ಪೊಳಲಿ: ಭಜನೆಯೊಂದಿಗೆ ನಮ್ಮ ದೇಶದ ಗಡಿಕಾಯುವ ಯೋಧರನ್ನು ಸ್ಮರಿಸುತ್ತಾ ನಮ್ಮ ಸಂಸ್ಕೃತಿ, ಸಂಸ್ಕಾರ, ಧರ್ಮವನ್ನು ರಕ್ಷಣೆ ಮಾಡುವ ಕೆಲಸಗಳು ನಿರಂತರವಾಗಿ ಆಗಬೇಕಿದೆ ಎಂದು ಪೊಳಲಿ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಸ್ವಾಮಿ ವಿವೇಕಚೈತನ್ಯಾನಂದ ಅವರು ಮಕ್ಕಳಿಗೆ ಕಿವಿ ಮಾತು ಹೇಳಿದರು. ಅವರುಮೇ೧೨ರಂದು ಸೋಮವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ ) ಬಂಟ್ವಾಳ ತಾಲೂಕು ಮತ್ತು ಶ್ರೀ ಧರ್ಮಸ್ಥಳ ಮಂಜುನಾಥಶ್ವರ ಭಜನಾ ಪರಿಷತ್ ಬಂಟ್ವಾಳ ತಾಲೂಕು ಪೊಳಲಿ ವಲಯ ಇವರ ಸಂಯುಕ್ತ ಆಶ್ರಯದಲ್ಲಿ ಪೊಳಲಿ ರಾಮಕೃಷ್ಣ ತಪೋವನದಲ್ಲಿ ೮ ದಿನಗಳ ಮಕ್ಕಳ ಕುಣಿತ ಭಜನಾ ತರಬೇತಿ ಶಿಬಿರದ ಸಮಾರೋಪ ಸಮಾರಂಭವನ್ನು ದೀಪ ಪ್ರಜ್ವಲಿಸಿ ಆಶೀರ್ವಚನ ನೀಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ದಿನೇಶ್ ಪೂಜಾರಿಯವರು ಭಜನೆಯ ಮಹತ್ವ ಮತ್ತು ಸಂಸ್ಕಾರ ಸಂಸ್ಕೃತಿ ಬಗ್ಗೆ ಮಾರ್ಗದರ್ಶನ ನೀಡಿದರು.

ಕಾರ್ಯಕ್ರಮದಲ್ಲಿ ಬಂಟ್ವಾಳ ತಾಲೂಕು ಯೋಜನಾಧಿಕಾರಿ ಜಯಾನಂದ, ಬಂಟ್ವಾಳ ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಮುರಳೀಧರ ಪೊಳಲಿ, ಗ್ರಾಮ ಪಂಚಾಯತ್ ಅಧ್ಯಕ್ಷೆ ರಾಧ ಲೋಕೇಶ್, ಭಜನಾ ತರಬೇತುದಾರ ಸಂದೇಶ, ಆಕಾಶ್, ನಾಟಿ ವೈದ್ಯರಾದ ಎಚ್‌ಎಸ್ ಜನಾರ್ಧನ್, ಭಜನಾ ಪರಿಷತ್ ಜಿಲ್ಲಾ ಸಮನ್ವಯಾಧಿಕಾರಿ ಸಂತೋಷ, ಭಜನಾ ಪರಿಷತ್ ವಲಯ ಕಾರ್ಯದರ್ಶಿ ಕಿಶೋರ್ ಪಲ್ಲಿಪಾಡಿ ಜೊತೆ ಕಾರ್ಯದರ್ಶಿ ತಿರುಮಲೇಶ್ ಒಕ್ಕೂಟ ಅಧ್ಯಕ್ಷರು, ಪದಾಧಿಕಾರಿಗಳು , ಸೇವಾಪ್ರತಿನಿಧಿಯವರು ಭಾಗವಹಿದ್ದರು. ರತ್ನ ಸ್ವಾಗತಿಸಿ ಮೇಲ್ವಿಚಾರಕಿ ಹರಿಣಾಕ್ಷಿ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *