ಗುರುಪುರ : ಕಡ್ತಲ ಗ್ರಾಮ ಪಂಚಾಯತ್ ಬೋರ್ಡ್, ವರಂಗ ಮಂಡಲ ಪಂಚಾಯತ್, ಕಡ್ತಲ ಗ್ರಾಮ ಪಂಚಾಯತ್ ಮಾಜಿ ಸದಸ್ಯ, ಕಡ್ತಲ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಕಡ್ತಲ ವೆಂಕಪ್ಪ ನಾಯ್ಕ್(೮೬) ಅವರು ಅಲ್ಪಕಾಲದ ಅನಾರೋಗ್ಯದಿಂದ ಜೂ. ೧೬ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.

ಮೃತರು ಪತ್ನಿ, ಯೋಗ ಸಾಧಕ-ಎಸ್‌ಡಿಎಂ ಮಂಗಳಜ್ಯೋತಿ ಸಮಗ್ರ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಶೇಖರ ಕಡ್ತಲರ ಸಹಿತ ಇಬ್ಬರು ಪುತ್ರರು ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.
ಮೃತರ ಅಂತ್ಯ ಸಂಸ್ಕಾರದಲ್ಲಿ ತಾಪಂ ಮಾಜಿ ಸದಸ್ಯ ಶೇಖರ್ ಮಡಿವಾಳ, ಗ್ರಾಪಂ ಮಾಜಿ ಅಧ್ಯಕ್ಷರಾದ ರಾಘವ ದೇವಾಡಿಗ, ಜಗದೀಶ ಹೆಗ್ಡೆ, ಸುಕೇಶ್ ಹೆಗ್ಡೆ, ಅರುಣ್ ಕುಮಾರ್ ಹೆಗ್ಡೆ, ಕರಾವಳಿ ಪ್ರಾಧಿಕಾರದ ಮಾಜಿ ಸದಸ್ಯ ಸಂಜೀವ ಪೂಜಾರಿ, ಪಂಚಾಯತ್ ಮಾಜಿ ಸದಸ್ಯರಾದ ಸುನಿಲ್ ಹೆಗ್ಡೆ, ರಾಘವ ನಾಯ್ಕ್, ಕರುಣಾಕರ ಹೆಗ್ಡೆ, ಉಮೇಶ್ ಹೆಗ್ಡೆ, ಅಶೋಕ್ ನಾಯ್ಕ್, ದೀಕ್ಷಿತ್ ಶೆಟ್ಟಿ, ಸಮಾಜ ಸೇವಕರಾದ ಕರುಣಾಕರ ಹೆಗ್ಡೆ, ಸಂಪತ್ ಕುಮಾರ್ ಜೈನ್, ಮರಾಠಿ ಸಂಘದ ಅಧ್ಯಕ್ಷ ಶೇಖರ್ ನಾಯ್ಕ್ ಮುನಿಯಾಲ, ಮಂಗಳೂರು ಮರಾಠಿ ಸಂಘದ ಅಧ್ಯಕ್ಷ ಗುಣಪಾಲ ಮತ್ತಿತರರು ಹಾಜರಿದ್ದರು.
