ಬಂಟ್ವಾಳ: ಕುವೈತ್ ದೇಶದಲ್ಲಿ ಉದ್ಯೋಗದಲ್ಲಿದ್ದ ಬಂಟ್ವಾಳ ಮೂಲದ ವ್ಯಕ್ತಿಯೋರ್ವರು ಕುಸಿದುಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ.

ಬಂಟ್ವಾಳ ತಾಲೂಕಿನ ಬಿ.ಮೂಡ ಗ್ರಾಮದ ತಲಪಾಡಿ ನಿವಾಸಿ ಅಬ್ದುಲ್ ರಝಕ್ ವಳಚ್ಚಿಲ್ (58) ಮೃತಪಟ್ಟವರೆಂದು ಗುರುತಿಸಲಾಗಿದೆ.

ಇವರು ಮೂಲತಃ ವಳಚ್ಚಿಲ್ ನಿವಾಸಿಯಾಗಿದ್ದು, ಪ್ರಸ್ತುತ ಬಿ.ಸಿ.ರೋಡು ಸಮೀಪದ ತಲಪಾಡಿಯಲ್ಲಿ ವಾಸ್ತಚ್ಯವಿದ್ದಾರೆ.
ಹಲವಾರು ವರ್ಷಗಳಿಂದ ಕುವೈತ್ ದೇಶದ ಫರ್ವಾನಿಯ ಎಂಬಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಎಂದಿನಂತೆ ಅವರು ಬುಧವಾರ ಕೆಲಸದಲ್ಲಿ ನಿರತವಾಗಿದ್ದ ವೇಳೆ ಹಠಾತ್ತನೆ ಕುಸಿದು ಬಿದ್ದಿದ್ದು, ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ ಎಂದು ಅವರು ಕುಟುಂಬಸ್ಥರು ತಿಳಿಸಿದ್ದಾರೆ.
ಮೃತರ ಪಾರ್ಥಿ ವ ಶರೀರ ಶುಕ್ರವಾರ ಬೆಳಿಗ್ಗೆ ಊರಿಗೆ ತಲುಪಿದ್ದು, ತಲಪಾಡಿಯ ಮೊಫತ್ ಲಾಲ್ ದಫನ ಭೂಮಿಯಲ್ಲಿ ಅಂತ್ಯ ಕ್ರಿಯೆ ನಡೆಸಲಾಗಿದೆ ಎಂದು ಕುಟುಂಬಿಕರು ತಿಳಿಸಿದ್ದಾರೆ.

ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಸಹಿತ ಬಂಧು ಮಿತ್ರರನ್ನು ಅಗಲಿದ್ದಾರೆ. ಇವರ ಅಕಾಲಿಕ ನಿಧನಕ್ಕೆ ತಲಪಾಡಿ ಆಡಳಿತ ಮಂಡಳಿ ಹಾಗೂ ಅಲ್ ರಹ್ಮಾ ಫೌಂಡೇಶನ್ ಸಂತಾಪ ಸೂಚಿಸಿದೆ

By suddi9

Leave a Reply

Your email address will not be published. Required fields are marked *