ಕೊಳತ್ತಮಜಲು ಪಂಚಗ್ರಾಮದ ಬ್ರಹ್ಮಶ್ರೀನಾರಾಯಣಗುರುಗಳ ಪ್ರತಿಷ್ಠಾವರ್ದಂತಿ ಉತ್ಸವ
ಬಡಗಬೆಳ್ಳೂರು:ಬಿಲ್ಲವರ ಸಮಾಜ ಸೇವಾ ಸಂಘ ಪಂಚಗ್ರಾಮ (ರಿ) ಬಡಗಬೆಳ್ಳೂರು ಕೊಳತ್ತಮಜಲು ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರತಿಷ್ಠ ವರ್ದಂತಿ ಉತ್ಸವವು ಎ.13 ರಂದು ಭಾನುವಾರ ಶ್ರೀ ಎಂ.ಲೋಕೇಶ್ ಶಾಂತಿ ಅವರ ಪೌರೋಹಿತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಜರಗಲಿದೆ.

ಬೆಳಿಗ್ಗೆಕಲಶಾಭಿಷೇಕ, ಭಜನೆ,ಗುರುಪೂಜೆ ಮತ್ತು ಶ್ರೀ ಸತ್ಯನಾರಾಯಣಪೂಜೆ ಮಧ್ಯಾಹ್ನ 12ರಿಂದ ಮಹಾಪೂಜೆ,ಪ್ರಸಾದ ವಿತರಣೆಮತ್ತು ಅನ್ನ ಸಂತರ್ಪಣೆ ನಡೆಯಲಿದೆ ಎಂದು ಪಂಚಗ್ರಾಮದ ಪ್ರಕಟನೆ ತಿಳಿಸಿದೆ.