ಕೈಕಂಬ: ಪೊಳಲಿಯ ರಾಮಕೃಷ್ಣ ತಪೋವನದಲ್ಲಿ ಮಾತೆ ಶಾರದಾ ದೇವಿಯರ 162ನೇ ಜನ್ಮದಿನವನ್ನು ಸ್ವಾಮಿ ವಿವೇಕ ಚೈತನ್ಯಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ ನೆರವೇರಿಸಲಾಯಿತು.
ಸ್ವಾಮೀಜಿ ತನ್ನ ಭಕ್ತರ ಹಾಗೂ ಶಿಷ್ಯರೊಂದಿಗೆ ಕೂಡಿಕೊಂಡು ಹಲವು ಧಾರ್ಮಿಕ ವಿಧಿವಿಧಾನಗಳೊಂದಿಗೆ ಈ ಕಾರ್ಯಕ್ರಮವನ್ನು ಕೈಗೊಂಡರು.
ಶನಿವಾರ ನಡೆದ ಕಾರ್ಯಕ್ರಮದಲ್ಲಿ ಬೆಳಗ್ಗಿನ ಜಾವ ಲಲಿತಾ ಸಹಸ್ರನಾಮ ಪಾರಾಯನ ಮಾಡಲಾಯಿತು. ಬಳಿಕ ವಿಶೇಷ ಭಜನೆ, ಮಧ್ಯಾಹ್ನ ಹೋಮ, ಆರತಿ ಪೂಜೆ, ಅನ್ನ ಸಂತರ್ಪನೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು.
ಜನವರಿ 1, 2015ರ ಗುರುವಾರ `ಕಲ್ಪತರು ದಿನ’ವನ್ನು ತಪೋವನದಲ್ಲಿ ನಡೆಯಲಿದ್ದು ವಿಷ್ಣು ಸಹಸ್ರನಾಮದಂಥಾ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿದೆ ಎಂದು ಸ್ವಾಮೀಜಿ ತಿಳಿಸಿದ್ದಾರೆ




