್ಷ ಬಾಲಕೃಷ್ಣ ಎಂ. ಮಾತನಾಡಿ, ಎಲ್ಲ ಸಮಸ್ಯೆ ಶೀಘ್ರ ಬಗೆಹರಿಸುವ ನಿಟ್ಟಿನಲ್ಲಿ ಸಂಬAಧಪಟ್ಟ ಇಲಾಖಾ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುವುದು. ಸಮಿತಿ ಸತತ ಪ್ರಯತ್ನದ ಹಿನ್ನೆಲೆಯಲ್ಲಿ ಅಮೃತನಗರದಲ್ಲಿ ೧೦ ಕೋ. ರೂ ಅನುದಾನದಿಂದ ಕಾರ್ಯಗತಗೊಂಡಿದೆ. ಡ್ರೆÊನೇಜ್‌ಗೆ ಮಳೆ ನೀರು ಬಿಡದೆ, ಪ್ರತ್ಯೇಕ ವ್ಯವಸ್ಥೆ ಮಾಡಬೇಕು. ಇಲ್ಲವಾದಲ್ಲಿ ಅಮೃತನಗರ ಡ್ರೆÊನೇಜ್ ಮತ್ತು ವೆಟ್‌ವೆಲ್‌ಗೆ ತೀವ್ರ ಹಾನಿಯಾಗಲಿದೆ. ಈ ಪ್ರದೇಶವನ್ನು ಮಾದರಿ ಬಡಾವಣೆಯಾಗಿ ರೂಪಿಸಲು ಪ್ರತಿಯೊಬ್ಬರೂ ಪಣ ತೊಡಬೇಕು ಎಂದರು.
ಪೌರ ಸಮಿತಿ ಗೌರವಾಧ್ಯಕ್ಷ ವಿಠಲ್ ಸಾಲ್ಯಾನ್, ಅಧ್ಯಕ್ಷ ಬಾಲಕೃಷ್ಣ ಎಂ, ಪ್ರಧಾನ ಕಾರ್ಯದರ್ಶಿ ಸುಧಾಕರ ಕಾರಂತ ಉಪಸ್ಥಿತರಿದ್ದರು. ಡಾ. ರಮಾನಂದ ನಿರೂಪಿಸಿದರು. ಸಮಿತಿ ಪದಾಧಿಕಾರಿಗಳು ಸಹಕರಿಸದರು. ಲಕ್ಷö್ಮಣ್ ಶೆಟ್ಟಿಗಾರ್ ಅವರ ವಂದಿಸಿದರು.
