ಕೈಕಂಬ: ಇಂದು ನಾನು ಇಷ್ಟು ಎತ್ತರದ ಸ್ಥಾನಕ್ಕೆ ಬೆಳೆಯಲು ರೋಸಾಮಿಸ್ತಿಕಾ ಶಾಲೆಯೇ ಕಾರಣ. ನನ್ನ ಇತ್ತೀಚೆಗೆ ಈ ಮಟ್ಟದ ಸ್ಥಾನ ಮಾನಮಾನ ಸಿಕ್ಕಲು ನನ್ನ ಶಿಕ್ಷಕರು ಅವಿರತವಾಗಿ ಶ್ರಮಿಸಿದ್ದಾರೆ. ಇಂದು ಅದೇ ಶಾಲೆ ಅಮೃತಮಹೋತ್ಸವದ ಹೊಸ್ತಿಲಲ್ಲಿ ನಿಂತಿರುವುದು ನನಗೆ ಹೆಮ್ಮೆ ಎನಿಸುತ್ತದೆ ಎಂದು ಬೆಂಗಳೂರಿನ ಸೈಂಟ್ ಆಂಟನಿ ಪದವಿ ಪೂರ್ವ ವಿದ್ಯಾಲಯದ ಧರ್ಮಗುರುಗಳಾದ ಫಾ. ರೋಷನ್ ರೊಝಾರಿಯೋ ತಿಳಿಸಿದ್ದಾರೆ.
ಅವರು ಡಿ.12ರ ಶುಕ್ರವಾರ ಕಿನ್ನಿಕಂಬಳ ಕೈಕಂಬದ ರೋಸಾಮಿಸ್ತಿಕ ಶಾಲೆಯ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತಾಡುತ್ತಿದ್ದರು.
ನಂತರ ಮಾತಾಡಿದ ಅವರು ಪ್ರತಿಯೊಂದು ವಿದ್ಯಾರ್ಥಿಯ ಜೀವನದಲ್ಲಿ ಒಬ್ಬ ಶಿಕ್ಷಕ ಪ್ರಭಾವ ಬೀರುತ್ತಾನೆ. ನನಗೂ ಸಹ ಇಲ್ಲಿನ ಶಿಕ್ಷಕರು ಪ್ರಭಾವ ಬಿದ್ದಿದ್ದಾರೆ. ವಿದ್ಯಾರ್ಥಿಗಳು ಶಿಕ್ಷಕರ ಆಶೀರ್ವಾದ ಪಡೆದುಕೊಂಡು ಸತ್ ಚಿಂತಚನೆಗಳನ್ನು ಅಳವಡಿಸಿಕೊಂಡರೆ ಅವರು ಭವಿಷ್ಯದಲ್ಲಿ ಸತ್ಪ್ರಜೆಗಳಾಗಿ ರೂಪುಗೊಳ್ಳುತ್ತಾರೆ ಎಂದು ನುಡಿದಿರು.

ವೇದಿಕೆಯಲ್ಲಿ ಸರ್ವಧರ್ಮದ ಧಾರ್ಮಿ ಕ ಮುಖಂಡರು ಭಾಗವಹಿಸಿರುವುದು ವಿಶೇಷವಾಗಿತ್ತು. ಪೊಳಲಿ ರಾಮಕೃಷ್ಣ ತಪೋವನದ ವಿವೇಕಚೈತನ್ಯಾನಂದ ಸ್ವಾಮೀಜಿ ಮಾತಾಡಿ ಒಂದು ಶಿಕ್ಷಣ ಸಂಸ್ಥೆಯನ್ನು ನಡೆಸುವುದು ತುಂಬಾ ಕಷ್ಟ. ಅದಕ್ಕಾಗಿ ದಾನಿಗಳು ನೆರವಾಗಬೇಕು ಎಂದು ಕರೆ ನೀಡಿದರು.

ಅಡ್ಡೂರಿನ ದಾರಿಮಿ ಇಮಾಂ ಮಸೀದಿಯ ಮೌಲಾನಾ ಆರ್ ಎಚ್ ಅಬ್ದುಲ್ ರಝಾಕ್ ಸರ್ವಧರ್ಮ ಸಮಾನತೆಯ ಬಗ್ಗೆ ಸಾರಿದರು. ಹೆತ್ತ ತಾಯಿ, ಪೋಷಿಸಿದ ತಂದೆ ವಿದ್ಯೆ ನೀಡಿದ ಗುರು ಹಾಗೂ ಸಲಹುವ ದೇವರನ್ನು ಎಂದೂ ಮರೆಯಬಾರದು ಎಂದು ಕರೆ ನೀಡಿದರು .

ಹಿರಿಯ ಪ್ರಾಥಮಿಕ ಶಾಲೆಯ  ಎಲ್ಲಾ 750ವಿದ್ಯಾರ್ಥಿ ಗಳು ಮೂರು ವೇದಿಕೆಗಳಲ್ಲಿ ಏಕಕಾಲದಲ್ಲಿ ನೃತ್ಯ ಕಾರ್ಯಕ್ರಮ ನೀಡಿ ಎಲ್ಲರ ಗಮನ ಸೆಳೆದರು ವಿದ್ಯಾರ್ಥಿಗಳೊಂದಿಗೆ  ಎಲ್ಲಾ ಶಿಕ್ಷಕಿಯರು  ಸಾಥ್ ನೀಡಿದರು   ಇದು ಇಲ್ಲಿಯ  ವಿಶೇಷತೆಯನ್ನು ಎತ್ತಿ ತೋರಿಸಿತು

 ಮಂಗಳೂರು ಬೆಥನಿ ಎಜ್ಯುಕೇಶನಲ್ ಸೊಸೈಟಿ(ರಿ) ಹಾಗೂ ಮಹಾಮಾತೆ,ಬೆಥನಿ ಸಂಸ್ಥೆ ಅಧ್ಯಕ್ಷರು ಭಗಿನಿ ಎಮ್. ವಿಲ್ಬರ್ಟಾ  ಬಿ.ಎಸ್ ಅಧ್ಯಕ್ಷತೆಯನ್ನು ವಹಿಸಿದ್ದರು.

ಕಿನ್ನಿಕಂಬಳ ಸ್ನೇಹ ಸದನದ ನಿರ್ದೇಶಕ ವಂ.ಫಾ.ಅಂಟನಿ ಎಮ್.ಐ, ಅಡ್ಡೂರು ದಾರಿಮಿ ರೆಂಜಲಾಡಿ ಇಮಾಂ ಟೌನ್ ಮಸ್ಜಿದ್ ಮೌಲಾನಾಆರ್ ಎಚ್ ಅಬ್ದುಲ್ ರಝಾಕ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೆಶಕ ವಾಲ್ಟರ್ ಡಿ”ಮೆಲ್ಲೋ, ಮಂಗಳೂರು ಅಲೋಶಿಯಸ್ ಕಾಲೇಜ್ ಡೀನ್ ಪಿ.ಜಿ.ಡಿ..ಬಿಎಮ್ ಪ್ರೊ. ಎಡ್ಮಂಡ್ ಫ್ರಾಂಕ್ , ಪೆರಾರ್ ಪಿಂಟೋ ಚಾರಿಟೇಬಲ್ ನಿರ್ದೆಶಕ ಮೆಲ್ವಿನ್ ವಿಲ್ಫ್ರೆಡ್ ಪಿಂಟೊ, ಎನ್. ಆರ್ ಐ ಸಮಾಜ ಸೇವಕ ವಿನ್ಸೆಂಟ್ ಪಿರೇರಾ, ಗುರುಪುರ ಗ್ರಾಮ ಪಂ. ಅಧ್ಯಕ್ಷೆ ಪದ್ಮಿನಿ ಅಂಚನ್,  ಬೆಂಜನಪದವು ಕೆನರಾ ಇಂಜಿನಿಯರ್ ಕಾಲೇಜು ಎಂ.ಟೆಕ್ ಪ್ರೋಫೆಸರ್ ಕೃಷ್ಣ ರಾವ್ ಅಮೃತ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು .ಶಾಲಾ ಸಂಚಾಲಕಿ ಕನ್ಸೆಟ್ಟ ಬಿಎಚ್, ಸಿ ಅಮಿತ ಬಿಎಸ್, ಸಿ ಪ್ರಶಾಂತಿ ಬಿಎಚ್, ರೀಟಾ ಸಿಕ್ವೇರಾ ಉಪಸ್ಥಿತರಿದ್ದರು.

2

DSC_0002

DSC_0004

 

 

 

 

7

10

DSC_0007

1

 

 

13

r5

r4

r3

r2

r1

 

3

 

5

17

14

15

16

26

18

19

20

21

22

23

24

25

ಚಿತ್ರ ಕ್ಲಾಸಿಕ್ ಸ್ಟುಡಿಯೋ ಕೈಕಂಬ.

 

 

 

By Suddi9

Leave a Reply

Your email address will not be published. Required fields are marked *