ಕೈಕಂಬ : ದಕಜಿಪಂ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಮಂಗಳೂರು ದಕ್ಷಿಣ ವಲಯ ಹಾಗೂ ಕೈಕಂಬ ಕಿನ್ನಿಕಂಬಳದ ರೋಸಾ ಮಿಸ್ತಿಕಾ ಪ್ರೌಢಶಾಲಾ ಸಹಯೋಗ ಹಾಗೂ ರೋಸಾ ಮಿಸ್ತಿಕಾ ಹಳೆ ವಿದ್ಯಾರ್ಥಿ ಸಂಘ ಮತ್ತು ಲಯನ್ಸ್ ಕ್ಲಬ್ ಗುರುಪುರ ಕೈಕಂಬ ವಲಯದ ಪ್ರಾಯೋಜಕತ್ವದಲ್ಲಿ ಆ. ೨೦ರಂದು ರೋಸಾ ಮಿಸ್ತಿಕಾ ಶಾಲಾ ಮೈದಾನದಲ್ಲಿ ಗುರುಪುರ ಹೋಬಳಿ ಮಟ್ಟದ ಪ್ರೌಢಶಾಲಾ ಖೋ-ಖೋ ಪಂದ್ಯಾಟ ನಡೆಯಿತು.

ಪಂದ್ಯಾಟ ಉದ್ಘಾಟಿಸಿದ ಮಂಗಳೂರು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ(ಬಿಇಒ) ಎಚ್. ಆರ್. ಈಶ್ವರ್ ಮಾತನಾಡಿ, ದೇಶ ಕಾಯುವ ಯೋಧರು ಮತ್ತು ರೈತರು ಯಾವತ್ತೂ ಚಳಿ-ಮಳೆ-ಬಿಸಿಲಿಗೆ ಹೆದರುವುದಿಲ್ಲ. ಅಂತೆಯೇ ಮಕ್ಕಳು ಜೀವನದಲ್ಲಿ ಕಷ್ಟ-ಸುಖ ಸಮಾನವಾಗಿ ಸ್ವೀಕರಿಸಿ, ಪ್ರಬುದ್ಧ ಭಾರತ ನಿರ್ಮಾಣದ ನಿರ್ಮಾತೃಗಳಾಗಬೇಕು. ಸೋಲು, ನೋವು ಸಮಾನವಾಗಿ ಸ್ವೀಕರಿಸಿ ಛಲ ಹಾಗೂ ಆತ್ಮವಿಶ್ವಾದಿಂದ ಮುನ್ನಡೆಯಿರಿ ಎಂದರು.

ಅಧ್ಯಕ್ಷತೆ ವಹಿಸಿದ್ದ ರೋಸಾ ಮಿಸ್ತಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕಿ ಸಿಸ್ಟರ್ ರೋಸ್ ಲಿಟಾ ಅವರು ಮಾತನಾಡಿ, ಖೋ-ಖೋ ಭಾರತೀಯ ಸಾಂಪ್ರದಾಯಿಕ ಕ್ರೀಡೆ. ಇಲ್ಲಿಂದ ಅಂತಾರಾಷ್ಟಿçÃಯ ಮಟ್ಟದಲ್ಲಿ ಆಡುವ ಅವಕಾಶ ಸಿಗಲಿ. ಸ್ಪರ್ಧೆ ಎಂದಾಗ ಸೋಲಿನಲ್ಲೂ ಗೆಲುವಿನ ಮನೋಭಾವ ಬೆಳೆಸಿಕೊಳ್ಳಬೇಕು. ಆಗ ಮಾತ್ರ ಮುಂದಿನ ಪ್ರಯತ್ನ ಸುಲಭ ಮತ್ತು ಗೆಲುವಿಗೆ ಕಾರಣವಾಗುತ್ತದೆ ಎಂದರು.

ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಲಿಲ್ಲಿ ಪಾಯಸ್ ಪ್ರಸ್ತಾವಿಕ ಮಾತನ್ನಾಡಿದರು. ರೋಸಾ ಮಿಸ್ತಿಕಾ ಕಾನ್ವೆಂಟ್ ಸುಪೀರಿಯರ್ ಸಿಸ್ಟರ್ ಲೀನಾ ಪಿರೇರಾ, ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಲ. ಜೆಫ್ರಿಯನ್ ತಾವ್ರೊ, ಸಂಘದ ಕೋಶಾಧಿಕಾರಿ ಲ. ಮೆಲ್ವಿನ್ ಸಲ್ಡಾನ, ಜೊತೆ ಕಾರ್ಯದರ್ಶಿ-ತಾಪಂ ಮಾಜಿ ಸದಸ್ಯ ಸುನಿಲ್ ಜಿ, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಶೇಖರ ಕಡ್ತಲ, ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷೆ ಗೀತಾ, ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಮರಿಸ್ಸಾ ಲೂಸಿ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ವೀಣಾ ಆರನ್ಹಾ, ರೋಸಾ ಮಿಸ್ತಿಕಾ ಪಿಯು ಕಾಲೇಜಿನ ಪ್ರಾಂಶುಪಾಲೆ ಸಿಸ್ಟರ್ ಅನಿತಾ ಲಿಡಿಯಾ, ಡಿಇಡಿ ಪ್ರಾಂಶುಪಾಲೆ ಲವಿನಾ ಲೋಬೊ, ನಿವೃತ್ತ ದೈಹಿಕ ಶಿಕ್ಷಕ ಡೊನಾಲ್ಡ್ ಲೋಬೊ, ಶಿಕ್ಷಕರು, ಶಿಕ್ಷಕೇತರ ವರ್ಗ, ತೀರ್ಪುಗಾರರು, ದೈಹಿಕ ಶಿಕ್ಷಕರು, ಸಹಾಯಕರು ಇದ್ದರು.

ಸಿಸ್ಟರ್ ಮರಿಸ್ಸಾ ಲೂಸಿ ಸ್ವಾಗತಿಸಿದರು. ದೈಹಿಕ ಶಿಕ್ಷಕ ಪ್ರಮೋದ್ ನಿರೂಪಿಸಿದರು. ಗೋಪಾಲ್ ಸಹಕರಿಸಿದರು. ರೋಸಾ ಮಿಸ್ತಿಕಾ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಲ್ಯಾನ್ಸಿ ಸ್ವಿಕೇರಾ ವಂದಿಸಿದರು.

ಪAದ್ಯಾಟದಲ್ಲಿ ಎಡಪದವು, ಕುಪ್ಪೆಪದವು, ಮೂಡುಶೆಡ್ಡೆ, ಮಳಲಿ, ಉಳಾಯಿಬೆಟ್ಟು, ಕಿನ್ನಿಕಂಬಳ, ಮುತ್ತೂರು, ಕೈಕಂಬ ಭಾಗದಪ್ರೌಢಶಾಲೆಗಳ ಖೋ-ಖೋ ತಂಡಗಳು ಆಗಮಿಸಿದ್ದು, ಬಾಲಕರ ವಿಭಾಗದಲ್ಲಿ ೧೧ ಹಾಗೂ ಬಾಲಕಿಯ ವಿಭಾಗದಲ್ಲಿ ೬ ತಂಡಗಳು ಸ್ಪರ್ಧಾ ಕಣದಲ್ಲಿದ್ದವು. ಇಲ್ಲಿ ಗೆದ್ದ ತಂಡಗಳು ತಾಲೂಕು ಮಟ್ಟಕ್ಕೆ ಆಯ್ಕೆಯಾಗಲಿವೆ

By suddi9

Leave a Reply

Your email address will not be published. Required fields are marked *