ಜೂ. ೧೩ರಂದು ವಿಶೇಷ ಪೂಜೆ
ಗುರುಪುರ : ಜೀರ್ಣೋದ್ಧಾರಗೊಳ್ಳಲಿರುವ ಗುರುಪುರದ ಶ್ರೀ ಜಂಗಮ ಮಠದ ನೀಲಕಂಠೇಶ್ವರ ಸ್ವಾಮಿ ದೇವಸ್ಥಾನ ಇದರ ಜೀರ್ಣೋದ್ಧಾರ ಸಮಿತಿ ಮುಂದಾಳತ್ವದಲ್ಲಿ ಜೂ. ೧೩ರಂದು ಶ್ರೀ ದೇವರಿಗೆ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.
ಬೆಳಿಗ್ಗೆ ಗಣಹೋಮ, ಮಧ್ಯಾಹ್ನ ಗಣಪತಿ ದೇವರಿಗೆ ಅಪ್ಪದ ಪೂಜೆ, ನೀಲಕಂಠ ದೇವರಿಗೆ ಸೀಯಾಳಾಭಿಷೇಕ, ಏಕಾದಶ ರುದ್ರ ಪರಾಯಣ ಸಹಿತ ರುದ್ರಾಭಿಷೇಕ, ಅನ್ನಸಂತರ್ಪಣೆ ನಡೆಯಲಿದೆ.
ರಾತ್ರಿ ದುರ್ಗಾ ನಮಸ್ಕಾರ ಪೂಜೆ ಹಾಗೂ ಅನ್ನ ಸಂತರ್ಪಣೆ ಜರುಗಲಿದೆ. ಪೂಜೆಯಲ್ಲಿ ಪಾಲ್ಗೊಳ್ಳುವ ಪ್ರತಿ ಮನೆಯ ಭಕ್ತರು ಶ್ರೀ ದೇವರಿಗೆ ತಲಾ ಒಂದು ಸೀಯಾಳ ಅರ್ಪಿಸಬೇಕು. ರುದ್ರಾಭಿಷೇಕ ಮಾಡಿಸುವವರು ಎರಡು ದಿನ ಮುಂಚಿತವಾಗಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.
